ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು? ಹದವರಿಯಲು ಹುಡುಕುತಲಿರುವೆ ಎಲ್ಲಿಯೂ ನೀ ಕಾಣದೆ ಇರುವೆ. ಮನ ಲಾಯಕೆ ಬಾ ಹಯವೆ ಹೃದಯ ಹುಲ್ಲುಗಾವಲ ಮೇಯಲು, ಕಾಡುತಿದೆ ಭವದ ಭಯವು ಭವ ಸಾಗರದಲಿ ಹೃದಯ ಲಹರಿ ಹುಡುಕುತಿದೆ ...
ಶ್ರೀರಮಣ ಸರ್ವೇಶ ವಾರಿಜಾದಳನಯನ ಮಾರಹರಪಿತನ ಮಂದಹಾಸವದನ ಸಾರಿದೆನು ನಾ ನಿನ್ನ ಸಾಕ್ಷತ ಹರಿಚಕ್ರದ ರಮಣ ಸಾರಿದೆನು ನಾ ನಿನ್ನ ದೂರದಲಿ ದ್ರೌಪದಿಯು ಕೃಷ್ಣ ಅಸು- ರಾರಿ ಎಂದೊದರೆ ಆಭಿಮಾನವನು ಕಾಯ್ದಿ ||೧|| ಮೀರಿದ ಕಾಡ್ಗಿಚ್ಚು ಪರಿಹರಿಸಿ ಗೋವುಗಳ ...
ವಿಶೇಷ ಉತ್ಸವಗಳು: ಸಾರ್ವಭೌಮನ ಉತ್ಸವ (ಮಳೆಗಾಲ ಬಿಟ್ಟು) ಪ್ರತಿ ಸೋಮವಾರ ಸಾಯಂಕಾಲ ಶ್ರೀ ವೆಂಕಟರಮಣ ದೇವಾಲಯದವರೆಗೆ ಬರುತ್ತದೆ. ಶ್ರೀ ದೇವರು ಕೂರುವ ಜಾಗಕ್ಕೆ ’ಸೋಮವಾರ ಪೌಳಿ’ ಎನ್ನುವರು. ಉತ್ಸವ ಹೋಗುವಾಗ ಮನೆಯವರು ದೇವರಿಗೆ ಆರತಿ ಕೊಡುವರು. ಆ...
ಜಯ ಜಯತು ಜಗದಾಂಬೆ ಭಕ್ತರ ಕುಟುಂಬೆ ಜಯ ಜಯತು ಜಗದಾಂಬೆ ಸಾಂಬೆ ತ್ರಯ ಜಗವನೆಡಬಿಡದೆ ತುಂಬೆ ನಯ ವಿನಯಗುಣ ಗಣಕದಂಬೆ ಭಯ ಭಕ್ತಿಯಿಂ ಬೇಡಿಕೊಂಬೆ ||ಅ.ಪ|| ಏನು ಇಲ್ಲದಲಂದು ಓಂಕಾರ ಪ್ರಣಮದಿ ನೀನು ಮೂಲದಿ ಬಂದು ಅ-ಉ-ಮಾಕಾರವೆ ಸಾನುರಾಗದಿ ನಿಂದು ಜ್ಞಾ...
ಸಾಹಿತ್ಯ ಲೋಕದಲ್ಲಿ ಆ ವಿಮರ್ಶಕನಿಗೆ ದೊಡ್ಡ ಗೌರವವಿತ್ತು. ಪೌರ್ವಾತ್ಯ, ಪಾಶ್ಚಿಮಾತ್ಯ ಲೇಖಕರ ಕೃತಿಗಳನ್ನು ಆಳವಾಗಿ ಓದಿಕೊಂಡಿದ್ದ ಅವನನ್ನು ವಿಮರ್ಶೆಯಲ್ಲಿ ಮೀರಿಸುವವರೇ ಇರಲಿಲ್ಲ. ಒಮದು ಕೃತಿ ಬಿಡುಗಡೆಯಾಗಿ ಕೈಸೇರುತ್ತಲೆ ಅದರ ಜನ್ಮ ಜಾಲಾಡುವ,...
