“ಲ್ಯಾಟ್ರಿನ್’ ಪದ ಅಸಹ್ಯವಲ್ಲ ದೈನಿಕ ಬದುಕಿನ ಜೀವನಕ್ಕೆ ಅನಿವಾರ್ಯವಾದ ವಸ್ತು ಈಗಾಗಲೇ ಹಳ್ಳಿಯಿಂದ ಊರು, ಪೇಟೆ, ಪಟ್ಟಣ ನಗರಗಳಲ್ಲಿ ಈ “ಲ್ಯಾಟ್ರಿನ್” ಆವಿಷ್ಕಾರಗೊಳ್ಳುತ್ತಾ ಬಂದುದನ್ನು ಕಾಣುತ್ತೇವೆ. ಕೆಲವು ಶ್ರೀಮಂತರ ಮನೆಯಲ್ಲಿ ಲಕ್ಷಾಂತರ ರೂ. ಗಳ ವೆಚ್ಚದಲ್ಲಿ ಆಧುನಿಕ ನಮೂನೆಗಳ ಕಕ್ಕಸು ಕೋಣೆಯನ್ನು ಕಟ್ಟಸಿದವರಿದ್ದಾರೆ. ಇವೆಲ್ಲ ಅಂದ, ಚಂದ, ಸ್ವಚ್ಛತೆಯ ದೃಷ್ಟಿಯಿಂದ ಆಪ್ಯಾಯಮಾನವಾಗಿರಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯ ವೈದ್ಯಕೀಯ ವಿಜ್ಞಾನ ಇಣುಕು ಹಾಕಿದೆ. ಲಂಡನ್ನಿನ ವಿಜ್ಞಾನಿಗಳು ರೂಪಿಸಿದ ಲ್ಯಾಟ್ರಿನ್ ಒಂದು ವರದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಖ್ಯವಾಗಿ ಗರ್ಭಿಣಿಯರು ಮತ್ತು ಡಯಾಬಿಟಿಸ್ ಕಾಯಿಲೆಗಳಿದ್ದವರ ರೋಗಗಳ ವಿವರವನ್ನು ಈ ಮಲ, ಮೂತ್ರಾಲಯ ನೀಡಲಿದೆ. ಇದಕ್ಕೆ ಸ್ವಯಂ ಚಾಲಿತವಾಗಿ
ಜೋಡಿಸಿದ ಮೋಡೆಮ್‌ಗಳು ರೋಗಿಗಳ ಖಾಸಗಿ ವ್ಶೆದ್ಯರಿಗೆ ರೋಗಗಳ ವಿವರಗಳನ್ನು ಇ-ಮೇಲ್ ಮೂಲಕ ಸಂವಹನ ನಡೆಸುತ್ತವೆ. ವರ್ಸ್‌ಟೈಲ್ ಇಂಟರ್ಯಾಕ್ಟಿವ್ ಪಾನ್ (V.I.P) ಎಂದು ಕರೆಯಲ್ಪಡುವ ಈ ಕಕ್ಕಸ್ಸನ್ನು ಮುಂಬರುವ ಜಾಣ್ಮೆಯ ಕಕ್ಕಸುಗಳೆಂದು ಈಗಾಗಲೇ ಉಪಯೋಗಿಸಿದ ರೋಗಿಗಳ ಅಭಿಪ್ರಾಯವಾಗಿದೆ. ಮಕ್ಕಳು ಅಥವಾ ಅಂಗವಿಕಲರು ಈ ಕಕ್ಕಸ್ಸಿನ ಬಳಿಗೆ ಬಂದು ಮಾತನಾಡಿದರೆ ಸಾಕು ಅದು ಅವರಿಗೆ ಅನುಕೂಲವಾಗುವಂತೆ
ಸ್ವಯಂಚಾಲಿತವಾಗಿ ತನ್ನ ವಿನ್ಯಾಸವನ್ನು ಬದಲಿಸಿಕೊಳ್ಳಲಿದೆ. ಧ್ವನಿಗ್ರಹಣ (ಶಬ್ದ ಮಾಡಿದರೆ) ಮಾಡಿದರೆ ಕಕ್ಕಸ್ಸಿ- ನಿಂದ ಇದು ಕೇವಲ ಮೂತ್ರಾಲಯವಾಗಿ ಪರಿವರ್ತನೆಯಾಗುತ್ತದೆ. ಈ ಹೊಸ ಮಾದರಿಯ ಲ್ಯಾಟ್ರಿನ್  ವಿನ್ಯಾಸ- ಗೊಳಿಸಲು 5 ವರ್ಷ ಹಿಡಿದು 8000 ಡಾಲರ್ ಖರ್ಚಾಗಿದೆ. 2006ರಲ್ಲಿ ಈ ಮಾದರಿಯನ್ನು ಮಾರುಕಟ್ಟೆಗೆ ತರಲಾಗುಪುದೆಂದು ಚೆಸ್ಟರ್ ಮೂಲದ ಟ್ವೈಪೋರ್ಡ್‌ ಬಾತ್‌ರೂಮ್ ಕಂಪನಿ ಪ್ರಕಟಿಸಿದೆ.
*****