Home / Jaanakitanayaananda

Browsing Tag: Jaanakitanayaananda

ಈ ದೇಹವು ನಿನ್ನದೇ ಈ ಪ್ರಾಣವು ನಿನ್ನದೆ| ನನ್ನ ಜೀವನದಲಿ ನೀ ಯಾವ ನಿರ್ಧಾರವನು ನಿರ್ಧರಿಸಿದರೂ ಸರಿಯೇ ನಾನು ನಿನ್ನವನೆಂಬ ಆತ್ಮವಿಶ್ವಾಸವಿದೆ ಎನಗೆ|| ನಾನು ನಿಂತಿಹ ಈ ನೆಲ, ಕುಡಿಯುತಿಹ ಈ ಜಲ ಸೇವಿಸುತಿಹ ಗಾಳಿ ಇದೆಲ್ಲದು ನಿನ್ನದೇ| ನಿನ್ನ ಪಂಚ...

ಏಕೆ ? ಒಳಮನಸ ಮಾತ ಕೇಳುತಿಲ್ಲ ನೀನು?| ಕೇಳಿದರೆ ನಿನಗೆಲ್ಲಾ ಒಳಿತೆಯೇ ಆಗವುದು| ಕೇಳು ನೀನದರ ಮಾತ|| ಒಳಮನಸು ಪ್ರತಿ ಹಂತದಲ್ಲೂ ನಿನ್ನನೆಚ್ಚೆರಿಸಿ ತಿಳಿಹೇಳುವುದು ನೀನು ಮಾಡುತಿಹುದು ಸರಿಯಲ್ಲವೆಂದು| ನೀ ಸರಿಯಾದುದ ಮಾಡಿದರೆ ಅದು ನಿನ್ನ ಆತ್ಮಬ...

ಭಕ್ತನು ನಾನೇ? ನಿನ್ನಂತರಗವ ಅರಿಯದ| ಭಕ್ತನೆಂಬ ಪಟ್ಟ ಬಿರುದುಗಳ ಬಾಚಿಕೊಳ್ಳುವ ಆತುರ, ಬರದಲ್ಲಿರುವ ಆಡಂಬರದಾ ಭಕ್ತನು ನಾನೇ|| ಮೈಮೇಲೆ ರೇಷಮಿ ವಸ್ತ್ರಾ ಕೈತುಂಬಾ ವಜ್ರಾದಾಭರಣ| ಕತ್ತಲಿ ಹೊಳೆಯುವ ಮುತ್ತು ರತ್ನ ಕನಕಾದಿಗಳ ಸರಮಾಲೆ| ಬೆಳ್ಳಿಯ ಜನ...

ಏನೇ ಬಂದರೂ ನೀ ದಯೆತೋರು ನಿನ್ನಾ ದಯೆಯಲಿ ಬಾಳನು ನೀಡು | ಬಾನಿಗೆ ರವಿಕಾಂತಿ ಶೋಭಿಸುವಂತೆ ನನ್ನೀ ಬಾಳಿಗೆ ನೀ ಬೆಳಕಾಗು||ಕೃಷ್ಣಾ|| ಕಷ್ಟವೇ ಬರಲಿ, ಬದುಕಲಿ ಕಾಳಿರುಳ ಕತ್ತಲೆ ಕವಿಯಲಿ| ನಿನ್ನಾಕರುಣೆಯ ಕಿಡಿಯೊಂದಿರಲಿ ಎದುರಿಸಿ ಜಯಿಸುವೆ ಕಠಿಣ ಸ...

ದಯಮಾಡೋ ರಂಗಾ|| ನಿನ್ನಡಿಗಳಿಗೆನ್ನ ಹೃದಯ ಕಮಲವನಿಟ್ಟು ಬರಮಾಡಿಕೊಳ್ಳುವೆ|| ತನುವೆಂಬಾ ಈ ಮನೆಯ ಶುದ್ಧಿಯಮಾಡಿ ಮನವೆಂಬ ಮರ್ಕಟವ ಒಂದೆಡೆ ಕೂಡಿ| ಧ್ಯಾನಿಪೆ ನಿನ್ನನು ಎನ್ನಂತರಂಗದಿ ಪೂಜಿಸಿ|| ಕರಕಮಲದಿಂದಲಿ ಹರಿಭಜನೆಯ ಮಾಡಿ ಕಣ್ಣ ಕಂಬನಿಯಿಂದ ಮಾಲ...

