Home / K S Narasimhaswamy

Browsing Tag: K S Narasimhaswamy

‘ಮಾಸ್ತಿಯವರಾಸ್ತಿ ಆ ಸಣ್ಣ ಕತೆಗಳೆ’ ಎಂದು ಸಾಂಬಶಾಸ್ತ್ರಿಗಳ ಸಿದ್ಧಾಂತ. ಕೇಶವಮೂರ್ತಿ ‘ಶ್ರೀನಿವಾಸರ ಕವಿತೆ ಒಣ ಗದ್ಯವೇ ’ ಎಂದು ಎಗರಿ ಬೀಳುವನು. ಈ ಸಂಶಯವೆ ಕವಿಕೀರ್ತಿ. ಪರಿಚಿತ ಕವಿಗಳೆಲ್ಲ ಬರಿದೆ ರಾರಾಜಿಪರು ಪ್ರಾಚೀನ ಪ್ರಾರಬ್ಧ ಹೊತ್ತು. ಅ...

ಹುಟ್ಟಿದ್ ಮಳೇ ಹಾಳಾಗ್‌ಹೋಯ್ತು, ಸುಮ್ನೇ ಗುಡುಗಿನ್ ಕೋಡಿ.- ಅಕ್ಕಿ ಬೆಲೇ ಏರ್ತಾ ಹೋಯ್ತು ದುಡ್ಡಿನ್ ಮೊಕಾ ನೋಡಿ. ಅಕ್ಕೀಗಿಂತ ಅಲ್ಲಿದ್ ಕಲ್ಲೆ ಮುತ್ನಂಗಿತ್ತು, ತಣ್ಗೆ! ಕಟ್ಕೊಂಡೋಳ್ಗಿತಿಟ್ಕೊಂಡೋಳೇ ಸುಂದ್ರೀ ಅಲ್ವೆ, ಕಣ್ಗೆ! ಒಲೇ ಕುರ್ಚೀಲನ್ನ...

ಸೀತೆಯೇ ಲೋಕಕ್ಕೆ ತಾಯಿ. ಸಾವಿರ ರಾಮ ತೂಗುವರೆ ಇವಳ ತೂಕಕ್ಕೆ? ರಾಮಾಯಣದ ಅಂಕಿತವೆ ಒಂದು ಅನ್ಯಾಯ ಸೀತೆಯ ಕಥೆಗೆ. ಯಾರಿಗಾ ಸೇತುಬಂಧನ? ಸೀತೆಯ ವ್ಯಥೆಗೆ? ಯಾರಿಗಾ ರಾಕ್ಷಸ ವಿನಾಶ ? ಯುದ್ಧ ಮುಗಿಯಲು, ಸೆರೆತೆರೆದು ಬಂದ ಮಡದಿಯನು ಕೈಹಿಡಿದವನು ಸಂಶಯ...

-೧- ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು; ಬಿಸಿಲು ಉರಿಯುತ್ತಲೇ, ಉರಿಯುತ್ತಲೇ ಇತ್ತು ; ಗುಡುಗಿ ಬಾನ್ ಮಿಂಚುರಿದು ಮಳೆ ಬೀಳುವಂತಿತ್ತು ; ಇನ್ನೊಂದು ನಿಮಿಷದಲಿ ಮಳೆ ಗಾಳಿಯಾಗಿತ್ತು. ಇನ್ನೊಂದು ನಿಮಿಷದಲಿ ಮಳೆ ಗಾಳಿಯಾಗಿತ್ತು ; ಗಾಳಿ ಬೀಸುತ್...

ಮಹಾಭಾರತದ ಮಹಾಮುನಿಗಳಲಿ ದೂರ್ವಾಸ ಅಪೂರ್ವ ನಿನ್ನ ಮಹಿಮೆ. ವ್ಯಾಸ, ಕುವರವ್ಯಾಸ ಕಾಲ ಶಿಲೆಯಲ್ಲಿ ಕಡೆದಿಹರು ನಿನ್ನ ಅಶಾಂತ ಗ್ರೀಷ್ಮ ಮಧ್ಯಾಹ್ನ ಮೂರ್ತಿಯನು. ಆರ್ಯಾವರ್ತ ಒಂದು ಕಾಲದಲಿ ಆಶ್ರಮ ನಿಯಮ ಹದಗೆಟ್ಟು ತ್ಯಾಗದ ಮುಖದ ಮೇಲೆ ಭೋಗದ ಬಂಗು ಬರ...

