ನೋಡಿಕೋ ಎಲ್ಲೆದ ಐಸುರ || ಪ ||

ತಾಬೂತ ಡೋಲಿ ಕಾತೂನರಲ್ಲಿ
ಘಾತಕ ಮೋರುಮ ರಣದಲ್ಲಿ || ೧ ||

ಬಣ್ಣದ ಲಾಡಿ ಕಣ್ಣಿಲೆ ನೋಡಿ
ಪುಣ್ಯಕ ಮುಲ್ಲಾ ಓದಿಕಿಮಾಡಿ !| ೨ ||

ಕತ್ತಲ ಕಾಳಗ ದಿನ ಮಥನಿಸಿ ಮದೀನ
ಕ್ಷಿತಿಯೊಳು ಶಿಶುನಾಳಧೀಶನಲಾವಿ || ೩ ||
*****