Home / Roopa Haasan

Browsing Tag: Roopa Haasan

ಆ ವಿಳಾಸವಿಲ್ಲದ ಅಲೆಮಾರಿ ಎಂದಿನಂತೆ ಜನಜಂಗುಳಿಯ ಮಧ್ಯೆ ಸಿಕ್ಕ. ಅವನು ಸಿಗುವುದು ಅಲ್ಲೇ ಆ ಏಕಾಂತದಲ್ಲೇ. ಅದೇಕೋ ಇಂದು ನನ್ನ ಕಂಡವನೇ ತನ್ನ ಜೋಳಿಗೆಗೆ ಕೈ ಹಾಕಿ ತಡಕಿ ಲಾಲಿಪಪ್ಪಿನ ಕಡ್ಡಿಯೊಂದನ್ನು ತೆಗೆದು ಕೈಯಲ್ಲಿ ಹಿಡಿದು ಮುಂಚಾಚಿ, ನಕ್ಕ. ...

ಅಡ್ಡಾಡುತ್ತಾ ದಿಕ್ತಪ್ಪಿ ಬಂದ ತುಂಡಕರು ಕಾಲಿಗೆ ತೊಡರುತ್ತಾ ಮುದ್ದುಗರೆಯುವ ನಿಲುಮೆಗೆ ಕೊಚ್ಚಿ ಹೋಗಿ….. ಸಿಕ್ಕಸಿಕ್ಕೆಡೆ ಇಷ್ಟ ಬಂದಂತೆ ಅಂಡಲೆಯುವ ಜೀವಾತ್ಮವ ನಿಯತಕ್ಕೆ ಕಟ್ಟಿ ಹಾಕುವುದೂ ಹಿಂಸೆಯೇ ಎಂದರಿವಾಗುವ ಕಾಲಕ್ಕೆ ಮೀರುತ್ತದೆ ಕ...

ಹೆಜ್ಜೆ-೧ ಅವನ ದೃಢ ವಿಶಾಲ ಪಾದದ ಮೇಲೆ ಪುಟ್ಟಾಣಿ ಹುಳು ಅಂಗುಲಂಗುಲ ಏರಿ ಪುಟ್ಟ ಪಾದವನೂರಿ ಅತ್ತಿಂದಿತ್ತ ಜೀಕುತ್ತಾ ಜೋಕಾಲೆ. ಅವನ ಪಾದದ ಮೇಲೆ ಅದರ ಪದತಳ. ಒಂದಿಂಚೋ ಎರಡಿಂಚೋ ಮೂರೋ ತಗುಲದೇ ಬಿಟ್ಟೂ ಅಂಟುವ ಆ ಪುಟಾಣಿ ಪಾದ ಭೂಮಿಗಪ್ಪಿದ ಅವನ ಪಾ...

ಅದು ಬಳ್ಳಿಯಂತೆ ಕಾಲಿಗೆ ತೊಡರುತ್ತಾ ಭಯದಂತೆ ಎದೆಯೊತ್ತಿ ಉಸಿರುಗಟ್ಟಿಸುತ್ತಾ ಎತ್ತಲೆತ್ತಲೂ ಕೂರಲೂ ನಿಲ್ಲಲೂ ಬಿಡದೇ ಹಠ ಹಿಡಿದ ಮಗುವಿನಂತೆ ಜೀವ ಹಿಂಡುತ್ತಿತ್ತು. ಪ್ರೀತಿಯಿಂದ ಮೃದುವಾಗಿ ಕಾತರದಿಂದ ರೂಕ್ಷವಾಗಿ ತಬ್ಬುತ್ತಿತ್ತು ಇಂಚಿಂಚೂ ವ್ಯಾ...

ಎಚ್ಚರಾದ ಎಷ್ಟೋ ಹೊತ್ತಿನ ಮೇಲೆ ತೊಡೆಯಲ್ಲಿ ಜೀವಾಡುವ ಗೊಂಬೆ. ಗಾಜಿನೆರಕ ಹೊಯ್ದು ತೆಗೆದದ್ದೋ? ಸ್ಪಟಿಕದ್ದೋ? ಸ್ಪರ್ಶಕ್ಕೆ ನಿಲುಕದ ಬೆರಗು ಇದೇನಿದು? ಪಕ್ಕೆಗಳೆರಡಕ್ಕೆ ಅಂಟಿಕೊಂಡಂತೆ ಕಂಡೂ ಕಾಣದಂತಾ ಎಳಸು ರೆಕ್ಕೆ? ನೆತ್ತಿಯ ಮೇಲೆ ಕೂದಲೊಂದಿಗೇ...

