
ಗೊಬ್ಬರ ಮತ್ತಾಹಾರವೊಂದೆ ನಾಣ್ಯದೆರಡು ಮುಖ ಅಬ್ಬರಾತುರಂಗಳಿಲ್ಲದದು ಹಸುರಡುಗೆಮನೆಯೊಳಗೆ ಸುಬ್ಬ ಸೂರ್‍ಯನ ಶಕುತಿಯೊಳಚ್ಚಾಗಿ ದೊರಕುವುದುಚಿತದಲಿ ಗೊಬ್ಬರದ ನಕಲಿಯನೆ ಘನವೆನುತೇನು ಪೇಟೆ ಗಬಿನಲಿ ಹಬ್ಬವೋ ನಕಲಿ ತಿನಿಸಿನಲಿ, ನಾಣ್ಯ ಸೀಳುತಲಿ –...
ಗುರು ಹಿರಿಯರೊಡಗೂಡಿ ಪ್ರಕೃತಿಯ ಕುರಿತಾಡಿ ಅನ್ನದರಿವನು ಮೈಗೂಡಿ ಗರಿತಳೆದೊಂದುಚಿತದುನ್ನದ ಕೃಷಿ ಜಾರಿ ಹೋಯ್ತಲಾ ಕನ್ನದರಿವಿನಲಿ ವಾರಿಯೊಡಗೂಡಿ ಭಾರಿಯಾಳದಲಿ – ವಿಜ್ಞಾನೇಶ್ವರಾ *****...
ಸಾವಯವ ಜೀವ ಕೋಟಿಗದೇ ಸಾವ ಯವದೊಳನ್ನ ಗೊಬ್ಬರವಿಕ್ಕದಲೆ ನಿರವ ಯವವನಿಟ್ಟರದು ತುರ್ತು ಸ್ಥಿತಿಯೆಂದಾಸ್ಪತ್ರೆ ಯೊಳು ಕೃತಕ ರಕುತವ ಕೊಟ್ಟಂತದುವೆ ಜೀವನವೆಂದೊಡದಕಿಂತ ಮೂರ್ಖತೆಯೇನು? – ವಿಜ್ಞಾನೇಶ್ವರಾ *****...
ತರತರದ ಮಲ ಮೂತ್ರ ತರಗೆಲೆಯನುಂಬೆಮ್ಮ ಧರೆಗಿಲ್ಲವಾ ನೈಲಾನು ಪ್ಲಾಸ್ಟಿಕ್‌ಗಳನರಗಿಸುವ ಶಕುತಿ ಜ್ವರ ಬೆಂಕಿಯೇ ಬೇಕದಕೆ, ಮೊದಲೊಳದರ ತ ಯಾರಿಗಾ ಮೇಲೆ ವಿಲೆವಾರಿಗೇರಿಹುದು ಧರೆಯುರಿಯು ಯೂರಿಯಾ ಎಂದರದೆ ಪ್ಲಾಸ್ಟಿಕ್ಕಿನಿನ್ನೊಂದವತಾರ – ವಿಜ್ಞಾ...
ಸಾವಯವವೆಂದೇಕೆ ಬರಿದೆ ಗಳಹುವಿರಿ ನಾವೇನೆಲ್ಲವನು ತಿಂದೇನಾಗಿಹುದೆನ್ನದಿರಿ ಸಾವಯವವೆಂದೊಡದು ಜೀವ ದೇವ ನಿಯ ಮವಿದ ಮೀರಿದರೆ ರಸ್ತೆ ನಿಯಮದವೊಲ್ ಅವಗಣಿಪರೇರಿದರೆ ಅಪಘಾತವೇರುವುದು – ವಿಜ್ಞಾನೇಶ್ವರಾ *****...
ಜೀವವನು ಜೊತೆಗೂಡಿ ಜೀವ ನವನೆಮಗೀವ ಪ್ರಕೃತಿಯೊಳಿಪ್ಪೆಲ್ಲ ಜೀವಿಗಳ ಕೊಲ್ಲುವುದೆ ಕೃಷಿಯೆಂ ಬವಸಕೆ ಬಿದ್ದಿರಲೀ ಯುದ್ಧದೊಳು ಸಾವವರಾರೆಂದು ಆರು ಪೇಳುವುದೆಂತು? – ವಿಜ್ಞಾನೇಶ್ವರಾ *****...
ಜಲದಾಹವತಿಯಾದರದರರ್ಥ ಮಧುಮೇಹವಿ ರಲಾಗ ಸೋಲೆನೆಂದಂತೆ ಅಪಥ್ಯದೊಳಿರಲುಂಟೇ? ಬಲು ವಿಧದ ಕಷ್ಟನಷ್ಟಗಳೆಮ್ಮ ಕೃಷಿಯೊಳಿ ರಲಿದಕೆ ಧನದಾಹ ಕಾರಣವಿದನುಪೇಕ್ಷಿಸಲಳ ವಿಲ್ಲ, ಏಕಬೆಳೆಯಧಿಕ ಬೆಳೆ ಇಳೆಯ ಕಜ್ಜಿಗೆ ಮೂಲ – ವಿಜ್ಞಾನೇಶ್ವರಾ *****...
ಸಾವಯವವೆಂದಾನು ನೂರೊಂದು ಪೇಳ್ವಾಗೆನ್ನ ಜೀವ ಬಂಧುಗಳಬ್ಬರಿಸಿ ಕೇಳ್ವರಾದೊಡೇಂ ನಾವಾ ಕಠಿಣ ಕಲ್ಲಿನ ಯುಗಕಿಳಿಯಬೇಕೇನು? ಸಾವರಿಸಿ ಪೇಳ್ವೆ ನಾವಷ್ಟು ಪೋಗಲಾಗದು ಎಂದೆ ನಾವೀಗ ಪೋಗಬೇಕರ್ಧ ಶತಮಾನ ಹಿಂದೆ – ವಿಜ್ಞಾನೇಶ್ವರಾ *****...
ಖುಷಿಯಿಂದ ನಡೆಯುತಲಿದ್ದ ಶ್ರೀಮಂತ ಕೃಷಿ ಬದುಕಿಂದು ಕಸಿವಿಸಿಯ ಜೈಲು ಹುಸಿಯನುಸುರುವ ತಜ್ಞ ತಾ ಜೈಲರು ಕೃಷ್ಣನೆಂದು ಬರುವನೋ ಎಂದು ಕೃಷಿಯು ಕಾಯುತಿದೆ ನರಕವಾಸದೊಳು – ವಿಜ್ಞಾನೇಶ್ವರಾ *****...
ಅಲ್ಲೊಬ್ಬ ವಿಜ್ಞಾನಿ, ಅಧಿಕಾರಿ, ಕರಣಿಕ, ಪೇದೆ ಮಾಲಿ, ಹಮಾಲಿ, ಇಂತಿಪ್ಪ ಕೃಷಿ ಇಲಾಖೆಯ ತೋಟ ದೊಳೊಂದು ಪೈಸೆಯಾದಾಯವಿಲ್ಲದಿರಲಿಷ್ಟೆಲ್ಲ ಛಲದ ಕೆಲಸಗಳನೊಬ್ಬನೇ ನಿರ್ವಹಿಪ ಹೊಲದ ರೈತಂಗೀ ಮಂದಿ ಕೊಡುವುದೇನು ಮಣ್ಣು ಸಲಹೆ – ವಿಜ್ಞಾನೇಶ್ವರಾ ...













