ಬೆಂಕಿಯಿಂದ ಚರ್ಮಸುಟ್ಟು ಹೋದಾಗ ಅಥವಾ ಚರ್ಮದ ಕೊಳೆತದಿಂದಾಗಿ, ಒಳಗಿನ ಮಾಂಸ ಹೊರಕಾಣುವಾಗ ಅಥವಾ ಅಪಘಾತ ಇನ್ನಿತರೆ ಅವಘಡಗಳಲ್ಲಿ ಚರ್ಮಕ್ಕೆ ಬಾಧೆಯಾದಾಗ ಆ ಸ್ಥಳಗಳಿಗೆ ಬೇರೆ ಚರ್ಮವನ್ನು ಕವಚ ಗೊಳಿಸಿ (ಜೀವಾಣು) ಗಳ ಕ್ರಿಯೆ ನಡೆಯುವಂತೆ ಮಾಡಲಾಗುತ್ತೆದೆ. ಇಲ್ಲಿಯವರೆಗೆ ಅದೇ ವ್ಯಕ್ತಿಯ ಬೇರೆ ಭಾಗದ ಚರ್ಮವನ್ನು ಸುಲಿದು ಹಾಕುವ ಪದ್ದತಿ ಇತ್ತು ಇನ್ನು ಮುಂದೆ ಮುಂದುವರಿದ ವೈಜ್ಞಾನಿಕ ತಂತ್ರಗಳನ್ನು ಬಳಸಿ ಹೊಸ ಬಗೆಯ ಚರ್ಮವನ್ನೇ ಉತ್ಪಾದಿಸಿ ಕಿತ್ತು ಹೋದ ಭಾಗಕ್ಕೆ ಅಂಟಿಸುವ ತಂತ್ರಜ್ಞಾನ ಬರಲಿದೆ.

ಕ್ಯಾಲಿಫೋರ್ನಿಯಾದ ಜೀವತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ಕೆಲವು ದಿನಗಳಲ್ಲಿ ಇಂಚು ಉದ್ಧ 6 ಇಂಚು ಅಗಲದ ಚರ್ಮದ ಹಾಳೆಗಳನ್ಪು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲಿದ್ದಾರೆ. ಇಂತಹ ಚರ್ಮದ ಹಾಳೆಗಳು ಬೆಂಕಿ ಅಪಘಾತಗಳಲ್ಲಿ ಹಾನಿಗೊಂಡ ಚರ್ಮದ ಮೇಲೆ ಹೊದಿಸಲು ತುಂಬ ಉಪಯುಕ್ತವೆಂದು ಹೇಳುತ್ತಾರೆ. ಕ್ಯಾಲಿಫೋರ್ನಿಯಾದ ಜೋಸೆಪ್ ಮತ್ತು ರಾಬರ್ಟ್ ಅವರು ಅನೇಕ ಪ್ರಯೋಗಗಳನ್ನು ಮಾಡಿ ಕೃತಕ ಚರ್ಮದ ಉತ್ಪಾದನೆಯನ್ನೂ ಕಂಡುಹಿಡಿದಿದ್ದಾರೆ. ಕ್ಯಾಲಿಫೋನಿರ್ಯದ ಉನ್ನತ ಅಂಗಾಂಶ (ATS) ವಿಜ್ಞಾನಿಗಳ ಸಂಸ್ಥೆ ಲಾಜೋಲಾವದಲ್ಲಿ ಜಗತ್ತಿನ ಮೊಟ್ಟಮೊದಲ ಚರ್ಮದ ಕಾರ್ಖಾನೆಯ ಕಟ್ಟಡವನ್ನು ಪೂರ್ಣಗೊಳಿಸಿದ್ದಾರೆ. ಉತ್ಪಾದನೆಯನ್ನು ಆರಂಭಿಸಲು ಸರ್ಕಾರದ ಅನುಮತಿ (AIS)ಗಾಗಿ ಕಾಯುತ್ತಿದೆ.

ಈ ಚರ್ಮವು ಚಪ್ಪಟೆಯಾಕಾರವಾಗಿದ್ದು ಸಂಕೀರ್ಣ ಅಂಗವಾಗಿದೆ ಇದರ ಎರಡು ಪದರುಗಳು ವಿಶೇಷ ಕಾರ್ಯ ನಿರ್ವಹಿಸಲೆಂದೇ ನಿರ್ಮಾಣಗೊಂಡಿವೆ. ಕಳೆದ ದಶಕದಲ್ಲಿ ವಿಜ್ಞಾನಿಗಳು ಅವಿರತವಾಗಿ ಪ್ರಯತ್ನ ನಡಸಿದ್ದು ಈಗ ಫಲಕಾರಿಯಾಗಿದೆ. ಹಾಸಿಗೆಯ ಮೇಲೆ ಸತತವಾಗಿ ಮಲಗಿರುವುದರಿಂದ ಉಂಟಾಗುವ ಗಾಯ (Bedsores) ಹಾಗೂ ಸಕ್ಕರೆ ರೋಗದ (Diabetic Ulsers) ಹುಣ್ಣುಗಳನ್ನು ಗುಣಪಡಿಸಲು ಬಳಸುವ ಚರ್ಮ ಭಾಗಗಳೆಂದಲೇ ವರ್ಷಒಂದಕ್ಕೆ 3 ರಿಂದ 5 ಶತ ಕೋಟಿ ಡಾಲರು ವಹಿವಾಟು ಆಗಲಿದೆ. ಪ್ರಯೋಗಾಲಯದಲ್ಲಿ ತಯಾರಿಸಿದ ಚರ್ಮಕ್ಕೆ ಬೇಡಿಕೆ ಇರುವ ಮತ್ತೊಂದು ಮಾರುಕಟ್ಟೆ ಯೆಂದರೆ ಸುಟ್ಟಗಾಯದ ರೋಗಿಗಳದ್ಭು ಇದರ ಆದಾಯ 30 ಕೋಟಿ ಡಾಲರ್ ಅಗಬಹುದೆಂದು ಯೋಜನೆ ಹಾಕಿಕೊಂಡಿದೆ.

ಇದೇ ತಂತ್ರ ಜ್ಞಾನವನ್ನು ಬಳಸಿ ಮೃದ್ವಸ್ಥಿ (Cartilage) ಮತ್ತು ಸ್ಥಾನದ ಅಂಗಾಂಶಗಳನ್ನು ಪ್ರಯೋಗಾಲಯದಲ್ಲಿ ಉತ್ಪಾದಿಸುವ ಕಾರ್ಯವೂ ನಡೆದಿದೆ.

****