ಒಮ್ಮೆ ಸತ್ಯದ ಬಳಿಗೆ ಹೋದೆ. ‘ನಾನು ನಿನ್ನ ವರಿಸಿರುವೆ. ನಿನ್ನ ಜೊತೆ ಇರಲು ಬಯಸಿರುವೆ’ ಎಂದೆ. ‘ನನ್ನ ಮನೆಗೆ ಬರುವೆಯಾದರೆ, ನೀ ಸಕಲ ಸಜ್ಜಿತನಾಗಬೇಕು’. ‘ಹಾಗಾದರೆ ನೀ ದೂರೆಯುವೆಯಾ’ ಎಂದೆ. ‘ಇದು ಮೊದಲ ಸೋಪಾನ. ನೀ ಬರೀ ಸಾಧಕನಷ್ಟೆ! ‘ಇನ್ನೆಷ್ಟು ಸೋಪಾನವಿದೆ?’ ಎಂದಿತು ಮನ ‘ನಿನ್ನ ಬುದ್ಧಿ ಎಂಬ ಎರಡನೆಯ ಸ...

“ಅನಂತ ವಿಜಯ” ಅಂದಿನಿಂದಲೇ ಅನಂತ ವಿಜಯ ಪ್ರಾರಂಭವಾಯಿತು. ಎಂದು ಅವನು ಚಿ.ಸುಬ್ಬಿಯನ್ನು ವರಿಸಿದನೋ ಅಂದಿನಿಂದಲೇ. ನಮ್ಮಲ್ಲಿ ಆಗ ಮನೆಯಲ್ಲಿ ಬೇರೆ ಹೆಸರು ಇಡುವ ಪದ್ಧತಿ ಇತ್ತು. ಸೊಸೆಗೆ ಎಲ್ಲರೂ ಸೇರಿ “ಲಕ್ಷ್ಮಿ” ಎಂ...

ದೃಶ್ಯ – ೧ (ಇಲಿಗಳು ಕುಣಿಯುತ್ತಾ ಬರುತ್ತವೆ) ಹಾಡು ಇಲಿ ಇಲಿ ಇಲಿ ಇಲಿ ಇಲಿ ಇಲಿ ಇಲಿ ಇಲಿ ಎಲ್ಲಿ ನೋಡಿದರು ಇಲಿಯೆ ಇಲಿ ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಇಲ್ಲಾ ಕಡೆಗಳಲ್ಲು ಗಲೀ ಬಿಲಿ || ಆಹಾ ಅದರ ಬಾಲಕಡ್ದಿ ಓಹೋ ನೋಡು ...

ಅಲ್ಲಲ್ಲಿ ಓಡುವ ನನ್ನ ಮನವೆ ಆನಂದದ ನೆಲೆಯಲ್ಲಿ ನಿಲ್ಲು ಮನವೆ ಇಲ್ಲಿ ಧ್ಯಾನ, ಸಾಧನೆ ತಪವು ಎಲ್ಲ. ಈರ್ಷೆ, ಅಸೂಯೆ, ಆತಂಕವಿಲ್ಲ ಉದಯ ರವಿಯ ಕಿರಣ ಸೊಬಗೆಲ್ಲ ಊರ್ಧ್ವಗಾಮಿಯಾಗಿ ನುಡಿ ಸೊಲ್ಲ. ಋಷಿ ಮುನಿಯ ಮನದ ಸತ್ಯವೇ ಬೆಲ್ಲ ಎಲ್ಲಿದ್ದರೂ ತಿಳಿ, ...

ಚೋಳ ಕಡಿತು ನನಗೊಂದು ಚೋಳ ಕಡಿತು ಕಾಳಕತ್ತಲದೊಳಗ ಕೂತಿತ್ತು ನನಕಂಡು ಬಂತು || ಪ || ಎಷ್ಟು ದಿನದ ಸಿಟ್ಟು ಇಟ್ಟಿತ್ತು ತೀರಿಸಿಬಿಟ್ಟಿತು ಯಾರಿಗೆ ಹೇಳಿದರ ಏನ ಆದೀತು ಗುರುತಾತು ಈ ಮಾತು ಹುಟ್ಟಿದ ಮಗಳು ಕಂಡಿದ್ಧಿಲ್ಲ ಇದರ ಕಷ್ಟ ಶಿವನೇ ಬಲ್ಲ ಘಟ್...

