೧ ಹಾ! ಇನ್ನು ದೂರಮಾದೆಯ ನನಗೆ ಸಂತತಂ ಕಾಳಧೂಮವನುಗುಳ್ವ ಎಲೆಲೇ ಗಗನಚುಂಬಿ!* ಭೋರೆನುತ್ತಲಿ ವರುಣ ವೇಗದಿಂ ಜಲದಂಬಿ- ನಾ ವೃಷ್ಟಿಯಿಂ ಕಾಡಿದರು ತಾ ನಿರಂತರಂ; ಭೂವಳಯದಲ್ಲೆಲ್ಲಿರ್ದೊಡಂ ನಾಂ ಕಣಮೊಂದು ನೀರನೂ ಬಿಡದೆ ಹೀರುವೆನೆಂಬ ಪೂಣಾಂತು ಜಗವ ಸುಡುತಿದ್ದರೂ ಭಾಸ್ಕರನು-ಮೃಗಜಂತು ತರುರಾಜಿ ಸರ್ವಮುಂ ಇರೆ ಬಿಸಿ...

ಮಂಗನಿಂದ ಮಾನವನಾದ, ಎಂಬ ವಾದವನ್ನು ಪ್ರಾಕೈತಿಹಾಸಿಕ ಹಿನ್ನೆಲೆಯಿಂದ ಅರಿಯುತ್ತೇವೆ. ಮನುಷ್ಯರಂತೆ ಸೂಕ್ಷ್ಮಮತಿಯಾದ, ಈಗಾಗಲೇ ಮನುಷ್ಯರ ಕೆಲಸಗಳನ್ನು ನಿಭಾಯಿಸುತ್ತಿರುವ ಚಿಂಪಾಂಜಿಯು ಮಾನವನ ಗುಣಗಳಿಗೆ ಹತ್ತಿರವಾಗಿದೆ. ಇದನ್ನು ನೋಡಿದ ವಿಜ್ಞಾನಿಗ...

ಹೇಗ ಬರೆಯಲೇ ಓಲೆ, ಹೇಗೆ ಬರೆಯಲೇ? ಪ್ರಾಣಪ್ರಿಯನಿಗೆ ಓಲೆ ಹೇಗೆ ಬರೆಯಲೇ? ಲೇಖಿನಿ ಹಿಡಿದೇ ನನ್ನ ಕೈನಡುಗುವುದೇ ಪ್ರಿಯನ ನೆನೆದರೇ ಕಣ್ಣ ಧಾರೆ ಸುರಿವುದೇ ಹೇಳಲಿರುವುದ ನಾ ಹೇಳಲಾರೆನೇ ಕಂಪಿಸಿದೆ ಜೀವ ನಾ ತಾಳಲಾರೆನೇ ನೀನೆ ಬಲ್ಲೆಯೇ ನನ್ನ ಎಲ್ಲ ಮ...

ಒಬ್ಬ ತನ್ನ ನೋಯುತ್ತಿದ್ದ ಹಲ್ಲು ಕೀಳಿಸಲು ಇಸ್ಲಾಮಾಬಾದ್ಀನಿಂದ ಕರಾಚಿಗೆ ಬಂದ. ದಂತ ವೈದ್ಯರು ಪ್ರಶ್ನಿಸಿದರು “ಅಲ್ಲಾ ಇಸ್ಲಾಮಾಬಾದಿನಲ್ಲೇ ಸಾಕಷ್ಟು ದಂತ ವೈದ್ಯರಿದ್ದಾರೆ. ಇಲ್ಲಿಯ ತನಕ ಬರುವ ಆಗತ್ಯ?” ಆತ: “ನಮಗೆ ಇಸ್ಲಾಮಾಬಾದಿನ...

ಇತರರ ಕಣ್ಸೆಳೆಯುವ ತಲೆಗೂದಲು ಯಾರಿಗೆ ಬೇಡ? ಇಂತಹ ತಲೆಗೂದಲಿನ ಜೋಪಾನಕ್ಕಾಗಿ ಎಣ್ಣೆ ಆಥವಾ ಕ್ರೀಂ ಬಳಸುವುದು ರೂಢಿ. ಇದರಿಂದಾಗಿ ತಲೆಗೂದಲೆಣ್ಣೆಗೆ ಆಗಾಧ ಬೇಡಿಕೆ. ಹಾಗಾಗಿ ಭಾರತದಲ್ಲಿ ಮಾರಾಟವಾಗುವ ತಲೆಗೂದಲೆಣ್ಣೆಯನ್ನು ಟನ್ ಗಳಲ್ಲಿ ಅಳೆಯಬೇಕಾ...