ಧ್ಯಾನವಿಲ್ಲ ತಪವಿಲ್ಲ ಗಾಢನಿದ್ದೆಯಲಿ ಮೈಮರೆತವ ಅಪ್ಪಿತಪ್ಪಿ ಪಕ್ಕಕ್ಕೆ ಹೊರಳಿ ನೇರ ಈ ಮರ್ತ್ಯಲೋಕಕ್ಕೆ ಬಿದ್ದು ನೆತ್ತಿಯೊಡೆದು ಬಾಯ್ಬಿಟ್ಟು ಈ ನೆಲದಂತರಾಳಕ್ಕೂ ಆ ಅನೂಹ್ಯ ಲೋಕಕ್ಕೂ ನಡುವೆ ನಿಸ್ತಂತುವಿನೆಳೆ * ಆಯಾಸ ತುಂಬಿದ ನಿದ್ದೆಗಣ್ಣಿನಲ್ಲ...

ಇಲ್ಲಿ ಈ ಮರ್ತ್ಯಲೋಕದಲ್ಲಿ ಇರುವೆಯಾಕಳಿಕೆ ಮಿಡತೆ ನರಳಿಕೆ ಎರೆ ಹುಳುವಿನ ತೆವಳಿಕೆ ಕ್ಷಣವೂ ಎವೆ ಇಕ್ಕದೇ ದಾಖಲಾಗುವ ಈ ಅನಾದಿಯಲ್ಲಿ ಇರುವೆ ಹೆಜ್ಜೆ ಮೇಲೊಂದು ಹೆಜ್ಜೆ ಮಿಡತೆ ಮೇಲಿನ್ನೊಂದು ಮಿಡತೆ ಸತ್ತ ಎರೆಹುಳುವಿನ ದಾಖಲೆ ಮುರಿಯಲಿನ್ನೊಂದರ ಸಿ...

೧ ಅಲ್ಲಿ ಗಾಢ ವಾಸನೆಯ ಸತ್ತ ಒಣಕಲು ಮೀನು ಕತ್ತರಿಸಿದ ಹೊಗೆಸೊಪ್ಪಿನ ಮುರುಕಲು ತುಂಡು ಸುಟ್ಟ ಸುಣ್ಣದ ಕಲ್ಲು ತುಂಡರಿಸಿ ಬಿದ್ದ ಒಣ ಅಡಿಕೆ ಚೂರು ಗರಿಗುಡುತಿರುವ ಒಣ ಮೆಣಸು ಜಜ್ಜಿ ಬೀಜ ಬೇರ್ಪಡಿಸಿದ ಹುಣಸೆ ಬಿಕರಿಗೆ ಬಿದ್ದಿವೆ ಸತ್ತು ಈ ಜೀವಂತ ನ...

ಭೂಮಿಯಾಳದಲ್ಲಿ ಮಾತ್ರ ಈಜುವ ಪುರಾವೆಗಳಿವೆ ಈ ಮರದ ಬೇರಿಗೆ ಹೆಬ್ಬಂಡೆಯೂ ಮಿದು ಮಣ್ಣಾಗಿ ಹುಡಿ ಹುಡಿಯೂ ಮಿಸುಕುತ್ತದಂತೆ ಕಾಣಲಾರದು ನಮ್ಮಂಥ ಪಾಮರರಿಗೆ! ಈ ಮರದ ಕೊಂಬೆ ಕೊಂಬೆಗಳಲ್ಲಿ ನೇತು ಬೀಳಬಹುದು ಯಾರೂ ಉಯ್ಯಾಲೆಯಾಡಬಹುದು ಹತ್ತಿ ಕುಪ್ಪಳಿಸಿ ...

ಹೂಕೋಸಿನ ರೂಪ ಬಣ್ಣದಲಿ ಮನ ಲೀನ, ಮಲಿನ. ಹೆಚ್ಚುತ್ತಾ ಮೆಚ್ಚುತ್ತಾ ಅದರ ಬುಡದಲ್ಲೇ ಹರಿವ ಪಿತಿಪಿತಿ ಹುಳು ಕಂಡರೂ ಕಾಣದಂತೆ ಚೆಲುವಿನಾರಾಧನಾ ಧ್ಯಾನ ಪೀಠಸ್ಥ ಆದೇಶಕ್ಕೆ ಮಹಾಮೌನ. ದಂಟು ಬೇಳೆ ಬೇಯಿಸಿ ಬಸಿದು ಮೆಣಸು ಮಸಾಲೆ ಖಾರ ಹದ ಬೆರೆಸಿ ಕುದಿಸ...

1234...11

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...