
ಆನೆ ಬಂತೊಂದಾನೆ ಆನೆ ಬಂತೇನೆ ಆನೆಯಷ್ಟೇ ದೊಡ್ಡ ಆನೆ ಸರಿ ತಾನೆ ಭಾರಿ ಕಂಭಗಳಂತೆ ಅದರ ಕೈಕಾಲು ಸೊಂಡಿಲೆಂದರೆ ತೂಗಿ ತೊನೆವ ಬಿಳಲು ದೊರಗು ಮೈ ಗೆರಸೆ ಕಿವಿ ಅದರಂತೆ ಗೋಣು ಏನೊ ಹೇಳಲು ಬಯಸುವಂಥ ಕಿರುಗಣ್ಣು ನೋಡಿದರೆ ಎಲ್ಲರೂ ಹೊರಬೀದಿಗಿಳಿದು ಎಂದಿ...
ಮಿರಿಯಾಲ್ ಮಂಡಿ ಮಿರಿಯಾಲ್ ಮಂಡಿ ಏನೇನ್ ಕಂಡಿ ಮಿರಿಯಾಲ್ ಮಂಡಿ ಕುರುಕಾಯ್ಲ ಬಂಡಿ ಸಾವಿರ ಕಂಡಿ ಬಾಣಲೆ ತಿಂಡಿ ಕರಿಯೋದ್ ಕಂಡಿ ಬಡವನ ಭಾಂಡಿ ಒಡೆಯೋದ್ ಕಂಡಿ ತಿರುಕನ ಥಂಡಿ ಕೊರೆಯೋದ್ ಕಂಡಿ ಸೆಟ್ಟಿಯ ಹುಂಡಿ ಕಟ್ಟೋದ್ ಕಂಡಿ ಹೆಂಡತಿ ಚಂಡಿ ಹಿಡಿಯೋದ...
ಹೆಸರು ಕುಟ್ಟಿಚಾತ ಮಹಾ ಕೆಟ್ಟ ಬೂತ ಒಂದು ದಿನ ಕಾಡಿನಲ್ಲಿ ತಿರುಗಾಡುತಿರುವಲ್ಲಿ ಕಂಡನೊಬ್ಬ ಬಡಗಿ ಕುಳಿತಿದ್ದನಡಗಿ ಅವನ ಎಳೆದು ಹೊರಗೆ ಬೂತ ಹೇಳಿತು ಹೀಗೆ ಎಲವೊ ನರ ಪ್ರಾಣಿ ಮಾಡು ಒಂದು ದೋಣಿ ಇಲ್ಲದಿದ್ದರೆ ನಿನ್ನ ಬೇಯಿಸುವೆನು ಅನ್ನ ಗಡಗಡನೆ ನಡ...
ಇದು ಬುದ್ಧ ಪೂರ್ಣಮಿ ಇದು ಶುದ್ಧ ಪೂರ್ಣಮಿ ಎಲ್ಲ ಪೂರ್ಣಮಿಯಂತಲ್ಲ ಜಗವೆ ತೊಯ್ಪದಲ್ಲ! ಎಲ್ಲರ ಕಣ್ಗಳ ತೆರೆಸಿ ಲೋಕದ ಮಾಯೆಯ ಹರಿಸಿ ಬುದ್ಧ ಜನಿಸಿದಂದು ವೈಶಾಖ ಪೂರ್ಣಮಿಯಿಂದು ಜನ್ಮಾಂತರದಿಂದೆದ್ದ ದುಃಖದ ಮೂಲವ ಗೆದ್ದ ಬುದ್ಧ ಜನಿಸಿದಂದು ವೈಶಾಖ ಪೂ...
ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ ನಡೆದರು ಮುಗಿಯದ ಕಾಡಿನ ಹಾದಿ ಕಾಣಿಸಿತೊಂದು ಗುಡಿಸಲ ಬಿಡದಿ ಮೀಯಲು ಬೆಚ್ಚನೆ ಬಿಸಿ ನೀರಿತ್ತು ಕುಡಿಯಲು ಪನ್ನೀರಿನ ಷರಬತ್ತು ಒಲೆಯ ಮೇಲೊಂದು ಮಾಯಾ ಗಡಿಗೆ ಬಯಸಿದ ತಕ್ಷಣ ಪಾಯಸ...
ದಾರಿ ತಪ್ಪಿದವನೊಬ್ಬ ಬ್ರಾಹ್ಮಣ ಅಲೆಯುತಿದ್ದ ಕಾಡಿನಲ್ಲಿ ಮುಸ್ಸಂಜೆಯ ಸಮಯ ಸಿಕ್ಕಿದ ಯಕ್ಷಿಯ ಬಲೆಯಲ್ಲಿ ಹೆಣ್ಣು ರೂಪದ ಯಕ್ಷಿ ತನ್ನ ಮನೆಗೆ ಕರೆಯಿತು ನಾಳೆ ಹೋದರಾಯಿತೆಂದು ಅವನ ಮನವ ಒಲಿಸಿತು ಊಟ ಕೊಟ್ಟು ಚಾಪೆ ಹಾಕಿ ಮಾತಾಡುತ್ತ ಕುಳಿತಿತು ಕೈಯಲ...
೧ ಶೆರಜಾದೆ ಶೆರಜಾದೆ ಹೇಳೊಂದು ಕತೆಯ ಹೊಗಲಾಡಿಸು ನನ್ನ ಮನಸಿನ ವ್ಯಥೆಯ ಯಾವ ಕತೆ ಹೇಳಲಿ ನಾ ನಿನಗೆ ಇನಿಯ ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ ಯಾರಿಗೂ ತೆರೆಯದ ಮಾಂತ್ರಿಕ ಕೋಟೆ ಆದರೊಳಗೆ ಅವಿತಿಟ್ಟ ಚಿನ್ನದ ಮೂಟೆ ಇಟ್ಟರೆ ಅದರೊಳಗೆ ಚಿನ್ನದ ಮೂಟೆ...














