Home / Sketch story

Browsing Tag: Sketch story

ಮಸಣದಲ್ಲಿ ಅವರು ಎಷ್ಟೋ ಕಲ್ಲುಗಳನ್ನು ನೆಟ್ಟಿದ್ದರು. ಅವರ ಕುಟುಂಬಕ್ಕೆ ಆಧಾರ ಸ್ತಂಭಗಳಂತೆ ಗೋರಿಕಲ್ಲುಗಳೊಂದಿಗೆ ಬಾಂಧವ್ಯ, ಬಂಧುತ್ವ ಇವರ ಬಾಳಿಗೆ ಬೆಸುಗೆಯಾಗಿತ್ತು. ಇವರ ಮುದ್ದು ಮಕ್ಕಳು ಗೋರಿಕಲ್ಲಿನ ಹಿಂಭಾಗದಲ್ಲಿ ಕಣ್ಣುಮುಚ್ಚಾಲೆ ಆಡುತ್ತ ...

ಸ್ಮಶಾನದಲ್ಲಿ ಅವನು ಹೆಣಗಳನ್ನು ಹೂತಿಡುವ ಕೆಲಸ ಮಾಡುತಿದ್ದ. ಅವನೊಂದಿಗೆ ಮಣ್ಣು ಎತ್ತಿಹಾಕುತ್ತಿದ್ದ ಅವಳ ಮೇಲೆ ಪ್ರೀತಿ ಹುಟ್ಟಿ ಮದುವೆಯಾದ. ಈಗ ಅವರಿಗೆ ಹುಟ್ಟಿದ ಮಗು ಮಸಣದ ಹೂವಾಗಿ ಗೋರಿ ಕಟ್ಟೆಗಳಿಗೆ ಜೀವ ತುಂಬಿ ಬೆಳೆಯುತ್ತಿದೆ. *****...

ಪರಿಸರ ಪ್ರೇಮಿಯಾದ ಆತ ಮನೆಯ ಮುಂದಿನ ಜಾಗದಲ್ಲಿ ಹೊಂಗೆ ಸಸಿ ನೆಟ್ಟು, ಅದನ್ನು ಕಾಪಾಡಲು ಇಟ್ಟಿಗೆ ಗೂಡು ಕಟ್ಟಿಸಿ ನೀರೆರೆಯುತ್ತಾನೆ. ಅದು ಹೆಮ್ಮರವಾಗಿ ಅದರ ತಂಪು ನೆರಳಿನ ಕನಸನ್ನು ಕಾಣುತ್ತಾನೆ. ಧಿಡೀರನೆ ಹದನೈದು ದಿನ ಊರ ಬಿಟ್ಟು ಹಳ್ಳಿಗೆ ಹೋ...

ಮನೆಯ ಮುಂದೆ ಬೃಹದಾಕಾರವಾಗಿ ಬೆಳದ ಮರದಿಂದ ಉದುರುವ ಒಣಗಿದ ಎಲೆ, ಕಡ್ಡಿ ಕಸ, ಹುಳು ಹುಪ್ಪಟ್ಟೆ ಸಹಿಸಲಾರದೆ ಮನೆಯ ಗಂಡು ಮಕ್ಕಳು, ತಂದೆ ಎಷ್ಟು ಬೇಡವೆಂದರು ಕೇಳದೆ ಕಡಿಸಿ ಹಾಕಿದರು. ಶಾಕೋಪ ಶಾಕೆಯಾಗಿ ಹರಡಿ ಹಸಿರು ತಂಪನ್ನು ನೀಡುತ್ತಿದ್ದ ಮರವನ್...

ರಸ್ತೆಯ ಇಕ್ಕೆಲಗಳಲ್ಲಿ ಗುಡಿಸಿಟ್ಟ ಪ್ಲಾಸ್ಟಿಕ್ ಚೀಲಗಳು, ಒಣಗಿದ ಎಲೆಗಳು, ಎಸೆದ ನಾನಾ ರೀತಿಯ ಕಸ ದುರ್ವಾಸನೆ ಬೀರುತ್ತಿತ್ತು. ಏನಾದರು ಆಹಾರ ಸಿಕ್ಕಿತೇ ಎಂದು, ನಾಯಿ ಮೂಸಿ ನೋಡಿ ಮುಂದೆ ಹೋಯಿತು. ಅದರ ಹಿಂದೆಯೇ ಹಂದಿ ಬಂದು ಮೂಸಿನೋಡಿ ಮುಂದೆ ಹ...

