ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೊಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಯಾರಿಗೂ ತೆರೆಯದ ಮಾಂತ್ರಿಕ ಕೋಟೆ
ಆದರೊಳಗೆ ಅವಿತಿಟ್ಟ ಚಿನ್ನದ ಮೂಟೆ

ಇಟ್ಟರೆ ಅದರೊಳಗೆ ಚಿನ್ನದ ಮೂಟೆ
ಮಾಡುವರು ಯಾರು ಆ ಚಿನ್ನದ ಬೇಟೆ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಏಳು ಸಮುದ್ರಗಳಾಚೆಗೆ ದ್ವೀಪ
ಅಲ್ಲೊಂದು ಜೀವಕ್ಕೆ ಮುಗಿಯದ ಶಾಪ

ಇದ್ದರೆ ಜೀವಕ್ಕೆ ಮುಗಿಯದ ಶಾಪ
ಏನದು ಎಸಗಿದ ಮುಗಿಯದ ಪಾಪ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಕಪ್ಪು ಕೊಳದೊಳಗೊಂದು ಕೋಮಳೆ ಹೂವು
ಆದನು ಕಿತ್ತವರಿಗೆ ಖಂಡಿತ ಸಾವು

ಅದನು ಕಿತ್ತವರಿಗೆ ಬಂದರೆ ಸಾವು
ಎಲ್ಲವನು ನೋಡುವುದು ಹತ್ತಿರದ ಮಾವು


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಆಲದ ಮರದಲ್ಲಿ ನೂರೊಂದು ಕೊಂಬೆ
ಒಂದೊಂದು ಕೊಂಬೆಯಲು ತೂಗುವ ಗೊಂಬೆ

ಒಂದೊಂದು ಕೊಂಬೆಯಲು ತೂಗಿದರೆ ಗೊಂಬೆ
ನೀನೆಂದೂ ನಿನ್ನ ಕಣ್ಣುಗಳ ನಂಬೆ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಮಾಂತ್ರಿಕ ಕೊಟ್ಟಂತ ಮಂತ್ರದ ಕೋಲು
ಅದರಿಂದ ಮುಟ್ಚಿದುದೆಲ್ಲವು ಕಲ್ಲು

ಮುಟ್ಟಿದುದೆಲ್ಲವು ಆದರೆ ಕಲ್ಲು
ಅಡಗುವುದು ಮತ್ತೆ ನಮ್ಮೆಲ್ಲರ ಸೊಲ್ಲು


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಬಲು ದೊಡ್ಡ ಅರಮನೆಯ ಏಳನೆ ಮಹಡಿ
ಅದರೊಳಗೆ ಯಾರಿಗೂ ಗೊತ್ತಿರದ ಕೊಠಡಿ

ಇದ್ದರೆ ಯಾರಿಗೂ ಗೊತ್ತಿರದ ಕೊಠಡಿ
ಹತ್ತಿರ ಸುಳಿದವರ ಹಿಡಿಯುವುದು ಕರಡಿ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಎಲ್ಲಿಗೂ ತೆರೆಯದ ಕಿರಿದಾದ ಬೀದಿ
ಅಲ್ಲಿರುವನೊಬ್ಬ ಭೀಕರ ಮಂತ್ರವಾದಿ

ಇದ್ದರಲ್ಲೊಬ್ಬ ಭೀಕರ ಮಂತ್ರವಾದಿ
ಕಣ್ಣಿಗೆ ಎರಚುವನು ಮಂಕುಬೂದಿ


ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಗೋಡೆಯ ಮೇಲೊಂದು ಕಂಚಿನ ಡೇಗೆ
ಅದರ ಬಾಯೊಳಗೊಂದು ಕಬ್ಬಿಣದ ಕಾಗೆ

ಬಾಯೊಳೆಗಿದ್ದರೆ ಕಬ್ಬಿಣದ ಕಾಗೆ
ತೆಂಗಿನ ಮರದಿಂದ ಬೀಳುವುದು ಸೋಗೆ


ತರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಕಡಲ ತೀರದಲೊಬ್ಬ ಚೆಲುವಿನ ಯುವತಿ
ಕಂಡರೆ ಸೆರೆ ಹಿಡಿವಳೆಂಬುದು ಖ್ಯಾತಿ

ಕಂಡರೆ ಸೆರೆ ಹಿಡಿವಳಾದರೆ ಯುವತಿ
ಇರಲೇಬೇಕವಳೊಬ್ಬ ಮಾಟಗಾತಿ

೧೦
ಶೆರಜಾದೆ ಶೆರಜಾದೆ ಹೇಳೊಂದು ಕತೆಯ
ಹೋಗಲಾಡಿಸು ನನ್ನ ಮನಸಿನ ವ್ಯಥೆಯ

ಯಾವ ಕತೆ ಹೇಳಲಿ ನಾ ನಿನಗೆ ಇನಿಯ
ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ

ಎಂದೆಂದು ಮುಗಿಯದ ಕತೆ ಬೇಕು ನನಗೆ
ಸುಂದರಿಯೊಬ್ಬಳು ಇರಲದರ ಒಳಗೆ

ಸುಂದರಿಯೊಬ್ಬಾಕೆ ಇದ್ದರೆ ಒಳಗೆ
ಎಂದೆಂದು ಮುಗಿಯದ ಕತೆಯೇಕೆ ನಿನಗೆ
*****