ಬದುಕಿನ ಹೆಚ್ಚ ಹೆಚ್ಚಗಳ ಗೆಜ್ಜೆವುಲಿವಾಗಿ ಗಿಡಮರ ಪ್ರಾಣಿ ಪಕ್ಷಗಳ ಒಡನಾಟದ ಹಸಿವು ಹಂಬಲ ಬೇಟೆ ಬೇಟ ಹಿಗ್ಗು ಕೂಗುಗಳ ತೊದಲು ನುಡಿಯುತ್ತಾ ಗವಿ ಗುಡಿಸಲು ಹಳ್ಳಿ ಊರು ಪಟ್ಟಣಗಳಲ್ಲಿ ಬಯಲಾಟವಾಡುತ್ತಾ ಪಶುವನ್ನು ದುಡಿಮೆಗೆ ಹೂಡಿ ನೆಲವ ಹಸನು ಹಸಿ...

ನಾವು ಜರ್ಮನ್-ಅಮೇರಿಕನ್ ಕ್ಯಾಂಪಸ್ಸಿನಲ್ಲಿ ಇರುತ್ತಿದ್ದರಿಂದ ಕ್ಯಾಂಪಸ್ಸಿನ ಸ್ತ್ರೀ ಸಮೂಹದಲ್ಲಿ ಮಾತ್ರ ಎರಡು ತುಂಡಿನ ವಾತಾವರಣ ನೋಡುವುದು, ಕೇವಲ 20 ಕಿ.ಮೀ. ಅಂತರದ ಜೆಡ್ಡಾ ಪಟ್ಟಣದಲ್ಲಿ ಮೈಯೆಲ್ಲಾ ಬುರ್ಕಾದಲ್ಲಿ ಮುಚ್ಚಿಕೊಂಡು ಬುರ್ಕಾದ ಕ...

ಎಪ್ರಿಲ್‌ ಹನ್ನೊಂದರಂದು ಹೋಟೆಲ್‌ ಟರ್ಮಿನಸ್‌ನಲ್ಲಿ ಫಲಾಹಾರ ಮುಗಿಸಿ ನಾವು ಫಿಜೆಯಾಕ್‌ ಬಿಟ್ಟಾಗ ಬೆಳಗ್ಗಿನ ಒಂಬತ್ತೂವರೆ ಗಂಟೆ. ಹಿಂದಿನ ರಾತ್ರೆ ಫಿಜೆಯಾಕಿನ ಮಧ್ಯಯುಗೀನ ಕಟ್ಟಡವೊಂದರಲ್ಲಿನ ಲಾ ಫುಯಸ್‌ ಲೊರೇಲ್‌ ರೆಸ್ಟಾರೆಂಟ್‌ನಲ್ಲಿ ನಾವು ಫ...

ಇಂದು ಸೂಕ್ಷ್ಮದರ್ಶಕ ತಂತ್ರಗಳನ್ನು ಬಳಸಿ ಅತ್ಯಂತ ಚಿಕ್ಕ ಕ್ಯಾಮರಾ, ವಿಡಿಯೋ, ಆಡಿಯೋಗಳನ್ನು ತಯಾರಿಸ- ಲಾಗುತ್ತದೆ. ಒಬ್ಬ ಹೊರಬಹುದಾದ ಕ್ಯಾಮರಗಳು ಇದ್ದ ಕಾಲವೊಂದಿತ್ತು ಇದೀಗ ಶರ್ಟಿನ ಬಟನ್‌ಗಳಲ್ಲಿ ಹೆಣ್ಣುಮಕ್ಕಳ ಕುಂಕುಮ ಬೊಟ್ಟುಗಳಲ್ಲಿ ವಾಚುಗ...

ಶ್ರೀ ಕೃಷ್ಣನ ಚರಣಕಮಲ ಭಜಿಸು ಮನವೆ ನೀ ಅವಿನಾಶೀ ಶ್ಯಾಮನ ಪದ- ಕಮಲ ಭಜಿಸು ನೀ ಲೋಕ ಒಂದು ನೀರ ಗುಳ್ಳೆ, ಕಂಡರೇನು, ಕಡೆಗೆ ಸುಳ್ಳೇ! ಬುವಿ ಬಾನಿನ ಮಧ್ಯೆ ಮಾಯೆ ಮೆರೆವ ಮಿಥ್ಯಕಿಲ್ಲ ಎಲ್ಲೆ, ಮನೆಯ ಬಿಟ್ಟ ಮಾತ್ರಕೇನು, ಕಾವಿಯುಟ್ಟ ಶಾಸ್ತ್ರಕೇನು? ...

ರಸ್ತೆಯೊಂದರಲ್ಲಿ ಕಾರೊಂದು ಅಪಘಾತಕ್ಕೆ ಒಳಗಾಗಿತ್ತು. ಜನಸಂದಣಿ ಸೇರಿತ್ತು. ಪತ್ರಿಕೆ ವರದಿಗಾರ ಅಪಘಾತದ ವಿವರ ತಿಳಿಯಲು ಅಲ್ಲಿಗೆ ಬಂದ. ಆದರೆ ಆ ಜನಸಂದಣಿಯಲ್ಲಿ ಕಾರು ಬಳಿಗೆ ಬರಲಾಗಲೇ ಇಲ್ಲ. ಕೂಡಲೇ ಆ ತರುಣ `ದಾರಿ ಬಿಡಿ ದಾರಿ ಬಿಡಿ’ ನನ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...