Home / Vrushabendrachar Arkasali

Browsing Tag: Vrushabendrachar Arkasali

ಸತ್ಯಲೋಕ ಬೇರೆ, ನಿತ್ಯಲೋಕ ಬೇರೆ ಎರಡನೂ ಕೂಡಿಸುವ ಅದ್ವೈತಿಯ ಮೂರ್ಖತನ ಬೇಡ ಇಲ್ಲಿ ನೀನು ಸರಿಯಾಗಿ ಬಾಳಬೇಕೆಂದರೆ ಸಿಪ್ಪಿ ಬಣ್ಣ ವಾಸನೆ ಹೊಳಪುಗಳು ಬೇರೆ ರಸ, ಬೀಜ, ಭ್ರೂಣ, ಬೇರುಗಳು ಬೇರೆ ಮಣ್ಣು, ಉಬ್ಬ ತಗ್ಗು, ನೀರಾಟ, ಏರಾಟ, ಭೋರಾಟಗಳು ಬೇರೆ...

ಬರ್ರಿ ಹೀಗೇ ದೇಶಾವರಿ, ಮಾತಾಡಾಣ, ನಿಮ್ಮ ಕಡೆ ಮಳೆ ಬೆಳಿ ಹೆಂಗೆ? ಅಷ್ಟೇ! ಎಲ್ಲಾ ಕಡಿಗೂ ದೇಶಾದಾಗೆಷ್ಟು ಪಾರ್ಟಿಗಳನಾ ಇರಲಿ ನಮ್ಮೂರಗೆಳ್ಡೆ ಪಾರ್ಟಿ ನೋಡ್ರಿ ಎಂದೆಂದಿಗೂ, ನಿಮ್ಮೂರಾನ ಪಾರ್ಟಿಗಳು ಎಷ್ಟು ಮನಿ ಮುರದುವು? ಎಷ್ಟು ಬಣವಿ ಸುಟ್ಟು ಎಷ...

ನಮ್ಮ ಕಣ್ಣು ಬಹಳ ಕೆಟ್ಟವು ಸ್ವಾಮೀ, ಒಳ್ಳೆದೆಂಬುದರಲೆಲ್ಲಾ ಕೆಟ್ಟದನೇ ಕಾಣ್ತಾವೆ, ಕೆಟ್ಟ ಕೆಟ್ಟುದರಾಗೇ ಗಟ್ಟಿಯೇನೋ ಕಾಣ್ತಾವೆ, ನೋಡಬಾರದಂಬೋವನೆಲ್ಲ ತಿರುತಿರುಗಿ ನೋಡ್ತಾವೆ, ಹೋಗಬಾರದೆಂಬೆಡೆಯಲ್ಲಿ ಬೇಲಿ ದಾಟಬೇಕಂತಾವೆ ಚೆಲುವಿನ ಸೆಲೆಗಳ ನೋಡು...

ಇವರು ನಮ್ಮವರೇ ನೋಡ್ರಿ ಬಣ್ಣಾ ಸವರಿಕೊಂತ, ಬೆಣ್ಯಾಗೆ ಕೂದ್ಲ ತಗದಂಗೆ ಮುತ್ತಿನಸರ ಪೋಣಿಸಿದಂತೆ ಪಂಪಿಸಿಗೊಂತ ನಾವೂ ನೀವೂ ಒಂದೇ ದೋಣ್ಯಾಗೆ ಪೈಣಾಮಾಡೋರು ನಾವೂ ನೀವೂ ಒಂದೇ ಗರಿಗಳ ಹಕ್ಕಿಗಳು ಅಂತ ಆಗಾಗ ತಬ್ಬಿಕೊಂಡು ತಬ್ಬಿಬ್ಬು ಮಾಡಿಕೊಂತ ಉಬ್ಸಿ ...

ಮಾತುಗಳ ಮೋಡಿಗಳ ಒಳಗಿಣುಕು ಮನೆಗಳ ಕಚೇರಿಗಳ ಖಾನೆ ಖಾನೆ ಏಕತಾನದೊಳಹೊಕ್ಕು ಫೈಲುಗಳ ಸ್ಮೈಲುಗಳ ನಡುವೆ ತಲೆಹುದುಗಿಸಿಕೊಂಡ ನಾಕು ಮಂದಿಯಂತೆ ವೇಷ ಭೂಷಗಳ ಸಿಕ್ಕಿಸಿಕೊಂಡ ದೇಶಾವರಿ ಯೋಗಕ್ಷೇಮದ ಗಿಳಿಯೋದುಗಳ ಸ್ವಲ್ಪ ಅತ್ತತ್ತ ಸರಿಸಿ, ಉರುಳಿಸುವ ಬುರ...

