Home / ಅವಧ

Browsing Tag: ಅವಧ

ಬಿಳಿಯ ಗೋಡೆಯಲಿ ಬರೆದ ಅಕ್ಷರಗಳು ಮಾಯುವುದಿಲ್ಲ ಬೇಗನೆ ದಾರಿಯಲಿ ನಡೆವವರನ್ನು ನೋಡುತ್ತ ಕುಳಿತುಕೊಳ್ಳುತ್ತವೆ ಸುಮ್ಮನೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾಗುತ್ತ ಹೊಗುತ್ತವೆ ಅರ್ಥವಾಗದಿದ್ದಾಗ ಪ್ರಶ್ನೆಗಳ ರೂಪದಲಿ ಬಹುಕಾಲ ಕಾಡುತ್ತವೆ ಕಾಲ ...

ನವಿಲಿನ ಕಣ್ಣಿನ ಬಣ್ಣವ ಹಿಡಿದು ಮುಳುಗುವ ಸೂರ್ಯನ ಕಿರಣವ ತಡೆದು ಮಾರ್ಗದ ಮಧ್ಯೆ ನಿಲ್ಲಿಸುವವರು ಪೋಸ್ಟರ್ ಬರೆಯುವ ಅನಾಮಿಕರು ರೆಡ್ಡಿಯಂಗಡಿ ಅಟ್ಟದ ಮೇಲೆ ಬಣ್ಣ ಬಣ್ಣಗಳ ಸರಮಾಲೆ ಸಕ್ಕರೆ ಕಾರ್ಖಾನೆಯಲಿ ನಾಳೆಯಿಂದ ಸಂಪು ಅದಕೆಂದೇ ಇಲ್ಲಿ ಇಷ್ಟೊಂದ...

ನನ್ನ ಸಂಕಲನವೆಂದರೆ ನದಿ ಅದರ ಕವಿತೆಗಳೆಂದರೆ ಉಪನದಿಗಳು ಅವು ಎಲ್ಲಿಂದಲೊ ಯಾವ ಮೂಲದಿಂದಲೊ ಹುಟ್ಟಿ ಬಂದಿವೆ-ಎಷ್ಟೊ ನೆಲದಲ್ಲಿ ಎಷ್ಟೊ ಹೊಲದಲ್ಲಿ ಹರಿದು ಬಂದಿವೆ ನನ್ನ ಸಂಕಲನವೆಂದರೆ ವೃಕ್ಷ ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು ಅವು ವಿವಿಧ ದಿಕ...

ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ- ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ- ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು ಪ್ರೀ...

ಬೆಂಗಳೂರಿನ ಸೆರೆಮನೆಯಲ್ಲಿರುವ ಖೈದಿಗೆ ಬೇಕಾದ್ದು ಸಿಗರೇಟಲ್ಲ, ಪುಸ್ತಕವಲ್ಲ, ಪತ್ರಿಕೆಯಲ್ಲ ಮಾತಾಡಲು ಜನರಲ್ಲ, ಪ್ರೇಯಸಿಯಿಂದ ಪತ್ರವಲ್ಲ, ಬೇಕಾದ್ದು ಗರಗಸ! ಆಹ! ಅದೆಷ್ಟು ಮುದ್ದಾದ ಅಕ್ಷರಗಳಿಂದ ಮಾಡಿದ್ದು (ಬೋರ್ಹೆಸ್‌ ನ ಒಂದು ಪದ್ಯ ಓದಿ) **...

ರೂಪಮಹಲಿನ ರಾಣಿ! ತಂದಿರುವೆನಿದೊ ನೂಲೇಣಿ ಬಿಡಿಸಲೆಂದೆ ನಿನ್ನ ಸೆರೆ ಬಂದಿರುವೆ ಕಿಟಕಿ ತೆರೆ ಇಳಿದು ಬಾ ಒಂದೊಂದೆ ಮೆಟ್ಪಲನು ನನ್ನ ಹಿಂದೆ ಹಿಡಿ ನನ್ನ ಕೈಯ ಇದು ಕೋಳಿ ಕೂಗುವ ಸಮಯ ತಲ್ಲಣಿಸದಿರಲಿ ಮನ ಉಳಿದುದೆಲ್ಲವು ಮೌನ ಬಿದ್ದು ದಾರಿಯುದ್ದಕು ತ...

