Day: July 11, 2020

#ಕವಿತೆ

ಎಲ್ಲ ಹುಡುಗಿಯರ ಕನಸು

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಅವ್ವ ಕೇಳೇ ನಾನೊಂದ ಕನಸ ಕಂಡೇ…. ಅವ್ವ ಕೇಳೇ ಕನಸೊಂದ ಕಂಡೆನೆ…. ಮುಂಗೋಳಿ ಕೂಗಿತ್ತು ಮೂಡಲ್ಲಿ ಕೆಂಪಿತ್ತು ಬೆಳ್ಳಿಯೂ ಮರಳಿತ್ತು ಹಕ್ಕಿಯೂ ಹಾಡಿತ್ತು ಮಲ್ಲಿಗೆ ಸಂಪಿಗೆ ಘಮ್ಮೆಂದು ಬಿರಿದಿತ್ತು ಹಾದಿಲಿ ಇಬ್ಬನಿಯು ಮುತ್ತಾಗಿ ಸುರಿದಿತ್ತು. ||ಅವ್ವ|| ಕಣ್ಣರೆಪ್ಪೆ ಬಿಗಿಯೆ ಕದ ತಟ್ಟಿ ಒಳಬಂದ ಕಾರಿರುಳ ಕೆಂಜೆಡೆಗೆ ಚಂದಿರನ ಮುಡಿದಿದ್ದ ಕಾಲ್ಗಜ್ಜೆ ಕುಣಿಸುತ್ತ ಶರಣು ಶರಣು ಅಂದ […]

#ಕಾದಂಬರಿ

ಶಬರಿ – ೧೪

0

ಸೂರ್ಯ ಮಲಗಿರಲಿಲ್ಲ. ಕೈಯ್ಯಲ್ಲಿ ಪುಸ್ತಕ, ಪಕ್ಕದಲ್ಲಿ ಬಗಲುಚೀಲ, ಚಿಂತೆಯ ಮುಖ. “ಸೂರ್ಯ”,-ಶಬರಿ ಮಾತನಾಡಿಸಿದಳು. ಸೂರ್ಯ ತಲೆಯತ್ತಿ ನೋಡಿದ. “ಬಾ, ಶಬರಿ” ಎಂದ. ಶಬರಿ ಬಂದು ಕೂತಳು. ಮೆಲ್ಲಗೆ ಆತನ ಕೈ ಹಿಡಿದುಕೊಂಡಳು. “ನಿಮ್ಮವ್ವನ್ನ ಒಂದ್‍ ಕಿತ ಇಲ್ಲಿಗ್ ಕರ್‍ಕಂಡ್ ಬಾ.” ಸೂರ್ಯ ಮೌನವಾಗಿ ಶಬರಿಯ ಕೈಯನ್ನು ಒತ್ತಿ ಹಿಡಿದ. “ನಂಗಂತೂ ಅವ್ವ ಇಲ್ಲ. ನಿಂಗಾನ ಐತಲ್ಲ. […]

#ಕವಿತೆ

ಜಗತ್ತು @ ೨೦೩೦

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ

ಮರ ಮರ ರಾಮ ರಾಮ ತರವೇಹಾರಿ ತರಕಾರಿ ತಂಪುನೆಲ ತಂಗಾಳಿ ಬರೀ ಸಾಕ್ಷ್ಯಚಿತ್ರ. ಮುಖಕ್ಕೆ ಆಮ್ಲಜನಕದ ಕೋಶ ಹೊತ್ತ ಲಲನೆಯರು ಸಂತೆಯಲ್ಲಿ ಮೈಬಣ್ಣಕ್ಕೊಪ್ಪುವ ಕೋಶದ ಹುಡುಕಾಟದಲ್ಲಿ. ಭೂಮಿಮಗನ ಬೆವರಹನಿ ಸುಡು ಪ್ಲಾಸ್ಟೀಕು ಅಕ್ಕಿಯ ಉಂಡು ದಿನನಿತ್ಯ ಜೀರ್ಣಕ್ರಿಯೆಗೆ ಜಠರ ಟೋನಿಕ್ಕು ರಸ್ತೆಯ ತುಂಬಾ ಊದಿಕೊಂಡ ಹೊಟ್ಟೆ ಕರಳುಗಳ ಮಾಲೀಕರು ಡ್ರೇಸ್ಸಿಂಗು, ಡಯಾಲಿಸಿಸ್ಸು ದುಗ್ಧ ಮನಸ್ಸು. ಮನೆಗಳಿಲ್ಲ […]