ನಿನ್ನೊಳಗೊಂದು ಚಿರತೆಯಿತ್ತು
ನಿನಗದು ಪದಕ ತಂದುಕೊಟ್ಟಿತು.
ನಿನ್ನೊಳಗೊಂದು ನರಿಯೂ ಇತ್ತು
ಅದು ನಿನ್ನನ್ನೆ ತಿಂದು ತೇಗಿತು.

ಸ್ಯೂಲ್ ಪದ್ಯಗಳು – ೧೯೮೮ರಲ್ಲಿ ಸ್ಯೋಲ್‌ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ನೆನಪಿನಲ್ಲಿ ಬರೆದ ಕವನಗಳು
*****