ನೋಡಿಕೋ ಹೋಗ್ತದ ಐಸುರ || ಪ ||

ಹೋಗ್ತದ ಐಸುರ ಸಾಗ್ತದ ಮೋರುಮ
ನೀಗ್ತದ ಜಾರತ ಕಮ೯ವನ್ನು ಹೋಗ್ತದ ಐಸುರ || ೧ ||

ಹದಿನೆಂಟು ಜಾತಿಗೆ ಕದನ ಹಚ್ಚುವದಿದು
ಬೆದರಿಸಿದರ ದೂರ ದೂರ ಸರಿದು ಹೋಗ್ತದ ಐಸುರ || ೨ ||

ಕತ್ತಲ ಶಹಾದತ್ತ ಶಿಶುನಾಳಧೀಶನ
ಹೊಸತು ರಿವಾಯತ ಓದಿಕೊಂಡು ಹೋಗ್ತತ ಐಸುರ !| ೩ ||

*****