ನಮ್ಮ ಕ್ರೀಡಾಪಟುಗಳು
ಜಿಂಕೆಯಿಂದ
ಓಟದ ಪಾಠ ಕಲಿತುಕೊಳ್ಳಲಿಲ್ಲ.
ಮರಿಮೀನುಗಳನ್ನು
ಗುರುವೆಂದು ಒಪ್ಪಿಕೊಳ್ಳಲಿಲ್ಲ
ಆನಿಯಿಂದ ಭಾರ ಎತ್ತುವ
ಕಲೆ ಕರಗತಗೊಳಿಸಿಕೊಳ್ಳಲಿಲ್ಲ.
ಹಾಗಾಗಿ ಸಿಯೋಲ್‌ನಲ್ಲಿ
ಒಂದೂ ಪದಕ ಸಿಗಲಿಲ್ಲ.

ಸ್ಯೂಲ್ ಪದ್ಯಗಳು – ೧೯೮೮ರಲ್ಲಿ ಸ್ಯೋಲ್‌ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ನೆನಪಿನಲ್ಲಿ ಬರೆದ ಕವನಗಳು
*****