ಐಸುರ ಬಲು ಹಾನಿಯೇನಲೋ

ಐಸುರ ಬಲು ಹಾನಿಯೇನಲೋ ||ಪ||

ಐಸುರ ಎಂಬುದು ಪಾಶದ ಜ್ಞಾನಿ
ಪಾಪದ ಖೇಲೋಜಿ
ಪಾಪದ ಬೋಲೋಜಿ
ಪಾಪದ ರಸಪಯೋಪಾನಿ ||೧||

ಕರ್ಬಲ ದಾರಿಗೆ ಹೋಗುತ ಪಾನಿ
ನಿರ್ಜಲ ಖೇಲೋಜಿ
ನಿರ್ಜಲ ಬೋಲೋಜಿ
ನಿರ್ಜಲ ನಿರಂಜನ ತೀನಿ ||೨||

ವಸುಧಿಗೆ ಶಹಾ ನೀ ಶಿಶುನಾಳ ಸ್ಥಾನಿ
ಪಶುಪತಿ ಖೇಲೋಜಿ
ಪಶುಪತಿ ಬೋಲೋಜಿ
ಪಶುಪತಿ ಪರಮಪಯೋಪಾನಿ ||೩||
*****

 

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲವೇ… ಭಾಗ – ೧೨
Next post ಕವಿತೆ ಕೂಸು

ಸಣ್ಣ ಕತೆ