ಈ ಚೌಕಾಂಬದಲಿ ನಿಂತು ಕೇಳುವೆನು ನಾನು ಭಾಗ್ಯ ನಗರವೇ ನಿನ್ನೆ ಭಾಗ್ಯದ ಬಾಗಿಲೆಲ್ಲಿ? ಇಷ್ಟೆತ್ತರದಿಂದ ಕಾಣಿಸುವುದೇನು-ಜನರು ಇರುವೆಗಳಂತೆ, ಟ್ರಕ್ಕುಗಳು, ಬಸ್ಸುಗಳು ಎತ್ತಿನಗಾಡಿಗಳು, ತಲೆಹೊರೆಯ ಮೂಟೆಗಳು ಯಾರೋ ಆಡುತ್ತಿರುವ ಆಟಿಕೆಗಳಂತೆ ಮನುಷ್ಯ...

ನೀರಿಲ್ಲ ನೆರಳಿಲ್ಲ ಹೊರಗೆ ಕಾಲಿಡುವಂತಿಲ್ಲ ಅಂಥ ಕಡು ಬೇಸಗೆಯಲ್ಲಿ ಹಿಮಾಲಯದಿಂದೊಬ್ಬ ಹಿಮ ಮಾನವ ಹೈದರಾಬಾದಿಗೆ ಬಂದು ಕುಳಿತನು ಒಂದು ದೊಡ್ಡ ಬಂಡೆಯ ಮೇಲೆ ಅದೇನು ವಿಚಿತ್ರ! ತಣ್ಣಗಾಯಿತು ಹವೆ ಒಮ್ಮೆಲೆ ಹುಲ್ಲು ಕಮರಿದಲ್ಲಿ ನೆಲ ಬಿರಿದಲ್ಲಿ ಎದ್ದ...

ತಾರನಾಕದ ಚೌಕದಲಿ ನಿಂತು ತಾರೆಗಳನೆಣಿಸಲಾರೆವು ನಾವು ಒಂದೆಡೆ ಮೌಲಾ‌ಆಲಿ ಬೆಟ್ಟ ಇನ್ನೊಂದೆಡೆ ಯಾದ್ಗಿರಿ ಗುಟ್ಟ ಇವುಗಳ ನಡುವೆ ಆರಿಸಬೇಕೆಂದರೆ ಅದು ನಿಜಕ್ಕೂ ಕಷ್ಟ ಬನ್ನಿ, ಕುಳಿತು ಕುಡಿಯುತ್ತ ಮಿರ್ಚಿಭಜಿ ಕಡಿಯುತ್ತ ಸಮಸ್ಯೆಯ ಬಿಡಿಸಿ ಇದು ಇನ್ನ...

ತದೇಕ ಚಿತ್ತದಿಂದ ಎಲಾ ಯುವಕ ನೀನು ಅದೇನ ನೋಡುತ್ತಿರುವೆ ಗಾದೆಮಾತಿನ ಮೀನ ಹೆಜ್ಜೆಗಳನ್ನೋ ಅಥವ ನೀನು ಪ್ರೀತಿಸುವ ಹೆಣ್ಣಿನ ನಿಗೂಢ ಒಳದಾರಿಗಳನ್ನೋ? ತಳಮಳಿಸುವ ಸರೋವರದ ತೆರೆಗಳ ಮೇಲೆ ತೇಲಿ ಬರುತಿರುವ ಛಿದ್ರ ಚಿತ್ರ ತಳೆಯುವುದಾವ ರೂಪ ತಿಳಿಯಲು ನಾ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....