
ಸೀರೀಯ ಬಿಚ್ಚವ್ವಾ ಸಣಬಾಲಿ ಎದರಾಗ ಏನೈತಿ ನೀ ಖಾಲಿ ||ಪಲ್ಲ|| ತೋರ್ಮುತ್ತು ತೋರೈತಿ ಬೀರ್ಮುತ್ತು ಬೀರೈತಿ ಮುತ್ತೀನ ಮುತ್ತೂ ಒತ್ತೈತೆ ಹತ್ತರ ಹದಚಂದ ಬಿತ್ತರ ಏನ್ಚೆಂದ ಹತ್ತೂರು ಸತ್ತೂರು ಸತ್ತೈತೆ || ೧|| ಸೀರೀಯ ಸಣಗಂಟು ಗಟಿಗಂಟು ಉಟಗಂಟು ನಾ ...
ಶಬುದಾ ಕೇಳಿದಿಯೇನೊ ನೀ ಅಬುದಾ ನೋಡಿದಿಯೇನೊ ||ಪಲ್ಲ|| ರಾತ್ರಿಯ ಜಾತ್ರ್ಯಾಗ ಚುಕ್ಕಿಯ ತೇರ್ತೆರೊ ಜೋರ್ಜೋರೋ ಜೋರೊ ಭಜನೀಯ ಸೂರೋ ||೧|| ಪಾತ್ರದಾ ಪರಹೆಣ್ಣು ಸೂತ್ರದಾ ಸವಿಹೆಣ್ಣು ಕಣ್ ಕಣ್ಣು ಕಣೋ ಹುಣ್‍ಹುಣ್ಣು ಹುಣ್ಣೋ ||೨|| ಮುಗಲಾಗ ಹಗಲಿಲ್ಲ...
ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ ತುರುಬೀನ ಗಿಣಿಯಾಗಿ ಹಾಡ್ಯಾನೆ ಹುಳವಿಲ್ಲ ಪಕಳ್ಯಾಗ ಹುಳಿಯಿಲ್ಲ ಕವಳ್ಯಾಗ ಹುಳುಹುಳು ಹುಡಿಗೀಯ ನೋಡ್ಯಾನೆ ||೧|| ಆ ಗಂಡ ಈ ಗಂಡ ಯಾಗಂಡ ಯಾತಕ್ಕ ಈ ಮಿಂಡ ಹುಚಮುಂಡ ಬಂದಾನೆ ಕತ್ಲಾಗ ಕರಿಬೆಕ್ಕು ಕಣ್ಕಿಸಿದು ಕ...
ಹಿಂಡೇನೆ ಹಣ್ಣು ಹಿಂಡೇನೆ ಉಂಡೇನೆ ಹೋಳ್ಗಿ ಉಂಡೇನೆ ||ಪಲ್ಲ|| ಗಿಣಿಮಾವು ಇನಿಮಾವು ಮಲಗಬು ಈಶಾಡಿ ಆಪೂಸಿ ಪಡಪೋಸಿ ಹಿಂಡೇನೆ ಜಿಬ್ರಣ್ಣು ಜೊಟ್ಟೆಣ್ಣು ಸೊಟ್ಟೆಣ್ಣು ಸವುಳಣ್ಣು ಕಲ್ಮೀಯ ಕಡಮಾವು ಉಂಡೇನೆ ||೧|| ಗೋವೆಯ ಗುಳ್ಹಣ್ಣು ಮಲ್ಲಾಡ ಹುಳಿಹಣ್...
ಕಾಲ್ಮುರುದು ಕೈಯಾಗ ಕೊಡತೇನ ಬೋಸೂಡಿ ಮನಿಮುಂದ ಬಾರಽಽ ನೀವೊಂದಽಽ ||ಪಲ್ಲ|| ನನನಾಯಿ ನನಗಿರಲಿ ನಿನನಾಯಿ ನಿನಗಿರಲಿ ಬಿದ್ದಾಡಿ ಮುಧೋಡಿ ತಿಳಿದಿಯೇನ ಮುಧೋಳ ನಾಯಿನಾ ಜಮಖಂಡಿ ಜಂಭಾರಿ ನಾಬ್ಹಾಳ ಹುಂಭಾರಿ ಮರತಿಯೇನ ||೧|| ನೀನೇನ ತಿಂತೀದಿ ನಾನದನ ತಿ...