ಶಿವರಾಮರಾಯರು ಹೆಸರಾಂತ ಲಾಯರು, ವ್ಯವಹಾರ ಭೂಮಿಯಲಿ ಕಾಮಧೇನು; ಬೆಟ್ಟಗಲ ಜರತಾರಿಯಂಚಿನ ರುಮಾಲೇನು, ರಟ್ಟೆಯಷ್ಟೇ ಇರುವ ಮೀಸೆಯೇನು! ಮೇಲ್ಮನೆಯೆ ಮೆಲ್ದನಿಯ ಶಿವರಾಮರಾಯರು. ಮೈಬಣ್ಣ ಕೆಂಪಿನ ಗುಲಾಬಿಯಂತೆ ; ಸತ್ಯವಂತರಿಗಿವರು ಸುಲಭದಲಿ ಲಾಯರು ಇವರಿ...

ಬಳ್ಳಿಯ ಬೆರಳಲಿ ಹೂವೊಂದಿತ್ತು ಉಂಗುರವಿಟ್ಟಂತೆ. ಹೂವಿನ ತುಟಿಯಲಿ ಹನಿಯೊಂದಿತ್ತು ಮುತ್ತೊಂದಿಟ್ಟಂತೆ. ನೀರಿನ ಹನಿಯೇ ಕಾಮನಬಿಲ್ಲಿನ ಕಂಬನಿಯಾಗಿತ್ತು. ಹೂವಿನ ಸುತ್ತಾ ಹರಡಿದ ಹುಲ್ಲಿನ ಹಸುರಿನ ಹಾಸಿತ್ತು. ಹನಿಗಳ ಹಿಡಿಯುತ ಕುಡಿಯುತ ಕೋಗಿಲೆ ಬಾಯ...

ನಕ್ಕಂತೆ ಇರುವ ಸಿರಿಮೊಗವೆ! -ಅದಕೆ ತಕ್ಕಂತೆ ಇರುವ ಕಣ್‌ಬೆಳಕೆ!- ನಿಂತಂತೆ ಕಾಣುವ ನಿರಾತಂಕ ದೀಪವೆ! ಅಂತರಂಗದ ಜೀವ ನದಿಯೆ! ನಕ್ಕಂತೆ ಇರುವ ಸಿರಿಮೊಗವೆ! -ಹೂಗೆನ್ನೆ- ಗುಕ್ಕುವಂತಿರುವ ನೊರೆಹಾಲೆ! ತಂತಿಯಲಿ ಇಂಪು ಹರಿದಂತೆ ಈ ಮನೆಯೊಳಗೆ ಸಂತಸವ ...

ಅಭಿಮನ್ಯು ವಧೆಗೆ ಖತಿಗೊಂಡ ಪಾರ್ಥನ ಕಂಡು ಅಪಾರ ಕೃಪೆಯಿಂದ ಶ್ರೀ ಕೃಷ್ಣ ನೆರವಿಗೆ ಬಂದು ಸುದರ್ಶನವನೆಸೆಯಲಾ ಹಗಲ ಬಾನ್ಗೆ, ಅದು ಮರೆಮಾಡಿತಂತೆ ಆ ಸೂರ್ಯಮಂಡಲವನು. ರವಿ ಮುಳುಗಿ ರಾತ್ರಿಯಾಯಿತು ಎನುವ ಭ್ರಾಂತಿಯಲಿ ತಲೆಯನೆತ್ತಿದ ಜಯದ್ರಥನ ತಲೆ ನಿಮ...

೧ ಗಾಲಿ ಉರುಳಿದಂತೆ-ಕಾಡಿನ ಗಾಳಿ ಹೊರಳಿದಂತೆ- ಬಾನ ದೇಗುಲದ ಬೆಳ್ಳಿ ಗೋಪುರದ ಘಂಟೆ ಮೊಳಗಿದಂತೆ, ಹಾಲು ಕಂಚಿನ ಹೊನ್ನ ಮಿಂಚಿನ ಘಂಟೆ ಮೊಳಗಿದಂತೆ, ಊರ ದಾರಿಯಲಿ ಹೂವ ತೇರಿನಲಿ ಕೃಷ್ಣ ಬರುವನಂತೆ! ೨ ಎತ್ತಿ ನೋಡು ಕಣ್ಣ, ಬಾನಿಗೆ ಹತ್ತಿ ಹೊಳೆವ ಬಣ್...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...