ಯಾವ ಬೋಧೆಯಿಂದಿವನು ಬೋಧಿ ಸತ್ವನಾದಾನು? ಯಾವ ಓದಿನಿಂದಿವನು ವಾದಾತೀತನಾದಾನು? ಯಾವ ಚಿಲುಮೆಯಿಂದ ಇವನ ಕೊರಡು ಚಿಗುರೀತು? ಯಾವ ಒಲುಮೆಯಿಂದ ಇವನಿಗೆ ಬಲ ಬಂದೀತು? ಯಾವ ದಾರಿದೀಪದಿಂದ ಇವನ ಕಗ್ಗಾಡು ಬೆಳಗೀತು? ಯಾವ ಸಾಧನೆಯಿಂದ ಇವನ ಬಾಧಕ ಭಂಗವಾದೀತ...

ಇದು ನಿರಂತರವೂ ರಣರಂಗ, ಇಲ್ಲಿ ಯಾವುದೇ ಒಂದು ಆಯುಧ, ಒಬ್ಬ ವೀರನಾಯಕ, ಒಂದು ವಾಹನ, ಒಂದು ರೀತಿಯ ಕವಚ, ಒಂದು ತಂತ್ರ, ಒಂದು ಕೈಚಳಕ, ಒಂದು ವ್ಯೂಹ, ಒಂದು ಬಗೆಯ ಸೈನ್ಯ, ಒಂದು ನೆರೆಬೆಂಬಲ, ಒಂದು ತಯಾರಿ, ಒಂದು ಯುದ್ಧ ಘೋಷಣೆ, ಒಂದು ಅವಧಿ…...

ಒಂದು ಹೂವು ಇನ್ನೊಂದು ಮುಳ್ಳು ಒಂದು ಬಾನು ಇನ್ನೊಂದು ಭೂಮಿ ಒಂದು ಹಾಲು ಇನ್ನೊಂದು ಹಾಲಾಹಲ ಒಂದು ಹುಲ್ಲು ಇನ್ನೊಂದು ಕಲ್ಲು ಒಂದು ಅಮರಗಾನ ಇನ್ನೊಂದು ಘೋಷಣ ಒಂದು ರಸಜೇನು ಇನ್ನೊಂದು ಒಣಕಾನು ಒಂದು ತಿಳಿನೀರು ಇನ್ನೊಂದು ಗೊಡಗು ಕೆಸರು ಒಂದು ಕೂಸ...

ಗಾಳಿಪಟದ ಹಾರಾಟವ ನಿಯಂತ್ರಿಸುವ ಹುಡುಗನ ಕೈ ಕರುವಿನ ಮೇಯುವಿಕೆಯನ್ನು ನಿಯಮಿಸುವ ಗೂಟ ತಾಯಿಯ ತಿರುಗಾಟವನ್ನು ತಡೆಯುವ ಕರು ಹಡಗಿನ ವೇಗವನ್ನು ಕುಂಠಿಸುವ ಸಾಗರದಲೆ ಹಕ್ಕಿಯ ಹಾರಾಟವನ್ನು ಸೋಲಿಸುವ ಬಾಹುಮೂಲಪ್ರಾಣ ಚಿಗುರು ಛತ್ರಿಯ ಗಟ್ಟಿ ಹಿಡಿಕೆ ತ...

ಅಗೊ ಹೋಗುತ್ತಿವೆ ನೋಡಿ ನೋಟುಗಳ ಸಾರೋಟುಗಳು ಹಣದ ಹೆಣಗಳ ಮೆರವಣಿಗೆಗಳು ರಣಹದ್ದುಗಳ ಕಾಲುಗುರು ಕೊಕ್ಕುಗಳು ಗಂಟೆ ಜಾಗಟೆಗಳ ಶಂಖವಾದ್ಯಗಳು ಜುಟ್ಟು ಜನಿವಾರ ಸಿವುಡುಗಂಟುಗಳು ನಾಮ ಪೇಟಗಳ ಪೇಟೆ ಮಾಮೂಲು ಮಾಲುಗಳು ಬರೀ ಮೈಯಲ್ಲಿ ಹುಟ್ಟುಬಟ್ಟೆಯಲ್ಲೇ ...

1...1112131415...28

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....