ಯಾವ ಘೋಷ ಇದು ಇದಕ್ಕಿದ್ದಂತೆ ಈ ಕನಕಾಂಬರಿ ಸಂಜೆಯಲಿ ? ತೇಲಿ ಹಾಯುತಿದೆ ಪರಿಮಳದಂತೆ ತುಂಬಿ ಹರಿವ ಈ ಗಾಳಿಯಲಿ ತಾಳಮೃದಂಗದ ಬಡಿತ ಹಬ್ಬುತಿದೆ ಹೃದಯಕೆ ಲಗ್ಗೆಯ ಹೂಡುತಿದೆ ಮೋಹಕ ಗಾನದ ಕಂಠದೇರಿಳಿತ ಜೀವಕೆ...
ಇಂದ್ರಿಯಕ್ಕಿರುವುದೆಲ್ಲ ಅರ್ಧಸತ್ಯದ ಪ್ರಾಪ್ತಿ, ಪೂರ್ಣ ದಕ್ಕವುದಿಲ್ಲ ಪಂಚಭೂತಕ್ಕೆ; ಅರ್ಧಸತ್ಯದ ನೋಟ ಅಜ್ಞಾನಕ್ಕಿಂತ ಕೀಳು, ಪಾಲಾಗಿರುವ ಕಾಳು, ಬೆಳೆದು ಪಡೆಯುವ ಶಕ್ತಿ ಕಳೆದು ಹೋಗಿರುವ ಹೋಳು, ತೆರೆಸರಿಸಿ ದಾಟಿ ಒಳನುಗ್ಗಿ ಪಡೆಯುವುದಕ್ಕೆ ಸಾಧ್ಯವಾಗದ ಬರಡು, ಕಣ್ಣಿದ್ದೂ...
ನಿನ್ನೆ ಹಾಕಿದ್ದೆ ಓಟು ಮತ್ತೆ ಬಂದಿರಿ ಇವತ್ತು! ಏನು ಆಟವೆ ಸ್ವಾಮಿ ? ಮುಂದೆ ಹೋಗಿ, ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ? ನಗುತ್ತಿದ್ದಾರೆ ಎಲ್ಲ, ಮುಂದೆ ಹೋಗಿ. ಅಲ್ಲಿ ಕಾರ್ಗಿಲ್ಲಿನಲ್ಲಿ ಉತ್ತರದೆತ್ತರದಲ್ಲಿ ಯಜ್ಞ ನಡೆಯುತ್ತಿದೆ...
ಹನಿ ಹಾಕಲು ಹೊರಟ ಸಂಜಿ. ಮಳೆ ಬಿದ್ದೂ ಕುಣಿಯದ ನವಿಲು. ಅರ್ಧ ಆಕಾಶವನ್ನೆ ಮುಚ್ಚಿದೆ ಮುಗಿಲು. ಸಮೆದ ಬೆಣಚು ಕಲ್ಲಿನ ತುಂಡು ಚಿಕ್ಕಿ, ಬಾನಿನಲ್ಲಿಲ್ಲ ಒಂದೇ ಒಂದು ಹಕ್ಕಿ ಸ್ತಬ್ಧ ಗಿಡಮರ, ಥಂಡಿಗಾಳಿ, ನೇಸರನಿಲ್ಲದ...
ಸೆಟೆದು ನಿಂತಿದ್ದಾನೆ ಹದಿನಾಲ್ಕು ಹರೆಯದ ಹುಡುಗ ಎರಗಲಿರುವ ಗರುಡ, ಬಾಣ ಖ್ಯಾತ ವಾತ್ಸ್ಯಾಯನರ ಋಷಿಕುಲದ ಹೆದೆಯೇರಿ ಜಿಗಿಯಲರ್ಹತೆಯಿದ್ದ ಜಾಣ. ಹೋಮಧೂಮದ ಗಾಳಿ ವೇದಘೋಷದ ಪಾಳಿ ಎಂದೂ ತಪ್ಪಿರದ ಮನೆ ಈಗ ಖಾಲಿ. ತಾಯಿ, ಎಳೆತನದಲ್ಲೇ...
ಇಲ್ಲಿ ದೂರದ ಪಶ್ಚಿಮಾರ್ಧದಲ್ಲಿ ಅಮೆರಿಕದ ಪಲ್ಲಂಗದಲ್ಲಿ ನಟ್ಟಿರುಳಲ್ಲಿ ಬಿಟ್ಟು ಬಂದದ್ದರ ಕನವರಿಕೆ, ಭಾರತದ ಬೆಳಕಲ್ಲಿ ಹೊಳೆದ ಬಾಲ್ಯದ ಬೆರಗು ಮಧುರ ಮರುಕಳಿಕೆ; "ಅನುಭವವು ಸವಿಯಲ್ಲ ಅದರ ನೆನಪೇ ಸವಿಯು ಅದ ಕದ್ದು ಮೇಯದೇ ಮನವು...
ಎಲ್ಲೇ ಹೋಗಲಿ ನೀರು ಕೆಳಹರಿಯುವುದೇಕೆ? ಎಷ್ಟೇ ಒತ್ತಿದರು ಚಿಲುಮೆ ಮೇಲುಕ್ಕುವುದೇಕೆ ? ಮತ್ತೆ ಮತ್ತೆ ಕಡಿದರು ಮರ ಸಿಟ್ಟು ಸೆಡವು ಮಾಡದೆ ಎಂದಿನ ಹಾಗೇ ಮತ್ತೆ ಫಲ ನೀಡುವುದೇಕೆ ? ನೀರಿಗೆ ಸ್ವಧರ್ಮ ಮುಖ್ಯ...
"ದೇವರೆಂದರೇನು ಅಜ್ಜ, ದೇವರೆಂದರೇನು ? ಹೇಳು ಅವನು ಯಾರು, ಏನು, ತಿಳಿಯಬೇಕು ನಾನೂ" "ಬಾನು ಬುವಿಯ ಕೈಗೆ ಕೊಟ್ಟ ಬೆಳಕಿನೂರೆಗೋಲು, ಜೀವ ಎಂದೊ ಕುಡಿದು ಮರೆತ ತಾಯಿಯೆದೆಯ ಹಾಲು, ಕಲ್ಲು ಮಣ್ಣು ಬಳಸದೇನೆ ಕಟ್ಟಿಕೊಂಡ...