ತಿಂದೋಡಿ ತಿರುಗೋಡಿ ಚಿಂದೋಡಿ ಚಂಪಕ್ಕಾ ಮಳೆಯಕ್ಕ ರೊಕಪಕ್ಕ ಉಗ್ಯಾಳೆ ಗುಡುಗೂಡು ಗುಡುಗಮನಾ ಸುಡುಸೂಡು ಸುಡುನಮನಾ ಸೆಕಿಯಲ್ಲಾ ಗಪಗಾರಾ ಮಾಡ್ಯಾಳೆ ||೧|| ನಡತುಂಬ ನಡುಕವ್ವ ತೊಡಿತುಂಬ ತುಡುಗವ್ವ ಗೌರಕ್ಕ ಹೊಲದಾಗ ಬಸರಾಗೆ ಗಂಗಕ್ಕ ಮುಗಲಾಗ ಶೀಗಕ್ಕ ...
ಜೀನ್ಗೊಟ್ಟಿ ನನಹೇಂತಿ ಕೈಕಟ್ಟ ಬಾಯ್ಕಟ್ಟ ತೌರೋರು ಬಂದಾಗ ಹುಂಚಿಪಕ್ಕ ಒಂದಕ್ಕ ಹತ್ತುಂಡಿ ಬುಟಿತುಂಬ ಹೋಳೀಗಿ ಕರಿಗಡಬು ಹೆರತುಪ್ಪ ಚೊಕ್ಕಚೊಕ್ಕ ||೧|| ಗಂಡಗ ಚಮಚೆಯ ತುಪ್ಪಾನ ನೀಡಾಕಿ ಅಣ್ಣಗ ತಂಬೀಗಿ ಸುರುವ್ಯಾಳ ಮಕ್ಳೀಗೆ ಚಟ್ನೀಯ ಕಿರಿಬೆಳ್ಲೆ ಹ...
[ಮಕ್ಕಳ ಹಾಡು] ಅಜ್ಜಯ್ಯ ಗುಜ್ಜಯ್ಯ ಮಜ್ಜೀಗಿ ಕೊಡತೇನ ದಟ್ಟಿಯ ಪುಟ್ಟಿಯ ಕರೆದೊಯ್ಯ ದೊಡ್ಡಜ್ಜ ದೊಡ್ಡಯ್ಯ ತಂಬಾಕು ಕೊಡತೇನ ಪರಕಾರ್‍ದ ಮಮ್ಮಗಳ ಕರೆದೊಯ್ಯ ||೧|| ಬೂರಲ ಮರದಾಗ ಜೋರಾಗಿ ಕರದೇನ ಬುರ್‍ಲಜ್ಜ ಬುರ್ರಂತ ಹಾರ್‍ಹೋದೆ ಗುಡದಾಗ ಕೊಳ್ಳಾಗ ಕ...
(ಮಕ್ಕಳ ಗೀತೆ) ತಾಯಿ- ಇಡ್ಲೀಯ ಗುಂಡಣ್ಣಾ ಚಟ್ನೀಯ ಚಲುವಣ್ಣಾ ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ|| ಮಗ- ಇಡ್ಲೀಯ ನಾನೊಲ್ಲೆ ಚಟ್ನೀಯ ಒಲ್ಲೊಲೆ ಮಾಸ್ತರು ಬೈಬೈ ಬೈಯ್ತಾನಾ ಆ ಸಾಲಿ ಯಾ ಸಾಲಿ ಹಳಸೀದ ಮಸಾಲಿ ಮಾಸ್ತರು ಬಡಿಬಡಿ ಬಡಿತಾನಾ ||೧|| ತಾ...