ಬೆಳಗುಜಾವದಲಿ ಹರಿ ನಿನ್ನ ದರ್ಶಿಸೆ ನಯನಾನಂದವು| ಪ್ರಸನ್ನ, ಕರುಣಾಸಂಪನ್ನ ಹರಿ ನಿನ್ನ ಧ್ಯಾನಿಪೇ ಮನಸಿಗೆ ಹರ್ಷಾನಂದವು| ಹರಿ ನಿನ್ನನೆಬ್ಬಿಸುವ ಸುಪ್ರಭಾತವು ಅದುವೇ ಕರ್ಣಾನಂದವು || ಉದಯ ರವಿಯು ನಿನ್ನ ಗುಡಿ ಗೋಪುರದ ಕಾಂತಿಯನು ಬೆಳಗುತಲಿ ದ್ವಿ...

ಏನೆಂದು ಬಣ್ಣಿಸಲಿ ನಾನು ನಿನ್ನ ಏನೆಂದು ವರ್ಣಿಸಲಿ ನಾನು ಆದಿಯು ನೀನೇ, ಅಂತ್ಯವು ನೀನಾಗಿರಲು|| ಕಾಲನು ನೀನು, ಕಾಲಾತೀತನು ನಾನು ಕರ್ತೃವು ನೀನು, ಕರ್ಮಣಿಯು ನಾನು| ಅಜೇಯನು ನೀನು, ಅಜಮಿಳನು ನಾನು ದೈವನು ನೀನು, ದೇಹಿಯು ನಾನು|| ಸಾಗರನು ನೀನು,...

ಏಕೆ ದೂಷಿಸುವೆ ಎನ್ನ? ಎರಡನೆಯದು ಹೆಣ್ಣಾಗಿರುವುದಕೆ| ಹೆಣ್ಣು ಗಂಡು ಬೇಧ ಬಾರದೆನಗೆ ತಾಯಿಯಾಗೆನ್ನ ಪ್ರೀತಿಸುಧೆಯ ಹರಿಸುವೆ ಸದಾ ಹೀಗೆ|| ನಮ್ಮಿಬ್ಬರ ಹಡೆದವಳು ಹೆಣ್ಣಲ್ಲವೇನು? ಹಸಿದು ಅಳುವಾಗ ಕಣ್ಣಕಂಬನಿವರೆಸಿ ಹಾಲುಣಿಸಿ ಹಸಿವ ತಣಿಸಿ ಪ್ರೀತಿಯ...

ಎಲ್ಲ ಮರೆತು ಹೋಗಲಿ ನಿನ್ನ ಪ್ರೀತಿ ಪ್ರೇಮಾ ಪ್ರಣಯ| ಮೋಸದಿಂದ ಹೊರ ಬಂದು ತಿಳಿಯಾಗುತಿದೆ ನನ್ನಯಾ ಹೃದಯ| ಶುದ್ಧಂತರಂಗದಿ ಪ್ರೀತಿಸಿ ನಿನ್ನ ಭಗ್ನವಾಗಿದೆನ್ನ ಹೃದಯ|| ಸ್ನೇಹದಿಂದ ಪ್ರೀತಿ ಬೆರೆತು ಅಂತರಿಕ್ಷಕೆ ಹಾರಿತು ಮನ| ಗಾಳಿಪಟದಂತೆ ಮೇಲಕ್ಕೇ...

ಒಂದೇ ಒಂದು ಬಿಳಿಯ ಕೂದಲು ಬಂದಿತೆಂದು ಏಕಿಷ್ಟು ಬೇಜಾರ ಮಾಡಿಕೂಳ್ಳುವೆ?| ನನಗೆ ನೀ ಇನ್ನೂ ಹದಿನಾರರ ಚೆಲುವೆ ಪ್ರೇಮದಲಿ ಕಾಣಿಸುವುದೇ ವಯಸ್ಸು?|| ನಿನ್ನ ಒಲವು ನಿನ್ನ ಚೆಲುವಿಗಿಂತ ದಿನೇದಿನೇ ಎತ್ತರೆತ್ತರಕ್ಕೆ ಬೆಳೆಯುತಿದೆ| ನಿನ್ನ ಸೌಂದರ್ಯ ತರ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...