ಫ್ರಿಜ್‌ನಲ್ಲಿಟ್ಟ ಯಾವುದೇ ಪದಾರ್ಥಗಳು ತಾಜಾತನವಾಗಿದ್ದರೂ ಸ್ವಾದ ಅಥವಾ ರುಚಿಯನ್ನು ಕಳೆದುಕೊಳ್ಳುತ್ತಿರುವುದು ಮಾಮೂಲಿ ಸಂಗತಿ. ತಾಜಾತನವಿದ್ದರೆ ರುಚಿ ಮತು ಸ್ವಾದದಿಂದ ಈ ತಂಗಳು ಪೆಟ್ಟಿಗೆಯಲ್ಲಿಟ್ಟ ಪದಾರ್ಥಗಳಿರಬೇಕೆಂದು ಇದರ ತಯಾರಕರು ಮನಗಂಡರು. ಇದರ ಫಲವಾಗಿ ಹೊಳೆದದ್ದೆಂದರೆ – ಅಂಟಾರ್ಟಿಕಾದ ಹಿಮಗಟ್ಟಿದ ಸಾಗರದಲ್ಲಿ ವಾಸಿಸುವ ಮೀನುಗಳು ತಮ್ಮಲ್ಲಿರುವ ವಿಶಿಷ್ಟ ಪ್ರೋಟಿನಿನಿಂದ ಈ ಚಳಿಯನ್ನು ತಡೆಯುತ್ತವೆ. ಇವುಗಳ ವಂಶಾಣುಗಳನ್ನು ಟೊಮ್ಯಾಟೊದಂತಹ ಹಣ್ಣು ತರಕಾರಿಗಳಿಗೆ ಸೇರಿಸಿದರೆ ಫ್ರಿಜ್ನಲ್ಲಿಟ್ಟ ಹಣ್ಣುಗಳು, ಪದಾರ್ಥಗಳು ಸುದೀರ್ಘ ಅವಧಿಯವರೆಗೆ ರುಚಿ ಕೆಡದೇ ಐಸ್ಗೆ ಸುಕ್ಕುಗಟ್ಟುವುದಿಲ್ಲ ಮತ್ತು ತಾಜಾತನದಿಂದಲೂ ರುಚಿಯಿಂದಲೂ ಇರುತ್ತವೆ. ಇಂಥ ಫ್ರಿಜ್‌ಗಳು ಮಾರುಕಟ್ಟೆಗ ಬಂದಿವೆ.
*****