ಎರಡು ಹಕ್ಕಿಗಳು ಬಾಳನ್ನು ಬಹುವಾಗಿ ಪ್ರೀತಿಸುತ್ತಾ ಅನಂತ ಪಯಣದಲ್ಲಿ ಸಾಗಿದ್ದವು. “ಒಂದು ಹಕ್ಕಿ ಪೀತಿಯೇ ನನ್ನಗುರಿ” ಎಂದಿತು. ಇನ್ನೊಂದು ಹಕ್ಕಿ “ಜ್ಞಾನವೇ ನನ್ನ ಗುರಿ” ಎಂದಿತು. ಮೊದಲ ಹಕ್ಕಿ ಹೇಳಿತು- “ಪ್...

ಒಂದು ಮಳೆಯ ಹನಿ ತನ್ನ ಪಕ್ಕದಲ್ಲಿದ್ದ ಇನ್ನೊಂದು ಮಳೆ ಹನಿಯನ್ನು ಕೇಳಿತು “ದೇವರು ಎದುರಿಗೆ ಬಂದರೆ ನೀನು ಏನು ವರ ಕೇಳುವೆ?” ಎಂದು. ಮೊದಲ ಮಳೆ ಹನಿ ಹೇಳಿತು- “ಸಾಗರ ಸೇರುವವರೆಗೂ ನನ್ನ ಹನಿ ದೇಹ ಉಳಿಸು” ಎಂದು. &#8...

“ನಾನು ಒಂದು ಬಿಂದುವಾಗಿ ಬಾಳಿ ಸಾಕಾಗಿದೆ” ಎಂದಿತು ಬೇಸತ್ತ ನೀರಿನ ಬಿಂದು. “ನನಗೆ ಪುಟ್ಟ ಬೀಜವಾಗಿ ಬದುಕಲು ದುಸ್ತರವಾಗಿದೆ” ಎಂದಿತು ಬೀಜ. “ನಿನ್ನದು ಅಂತಹುದೇನು ಮಹದಾಕಾಂಕ್ಷೆ? ಎಂದು ಕೇಳಿತು ಬೀಜ. &#822...

ಒಮ್ಮೆ ಸಂಸಾರದಲ್ಲಿ ಬೇಸತ್ತ ಗೃಹಸ್ಥ, ಒಬ್ಬ ಸಾಧು ಹತ್ತಿರ ಬಂದು ಕೇಳಿದ- “ದೈವ ನಮಗೇಕೆ ಕಾಣುವುದಿಲ್ಲ?” ಎಂದು. ಸಾಧು-ಹೇಳಿದ “ನಿನಗೆ ಆಕಾಶದಲ್ಲಿ ತೇಲುವ ಕರಿಮೋಡದಲ್ಲಿ ನೀರು ಕಾಣುತ್ತದಯೇ?” ಎಂದು. “ಇಲ್ಲಾ&...

ಇಬ್ಬರು ಸಾಧಕರಲ್ಲಿ ವಾದ ಉಂಟಾಯಿತು. “ಪರಮಾತ್ಮ ಮೊದಲಾ? ಪ್ರಾರ್ಥನೆ ಮೊದಲಾ?” ಎಂದು. ಮೊದಲ ಸಾಧಕ ಹೇಳಿದ- “ಪ್ರಾರ್ಥನೆ ಮೊದಲು” ಎಂದು. ಎರಡನೆಯ ಸಾಧಕ ಹೇಳಿದ – “ಪರಮಾತ್ಮನಿಲ್ಲದೆ ಪ್ರಾರ್ಥನೆ ಎಲ್ಲಿಂ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...