ಬಾಗಿಲ ತೆಗೆ ಮಗೂ ಗಾಳಿ ಸ್ವಚ್ಚಂದ ಓಡಾಡಲಿ ಕಿಟಕಿಯ ಬಾಗಿಲು ತೆರೆದು ಕಣ್ಣಿನ ಬಾಗಿಲು ತೆರೆದು ತುಂಬಿಕೋ, ನೋಡಿಕೋ ನೂರಾರು ನೋಟ ಅರಿತುಕೋ ಬಹಳಷ್ಟು ಇವೆ ಕಲಿಯಬೇಕಾದ ಪಾಠ ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು ಕಣ್ಣು ಕಿವಿ ಮೂಗು ಎಲ್ಲಾ ಮುಚ್ಚಿದ ...

ಹಾವು ಕಂಡಿರೇನಮ್ಮಯ್ಯಾ ಈ ಸ್ವಾಮಿಯೊಳು ಹಾವು ಕಂಡಿರೇನಮ್ಮಯ್ಯಾ ||ಪ|| ಹಾವು ಕಂಡರ ಎನ್ನ ಜೀವವು ಕು೦ದಿತು ತನ್ನ ಮಂಡಲಗಟ್ಟಿ ಮಾಯವಾದಿತು ಗುಂಡೇಲಿಂಗನ ಗುಡಿಯ ಮುಂದ || ಆ. ಪ. || ಹಂಡಬಣ್ಣದ ಹಾವು ಕಂಡಾಕ್ಷಣಕ್ಕೆ ಬಂಡಿಗೆಬ್ಬಿಸಿತು ಮನವು ಪಿ೦ಡದೇ...

ಹಾವು ತುಳಿದೆನೇ ಮಾನಿನಿ ಹಾವು ತುಳಿದೆನೇ ||ಪ|| ಹಾವು ತುಳಿದು ಹಾರಿ ನಿಂತೆ ಜೀವ ಕಳವಳಿಸಿತು ಗೆಳತಿ ದೇಹತ್ರಯದ ಸ್ಮೃತಿಯು ತಪ್ಪಿ ದೇವಾ ನೀನೆ ಗತಿಯು ಎಂದು ||೧|| ಹರಿಗೆ ಹಾಸಿಗೆಯಾದ ಹಾವು ಹರನ ತೋಳಿನೊಳಿರುವ ಹಾವು ಧರೆಯ ಹೊತ್ತು ಮೆರೆವ ಹಾವಿನ...

ನಾಟಕ: ನಾನು ನೋಡಿದ ಮೊದಲ ನಾಟಕ ಸಾಹಿತ್ಯ ಸೇವಕ ಸಂಘದ “ಟಿಪ್ಪು ಸುಲ್ತಾನ”. ಅಗಸೆಯ ಅಯ್ಯು ಸಭಾಹಿತರ ಟೀಪು ಪಾತ್ರ ಸುಪ್ರಸಿದ್ಧ. ವಸಂತಸೇನೆಯ ಚಾರುದತ್ತನಾಗಿಯೂ ಅವರದು ಒಳ್ಳೆಯ ಹೆಸರು. ಚಾರುದತ್ತನಾಗಿ ಪಾತ್ರ ವಹಿಸಿದ ಸಂದರ್ಭ. ಅವನ...

ಪಾತ್ರವರ್ಗ *    ಶ್ವೇತಸುಂದರಿ *    ಭುವನ ಸುಂದರಿ (ರಾಣಿ) *    ತಾಮ್ರಾಕ್ಷ (ಕಟುಕ) *    ಧೂಮ್ರಾಕ್ಷ (ಕಟುಕ) *    ಹುಲಿ ಮತ್ತು ಕರಡಿ *    ಏಳು ಜನ ಕುಳ್ಳರು *    ರಾಜಕುಮಾರ *    ಹನ್ನೆರಡು ಮಕ್ಕಳು ದೃಶ್ಯ -೧ (ಹಾಡಿನ ಲಯಕ್ಕನುಗುಣವಾಗ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...