ದಾಖಲಾಗದೇ ನೆನಪಿಗಿಲ್ಲದೇ

ಇಲ್ಲಿ
ಈ ಮರ್ತ್ಯಲೋಕದಲ್ಲಿ
ಇರುವೆಯಾಕಳಿಕೆ
ಮಿಡತೆ ನರಳಿಕೆ
ಎರೆ ಹುಳುವಿನ ತೆವಳಿಕೆ
ಕ್ಷಣವೂ ಎವೆ ಇಕ್ಕದೇ
ದಾಖಲಾಗುವ ಈ ಅನಾದಿಯಲ್ಲಿ

ಇರುವೆ ಹೆಜ್ಜೆ ಮೇಲೊಂದು ಹೆಜ್ಜೆ
ಮಿಡತೆ ಮೇಲಿನ್ನೊಂದು ಮಿಡತೆ
ಸತ್ತ ಎರೆಹುಳುವಿನ ದಾಖಲೆ
ಮುರಿಯಲಿನ್ನೊಂದರ ಸಿದ್ಧತೆ.
ಉದ್ದಾನು ಉದ್ದ
ಸರತಿ ಸಾಲಿನ ವಿಜಯೋನ್ಮಾದದಲ್ಲಿ
ಉರುಳುತ್ತದೆ ಚಕ್ರ
ತಲೆ ಬದಲಾದರೂ ಬದಲಾಗದ ಹಾರ!

ಅಲ್ಲಿ
ಅದರ ತಲೆಗೆ ಅದೇ ಕೊನೆ
ಬೀಜವಿಲ್ಲದ ನಕ್ಷತ್ರ!
ವಂಶೋದ್ಧಾರದ ತೆವಲುಗಳಿಲ್ಲ
ಪೀಳಿಗೆ ಪೀಠಗಳ ಅಮಲುಗಳಿಲ್ಲ
ಕಿರೀಟ ಶಿರೋಭಾರಗಳ ಉರುಲುಗಳೂ ಇಲ್ಲ
ಇಲ್ಲಿಗೇ ಅಂತ್ಯ ಎಲ್ಲ

ದಾಖಲಾಗದೇ ನೆನಪಿಗಿಲ್ಲದೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತಿಯೊಂದು ಕವಿತೆಯೂ ಕವಿತೆಯ ಬಗ್ಗೆಯೇ
Next post ಮಧುರ ಮೈತ್ರಿ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…