
ಹಸುಮಗಳ ನೀಲಮ್ಮ ಬಸವಗ ಶರಣೆನ್ನ| ನಸಲಿ ಮಾರಗದ ವಡಿಯಾಗ| ಈ ಶರಣವು ಮಾಡಿ| ಹಸಿಗಿ ಬಾಗನ್ನಿ ಗರುಡಽವ ||೧|| ಹಕ್ಕಿ ಹಸಿಗೊಯ್ಯ ಕೋಗಿಲ ಪತ್ತಽಲೊಯ್ಯ| ಅಕ್ಕ ನಾಗಮ್ಮ ಕತೀ ನಡಿಸ| ಈ ಸೋಬಾನಾ| ಸಾಗನೂರವರ ಮನಿಯಾಗ ||೨|| ಆರಸರ ಹೆಂಡಽರ್‍ಯಾ ಅರವತ್ತಿನ ...
ಹಣಿಯೆಂಬೊ ಭಾಂವಕ ಹೆಣಿಯಂದ ದಂಡೀಯ| ಮಗ್ಗಿ ತಿರುವಂದ ಮಲಕೀಲಿ| ಸೋ ಎನ್ನೀರೆ ||೧|| ಹುಬ್ಬಂಬು ಭಾಂವಕ ತಿದ್ದೊಂದ ದಂಡೀಯ| ಗೊನಿಯ ತಿರುವಂದ ಮಲಕೀಲಿ| ಸೋ… ||೨|| ಕಡಗಽವ ಇಡಸ್ಯಾರ ಕಡಗಣ್ಣಿಲಿ ನೋಡ್ಯಾರ| ಕೊಡವೀಗಿ ತಮಗ ವರನೆಂದ| ಸೋ…...
ಬಾಲಿ ತಾ ಮೈನೆರದು ಬಾಗಿಲದಾಗೆ ನಿಂತಾಳ| ಬಾಳೇಲಿ ಹಂಗ ಮಕ ಬಾಡೇ| ಸೋ ||೧|| ಬಾಳೇಲಿ ಹಂಗ ಮಕ ಬಾಡಿ ಅವರವ್ವಾ| ಬಾ ಬಾಲಿನಂದ ಕರದಾಳ| ಸೋ ||೨|| ರಂಬಿ ತಾ ಮೈಯನೆರದ ಅಂಗಳದಾಗ ನಿಂತಾಳ| ನಿಂಬೆಲಿ ಹಾಂಗ ಮಕ ಬಾಡೇ| ಸೋ ||೩|| ನಿಂಬೀಯ ಎಲೀ ಹಂಗ ಮಗ ಬ...
ರನ್ನ ದುಡುಗುಣಿ ಚಿನ್ನದ ಕೊಂಡಿ ಹೊನ್ನಿನಾ ಡಾಬಾ ಇಟ್ಟಿದಳಽ| ಎಣಕೆನಿಲ್ಲದೆ ಮಾಣಿಕಸಽರ ಎದಿಬದಿ ತಾನು ಹಾಕುವಳಽ| ಕಡಿಯ ಕಂಕಣ ಕಮಳದ ಮುಖಿಯ ಹೊಳಿವ ಮುತ್ತಿನ ವಾಲಿಗಳಽ| ಜಯ ಜಯ ಮಂಗಳಽ| ಜಯ ಜಯ ಮಂಗಳಽ| ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೧|| ಕಸ...
ಹಿಂಬಳಿ ಮುಂಬಳಿ ಗಂಧದ ಗೀರಾ ಹೊಂದಿಸಿ ಇಟ್ಟಾಳ ಛೆಂದ ಗಿರಾಕಿ ಜಾತ ಮಲ್ಲಿಗಿ ಜಾಳಿಗಿ ದಂಡಿ ವಾನ್ಯಾಡು ತುರುಬ ಒನಪಿಲಿ ಕಟ್ಟಿ ಖನ್ನಿ ಕೋಮಽಲಿ ಹಸೀಗೇಳಽ ಸೋ ||೧|| ನೀರೆಯ ಬಾವುಲಿ ಲಿಗಿಲಿಗಿನಾಡುತ ಕಾಲುಂಗ್ರ ಪಿಲ್ಲ್ಯಾ ಝಗಝಗ ಹೊಳೆವುತ ಹೊನ್ನಾ-ಭರ...
ಮನಸ ಜೈನರ ಮಡದೆಽ ಬಾಽ ಘನಮನಸಿನ ಗಂಬಿರಳಽ ಬಾಽ ಘನಮನಸೆಂಬೊ ಗರತ್ಯಾರು ಮೆಚ್ಚಿ ನೀಲಽ ಬಾಽಽ ನೀಲಽ ಸೀಲಽಽ ಬಾಽಽ ಸೋಗಿನ ಗೊಂಬೆ ನೀ ಬಾರ ಹೆಸಿಯ ಜಗಽಽಲೀಗೇ ಸೋ ||೧|| ಅನಂದರಾಯರ ಇಗತೇ ಬಾ ಆದಿಪುರುಷರ ಸತಿಯಳು ಬಾ ಅದರ ಮ್ಯಾಲ ಪೂರ್ಮಾ ನೀರ್ಮ್ಯಾಲ ಗು...
ಒಂಭತ್ತು ತಿಂಗಳು ನಿನ್ನ ತುಂಬಿಕೊಂಡು ತಿರುಗೇನಽ| ಹಂಬಲಿಸೀ ನಿನ್ನಽ ಹಡೆದೇನ| ಸೋ || ಹಂಬಲಸೀ ನಿನ್ನಽ ಹಡೆದೇನಽ ಚಿತ್ರದ ಗೊಂಬಿ ನಿನಗೊಪ್ಪಿಸಿ ಕೊಡಲ್ಹ್ಯಾಂಗ| ಸೋ ||೧|| ಹತ್ತು ತಿಂಗಳು ನಿನ್ನಽ ಹೊತ್ತುಕೊಂಡು ತಿರುಗೇನಽ ಮುತ್ತುಽ ಸುರುವಿದರಽ ಬ...
ಐದು ಅಕ್ಷರದಿಂದ ತೆಯದು ಗಂಧಾಽದಿಂದ| ಮಲ್ಲಿಗ್ಹೂವಿಽನ ಕ್ರಮಽದಿಂದ|| ಮಲ್ಲಿಗ್ಹೂವಿಽನ ಕ್ರಮದಿಂದ ತಂಗೆಮ ತನ್ನ| ರಾಯರ ಶೀಪಾದಾಽ ತೊಳಂದಾಳ ||೧|| ರಾಯರ ಮಗಳ ಬಂಽದು ಪಾದಪೂಜಿ ಮಾಡಟಿಸಗೆ| ಪಾದಲಿ ಕಂಡಾಳಽ ಪದಮವ|| ಪಾದಲಿ ಕಂಡಾಽಳೆ ಪದಮವ ರಾಯಿರ ನಿಮ...














