Home / ಕರುಳಿನ ವಚನಗಳು

Browsing Tag: ಕರುಳಿನ ವಚನಗಳು

ನನ್ನ ಮದ್ದಾನೆಯೆ! ನಿನ್ನ ತೋಳ ಸೊಂಡಿಲಾಡಿಸಪ್ಪಾ- ಮಗುವೆ! ಆಡು-ಆಡು. ನನ್ನ ಪಾರಿವಾಳವೆ ನಿನ್ನ ಗೋಣನ್ನಾಡಿಸಪ್ಪಾ- ಮಗುವೆ! ಆಡು-ಆಡು. ನನ್ನ ಅರಸಂಚೆಯೆ! ಅಡಿಯಿಡು, ನಡೆ ನಡೆ. ಮಗುವೆ! ಆಡು-ಆಡು ನನ್ನ ಅರಗಿಳಿಯೇ! ತುಟಿ ಬಿಚ್ಚು, ನುಡಿ ನುಡಿ. ಮಗ...

ಬಗೆಬಗೆಯ ಬಗೆಗಳ ಹಗೆಯಲ್ಲಿ ಬಗೆಹರಿಯದಾಗಲು ನಿನ್ನ ನಗೆಮೊಗದ ಮುಖಾಂತರ ನಿನ್ನೆದೆಯ ಗೂಡುಸೇರುವುದು ನನ್ನ ಆಶೆ. ಎಂತೆಂತಹ ಚಿಂತೆಗಳ ಸಂತೆಯಲ್ಲಿ ಹಾದಿ ದೊರೆಯದಾಗಲು ನಿನ್ನ ಭವ್ಯ ಮುಖದ ಮುಖಾಂತರ ನಿನ್ನ ಭವಿಷ್ಯದ ಮುಗಿಲಲ್ಲಿ ಹಾರುವುದು ನನ್ನ ನಿರಾಶ...

ಹಂಗ ಹಿಂಗಿಸಲು ಬಂದೆಯೊ? ಭವವ ಭಂಗಿಸಲು ಬಂದೆಯೊ? ಜಗದಿ ಏತಕ್ಕೆ ಬಂದೆನ್ನ ರಂಗನಾಥಾ! ಮಂಗಲಕೆ ಮಂಗಲವೆ! ತಂಗಲು ಬಂದೆಯೊ-ನನ್ನ ತೊಡೆಯ ಮೇಲೆ? ನನ್ನುಡಿಯ ತೊಟ್ಟಿಲಲ್ಲಿ ಕಾಲಿಟ್ಟ ಕಾರಣವೇನು? ನನ್ನ ಕನಸಿನ ನನೆಯೇ! ನನ್ನ ಕನಸಿನ ಕೆನೆಯೆ! ಹಣ್ಣಾಗುವೆ...

ನನ್ನ ಬಯಕೆಗಳ ಬಸಿರಲ್ಲಿ ಮೊಳೆದ, ನನ್ನ ಒಸಿರಿನ ಬಯಕೆಯಲ್ಲಿ ಹೊಳೆದ ಮುದ್ದು ಮೊಗವೆ! ಬಂದೆಯಾ ಇಂದು ಕಂದನಾಗಿ ನನ್ನೊಡಲಲಿ? ನನ್ನ ಕೂಟದ ಕೋಣೆಯನ್ನು ತೆರೆದು, ನನ್ನ ನೋಟದ ಬಯಲಿನಲ್ಲಿ ಮೆರೆದು ನಿಂದೆಯಾ ಮುಂದೆ-ಮುದ್ದಿನ ತಿದ್ದಿದ ಮೂರುತಿಯಾಗಿ? ಮಾ...

“ಪುಷ್ಪವಿದ್ದಂತೆ ಮೊಗ್ಗೆಯನರ್‍ಪಿಸಿಕೊಂಡ ಶಿವನು! ಪಕ್ವವಾದ ಫಳವಿದ್ದಂತೆ ಕಸುಗಾಯ ಕೊಯ್ಯನು ಶಿವನು! -(ಬಾಲ ಸಂಗಯ್ಯನ ಮರಣ ಕಾಲಕ್ಕೆ ಬಸವದೇವನ ವಿಲಾಪ) ಕೊಳಲಾಗಬಹುದಾಗಿತ್ತು, ಕಳಿಲಿದ್ದಾಗಲೇ ಕಡಿದ ಕಾಳ! ದೇವ! ಮಗುವೆಂದು ತಿಳಿದಿದ್ದೆ ಆದಾ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...