Home / ಲೇಖನ / ವಿಜ್ಞಾನ / ಅಬ್ಬಾ! ಇಂಥದ್ದೊಂದು ಕಾರು ಬರಲಿದೆಯೆ?!

ಅಬ್ಬಾ! ಇಂಥದ್ದೊಂದು ಕಾರು ಬರಲಿದೆಯೆ?!

ಜಗತ್ತನ್ನೇ ಅಂಗೈಯೊಳಗೆ ನೋಡುವ ಕಾಲ ಸನ್ನಿಹಿತವಾಗುತ್ತದೆ. ಈಗಾಗಲೇ ಕಂಪ್ಯೂಟರ್ ಮೂಲಕ ಕುಳಿತಲ್ಲೇ ಜಗತ್ತಿನ ದರ್ಶನವಾಗುತ್ತಲಿದೆ. ಆದರೆ ಚಲಿಸುತ್ತಲೇ ಜಗತ್ತನ್ನು ನೋಡುವ ವಿಜ್ಞಾನ ಇದುವರೆಗೂ ಬೆಳೆದಿರಲಿಲ್ಲ ಆದರೆ ಇತ್ತೀಚಿನ ಶೋಧಗಳಿಂದಾಗಿ ಚಲಿಸುವ ಕಾರಿನೊಳಗೆ ಪವಡಿಸಿಕೊಂಡೇ ಜಗತ್ತಿನ ಮೇಲೆ ಮೂಲೆಗಳನ್ನು ಕೂಡ ಶ್ರವಣ, ದೃಶ್ಯಮಾಧ್ಯಮಗಳಿಂದ ಸಂವಹನ ನಡೆಸಬಹುದಾದ ಕಾರೊಂದು ಇನ್ನೂ ಕೆಲವು ವರ್ಷಗಳಲ್ಲಿ
ಮಾರುಕಟ್ಟೆಗೆ ಬರಲಿದೆ.

ಈ ಕಾರಿನಲ್ಲಿ ಶ್ರವಣ, ದೃಶ್ಯ, ಕಂಪ್ಯೂಟರ್. ಫೋನ್, ಉಪಗ್ರಹ, ಆಂಟೆನಾ ಇತ್ಯಾದಿ ಉಪಕರಣಗಳಿರುತ್ತವೆ. ಇವೆಲ್ಲ ಅಂತರ್ಜಾಲ ವ್ಯವಸ್ಥೆಯಲ್ಲಿ ಪರಸ್ಪರ ಇವುಗಳನ್ನು ಜೋಡಿಸಲಾಗಿದೆ. “ಡೆಲ್‌ಕೋ ಎಲೆಕ್ಟ್ರಾನಿಕ್ಸ್ ಐ.ಬಿ.ಎಂ. ನೆಟ್‌ಸ್ಕೋಪ್ ಮತ್ತು ಸನ್‌ಕಂಪನಿ”ಗಳ ಕೂಟವು ಈ ಹೊಸ ಯೋಜನೆಯ ಕಾರಿಗೆ ರೂಪು ನೀಡಲು ನಿರ್ಧರಿಸಿದೆ. ಒಟ್ಟಾರೆಯಾಗಿ ಈ ಕಾರಿಗೆ ನೆಟ್‌ವರ್ಕ್‌ ವೆಹಿಕಲ್ ಎಂದು ಕರೆಯಲಾಗುತ್ತದೆ. ಈ ಕಾರಿನೊಳಗಿನಿಂದ ವಿಶಿಷ್ಟವಾವ ಮಾತು ಗುರುತಿಸುವ, ಅದರೊಂದಿಗೆ ಸಂಭಾಷಣೆ ಮಾಡುವ ವ್ಯವಸ್ಥೆ ಇದೆ. ಕಾರಿನ ಛಾವಣಿ ಮೇಲೆ ಉಪಗ್ರಹ ಆಂಟೆನಾ ಮತ್ತು ಆಸನಗಳಲ್ಲಿ ಸೇರಿಸಲಾದ ಮಂಚಗಳು, ಇವುಗಳಿಂದ “ಇಂಟರ್‌ನೆಟ್’ ಸಂಪರ್ಕವನ್ನು ಹೊಂದಬಹುದಲ್ಲದೇ ಸೆಲ್ಯೂಲಾರ್ ಫೋನ್ ಮತ್ತು ಹೆಡ್‌ಫೋನ್, ವ್ಯವಸ್ಥೆಗಳಿರುವುದರಿಂದ ಕಾರು ಓಡಿಸುತ್ತಲೇ ಯಾವುದು ಬೇಕಾದುದರೊಂದಿಗೆ ಸಂಪರ್ಕವನ್ನು ಹೊಂದಬಹುದಾಗಿದೆ. ಇದಲ್ಲದೇ ಕಾರಿನಲ್ಲಿ ‘ವೆಬ್‌ಜಾಲ’ ಮತ್ತು ‘ಜಿಯಸ್‌’ಗಳೂ ಕೂಡ ಇರುವುದರಿಂದ ಇವು ಹೊಸ ನಿಯಂತ್ರಣ, ದಾರಿಯ ಸೂಚನೆ ಮತ್ತು ತುರ್ತುಪರಿಸ್ಥಿತಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಬಹುದು. ಒಂದು ವೇಳೆ ಈ ಕಾರು ಕಳವು ಆಯಿತೆಂದರೆ ಇಂಟರ್‌ನೆಟ್ ಸಂಪರ್ಕದ ಮೂಲಕ ದೂರು ನಿಯಂತ್ರಿತವಾಗಿ ಕಾರು ಎಲ್ಲಿ ಇರುತ್ತದೆಯೋ ಅಲ್ಲಿಯೇ ನಿಲ್ಲಿಸಿಬಿಡಬಹುದು. ಅದರ ಯಂತ್ರಗಳನ್ನು ಸ್ಥಬ್ಧಗೊಳಿಸಬಹುದು. ದೀಪಗಳನ್ನು ಆರಿಸಬಹುದು.