ಪ್ರೇಮದ ಬಾವಿಯ ತಿಳಿನೀರ ಕುಡಿಯಬೇಕು ಬಿದ್ದು ಒಳ ಆಳ ನೋಡುವುದು ಬೇಡ *****...
ಹುಣ್ಣಿಮೆಯಿಂದ ಪಾಡ್ಯ ಪಾಡ್ಯದಿಂದ ಬಿದಿಗೆ ಅಂಶ-ಅಂಶ ಕರಗಿ ಅಮಾವಾಸ್ಯೆ ಇನ್ನಿಲ್ಲವಾಗಿಬಿಟ್ಟ ಚಂದ್ರ ಬರುವುದಿಲ್ಲ ಇನ್ನು ಇದೇ ಹದಿನೈದು ದಿನಗಳ ಹಿಂದೆ ಈ ಆಕಾಶ ತಾರೆಗಳ ಹೂಹಾರ ತೊಡಿಸಿ ಚಂದ್ರನ್ನ ಸನ್ಮಾನಿಸಿತ್ತು, ಪೂರ್ಣಚಂದ್ರನ ತುಂಬು ನಗೆ ತುಂ...
ಹನುಮಂತ ಭೂಪಾ ಸದ್ಗುಣಮಣಿ ಶಾಂತರೂಪಾ || ಪ || ಹನುಮಂತ ಮಹಾಮುನೀಶ ವಾಯು ತನಯ ವಾನರೇಂದ್ರ ವನಚರ ಶುಭಕಿರಣ ವಿಹಾರನು ಮಹಿಮಾಗಾರಾ ಅಂಜನೀಕುಮಾರಾ ಸುಜನೋದ್ದಾರಾ ಕುಜನೋತ್ಪಾಲನಾ ಹೋ ಭಕ್ತಪ್ರಾಣ ಪಂಚಪ್ರಾಣಾ ನಮಸ್ತುತೆ ಕ್ಷೋಣಿಪಾಲ ರಘುಚರಣ ಸೇವಕಾ ಕಪಿ...
ಬಸವೇಶ್ವರನ ಒಂದು ಪಾದವ ರುದ್ರ ಪಿಡಿದನು ಬಸವೇಶ್ವರನ ಒಂದು ಪಾದವ ವಿಷ್ಣು ಪಿಡಿದನು ಬಸವೇಶ್ವರನ ಒಂದು ಪಾದವ ತೆತ್ತೀಸಕೋಟಿ ದೇವತೆಗಳು ಪಿಡಿದರು ಬಸವೇಶ್ವರನೇ ಸಕಲ ಜಗವನು ನಾಲ್ಕುಯುಗದಿ ಸಲಹುವನು ನಂದಿ ಜಯ ಜಯ ಎನುತಲಿಪ್ಪರು ಗಂಗಾ ಪಾರ್ವತಾದೇವಿಯರ...
ತಾಳಲಾರೆ ತಗಣಿಕಾಟವಾ ಶಿವಹರನು ಬಲ್ಲ ತಾಳಲಾರೆ ತಗಣಿಕಾಟವಾ ||ಪ|| ತಾಳಲಾರೆ ತಗಣಿಕಾಟಾ ಘನಘೋರ ಇದರಾರ‍್ಭಾಟ ಮಾಳಗಿ ಮನಿಯ ಜಂತಿ ಸೇರಿ ಗೋಳುಮಾಡಿ ಬಿಟ್ಟವಣ್ಣಾ ||ಅ.ಪ.|| ಮೈಯ ಮೇಲೆ ಬಿದ್ದರ ತಿಂಡಿ ಹಚ್ಚಿದಂತೆ ಪುಂಡಿ ಮಾಯದೇಹ ರಕ್ತದ ಉಂಡಿ ಗಾಯ ಮ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





