Home / Kannada

Browsing Tag: Kannada

ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು. ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು! ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ ಕಡಲ ಚಿತ್ರವನು ಕಣ್ಣಾಗಿ ಈಜಿದೆವು. ಪ್ರಕ್...

ಹೊಸ ವರ್‍ಷವು ಬರಲಿ ದಿನ ದಿನವೂ ಪ್ರತಿ ಕ್ಷಣವೂ ಹೊಸತನವು ಬಾಳಿಗೆ ಹೊಸ ಚೈತನ್ಯವ ತರಲಿ|| ಹರುಷದಾ ಮೊಗ ಚೆಲ್ಲಿ ವರುಷದ ಕಳೆ ಚಿಗುರಿ ಮುಂಗಾರಂಚಿನ ಇಬ್ಬನಿ ಹನಿ ಪುಟಿದೇಳುವ ಕಾಮನೆ ಹೂವಾಗಲಿ|| ಚಂದ್ರಿಕೆಯಾ ಸಖಿ ಹಸೆಮಣೆಯ ಕಾಂತೆಯರು ಮುತ್ತಿನಾರತಿ...

ಮಾನವ ದೌರ್ಬಲ್ಯಕ್ಕೆ ಅವಶ್ಯಕತೆ ಎನ್ನುವುದು ಒಂದು ದೊಡ್ಡ ಕ್ಷಮೆ ಅಥವಾ ಆಶ್ರಯ. ಇದು ಕಾನೂನನ್ನು ಕಡಿದು ನುಗ್ಗುತ್ತದೆ; ಇಲ್ಲಿ ಶಿಕ್ಷೆಗೆ ಆಸ್ಪದವಿರಬಾರದು. ಕಾರಣ, ಕೃತ್ಯ ಅಥವಾ ಅಪರಾಧ ಆಯ್ಕೆ ಯಾಗಿರದೆ ಅನಿವಾರ್ಯವಾಗಿರುತ್ತಾದ್ದರಿಂದ. -ಬ್ಲೇಸ್...

ಕೋರ್‍ಟಿನಲ್ಲಿ ವಾದ ನಡೆಯುತ್ತಿತ್ತು. ಲಾಯರ್ ೧: “ನೀನೊಬ್ಬ ಕತ್ತೆ” ಲಾಯರ್ ೨: “ನೀನು ನಾಯಿ” ಆಗ ನ್ಯಾಯಾಧೀಶರು ಹೇಳಿದರು. “ವಕೀಲರ ಪರಸ್ಪರ ಪರಿಚಯವು ಆಗಿದೆ. ಇನ್ನೂ ವಾದ ಮುಂದುವರಿಸಬಹುದು.” *****...

ಒಂದು ಕಣ್ಣೀರ ಹನಿ, ಒಂದು ಇಬ್ಬನಿ, ಒಂದು ಮಳೆಹನಿ ಮೂವರು ಗೆಳೆಯರಾದರು. ಕಣ್ಣೀರ ಹನಿ ಹೇಳಿತು- “ನಾನು ಕಣ್ಣು ತುಂಬಿ ಬಂದೆ” ಎಂದು. ಇಬ್ಬನಿ ಹೇಳಿತು- “ನಾನು ಹೂ ಹೃದಯ ತುಂಬಿದೆ” ಎಂದು. ಮಳೆ ಹನಿ ಹೇಳಿತು- “...

ಕನಸುಗಳು ಕತ್ತಲಲ್ಲಿ ಕರಗಿ ಹೋಗಿ ಕಣ್ಣು ಮುಚ್ಚಿ ಕುಳಿತಾಗ ಉತ್ತರವಾಗಿ ಮೆಲ್ಲಗೆ ನಿನ್ನ ಹೆಜ್ಜೆಯ ಸಪ್ಪಳಗಳು ಇರುವೆಗಳಂತೆ ಸದ್ದು ಮಾಡದೇ ಮುಚ್ಚಿದ ಬಾಗಿಲುಗಳ ಸಂದಿಯಿಂದ ಹರಿದು ಬಂದಾಗ ಕಣ್ಣುಗಳ ತುದಿಯಿಂದ ಹನಿಗಳು ಜಾರಿ ಬಿದ್ದವು ಮಂಕಾದಳು ಅಹಲ್...

ಟೊಕಿಯೋ ನಗರದಲ್ಲಿ ವಿಟಮಿನ್ ವಸ್ತ್ರ ನಿರ್ಮಿಸಲಾಗುತ್ತದೆ. ವಿಟಮಿನ್ ಸಿ ಪೂರಕ ಪಟ್ಟಿ ಹೊಂದಿದ ಬಟ್ಟೆ ಟೀಶರ್ಟ್ ಸದ್ಯದಲ್ಲಿಯೆಯೇ ಪೇಟೆಗೆ ಬರಲಿದೆಯೆಂತೆ. ಚರ್ಮದಕಾಂತಿ ಹೆಚ್ಚಿಸಿಕೊಳ್ಳುವ ಉದ್ದೇಶಕ್ಕಾಗಿಯೇ ಈ ವಿಟ್ಯಾಮಿನ್ “ಸಿ” ವಸ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...