ಬಹುಕೃತ ಉಪಯೋಗಗಳು : ಈ ಕಾರು ಎಲ್ಲಿಯಾದರೂ ಹೋಗುವಾಗ ತೊಂದರೆಗೊಳಪಟ್ಟರೆ ಒಂದು ಶಬ್ಧದ ಮೂಲಕ ಸಂದೇಶ ನೀಡಿ ಎಚ್ಚರಿಸುತ್ತದೆ. ಆಗ ಹತ್ತಿರದ ಸೇವಾಕೇಂವ್ರವನ್ನು ಸಹಾಯಕ್ಕಾಗಿ ಕೇಳಬಹುದು. ಆ ಕೇಂದ್ರವು ಪ್ರತಿಯಾಗಿ ದೂರಸಂಪರ್ಕ ವ್ಯವಸ್ಥೆಯಿಂದ ಕಾರಿನ ತೊಂದರೆಯನ್ನು ಪತ್ತೆಮಾಡಿ ಅದಕ್ಕೆ ಸೂಚಿಸುತ್ತದೆ.  ಎಲ್ಲಿಯಾದರೂ ಕಾರು ನಿಂತು ಹೋದರೆ ಪೆಟ್ರೋಲ್ ನಿಲ್ದಾಣ ಅಥವಾ ಹೊಟೆಲ್‌ಗೆ ನಿರ್ದೇಶನ ನೀಡುತ್ತದೆ. ಈಮೇಲ್ ಸಂದೇಶಗಳು ಕರೆಗಳು ಮುಖದ ಮುಂದಿನ ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಆಗ ಬಾಯಿ ಮಾತಿನಿಂದ ಸಂದೇಶಕೊಟ್ಟರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬಾಯಿಮಾತಿನಿಂದಲೇ ಫೋನ್‌ಡೈಯಲ್ ಮಾಡಬಹುದು. ಬೇಕಾದ ರೇಡಿಯೋ ನಿಲಯಗಳನ್ನು ಪಡೆಯಬಹುದು. ಸಂಚಾರದ ಸ್ಥಿತಿಗತಿಗಳನ್ನು, ಸ್ಟಾಕ್ ಮತ್ತು ಷೇರು ಮಾರುಕಟ್ಟೆಯ ದರಗಳನ್ನು ತಿಳಿಯಬಹುದು. ಇಂಟರ್‌ನೆಟ್ ಮೂಲಕ ಜಗತ್ತಿನ ಸುದ್ದಿಸಾರಾಂಶವನ್ನು ಅರಿಯಬಹುದು. ಪ್ರಯಾಣದ ದಾರಿ ಮತ್ತು ಸಮಯಗಳ ಯೋಜನೆಯನ್ನು ಮಾಡಲು ‘ವರ್ಕ್ ಪ್ಯಾಡ್’ ಎಂಬ  ‘ಗಣಕೀಕೃತ’ ವ್ಯವಸ್ಥೆಯೂ ಇದರಲ್ಲಿ ಇರುವುದರಿಂದ ಪ್ರಯಾಣ ಮಾಡುವವರಿಗೆ ಬೇಸರವಾಗಲಾರದು. ಏಕೆಂದರೆ ನೇರವಾಗಿ ಉಪಗೃಹದ ಮೂಲಕ ಆಪ್ತವಾದ ಟಿ.ವಿ. ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಮನರಂಜನೆ. ದಾರಿಸೂಚನೆ, ಕಛೇರಿ ವೆಬ್‌ಜಾಲ ಮತ್ತು ಮಾಹಿತಿಗಳನ್ನು ಪರದೆಯಮೇಲೆ ಸ್ಪರ್ಷಿಸುತ್ತ ಅನುಭವ ಪಡೆಯಬಹುದು. ಸೆಲ್ಯೂಲಾರ್ ಫೋನ್, ಸಿಡಿಪ್ಲೆಯರ್ಸ್, ಇಂಟರ್‌ನೆಟ್. ರೇಡಿಯೋ, ಹವಾಮಾನ ನಿಯಂತ್ರಣ ಎಲ್ಲವನ್ನು ಸ್ಪರ್ಷಿಸುವುದರ ಮೂಲಕ ಮಾಹಿತಿ ದೊರೆಯುತ್ತದೆ.

ಇಂತಹ ಕಾರುಗಳ ಜತೆಗೆ ‘ಕ್ಲಾರಿಯಾನ್’ ಮತ್ತು’ಇಂಟೆಲ್’ ಅವರು ತಯಾರಿಸುವ ಕಂಪ್ಯೂಟರ್ ವ್ಯವಸ್ಥೆಯ ಕಾರುಗಳೂ ಸಹ ಇಂಥದ್ದೆ ಸೇವೆಯನ್ನು ಕೊಡಲಿದೆ. ಮನೆಯಲ್ಲಿಯೇ ಜಗತ್ತು ಕಂಡಂತೆ ಚಲಿಸುವ ಕಾರಿನಲ್ಲಿಯೂ ಜಗತ್ತನ್ನು ಆರಿಸಬಹುದು. ಅಪಘಾತಗಳಂತೂ ಇಂತಹ ಕಾರುಗಳಲ್ಲಿ ಇಲ್ಲವೇ ಇಲ್ಲವೆನ್ನಬಹುದು. ಇನ್ನೇನು ಬೇಕು ಸುಖ ಸಂಸಾರಕ್ಕೆ ?! ಮುಂದುವರಿದ ಜಗತ್ತಿನ ಹೊಸ ಅವಿಷ್ಕಾರಗಳ ಪರಿಣಾಮವಾಗಿ ಹೊಸ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ದಿನನಿತ್ಯ ನಮ್ಮ ಸಂಶೋಧಕರು ನೂತನ ಅವಿಷ್ಕಾರಗಳನ್ನು ಕಂಡುಹಿಡಿಯುತ್ತಲೇ ಇರುತ್ತಾರೆ.
೦೦೦

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...