೧ ಇಳೆಯ ನೆಲದಲ್ಲಿ ಮುಗಿಲೆಂತ ಮುಗಿಲಲ್ಲಿ ಸುಳಿ- ದಾಡುತಿಹ ಗಾಳಿಯಲ್ಲಿ ನಲಿನಲಿವ ಕಡಲಲ್ಲಿ ನೀನಿದ್ದು ಹಿಗ್ಗುತ್ತ ಊದುತಿಹೆ ಕಾಳಿಯಲ್ಲಿ! ೨ ಹಿಂದಿದ್ದಿ! ಇಂದಿದ್ದು ಮುಂದೆಯೂ ಇದ್ದರೂ ನನಸೆ ನೀನೆನಗೆ ಕಾಣೆ! ಹಿಂದು ಮುಂದಿಂದುಗಳನಿನ್ನುಳಿದು ಎಂದೆಂದೊ ಕಾ೦ಬುದೆ೦ಬುದನು ಕಾಣೆ! ೩ ಜಗವು ನಿನ್ನಲ್ಲೆ ನಡೆಯುತ್ತ ...

“ಸಂಸಾರದ ಸಾರಾಂಶವನ್ನೂ ಕ್ಷಣಭಂಗುರತೆಯನ್ನೂ ಕೇಳಿಕೊಂಡ ಬಳಿಕ ಅನೇಕ ಜೀವಿಗಳು ಮನೆಯನ್ನೂ ಮಡದಿಮಕ್ಕಳನ್ನೂ ತೊರೆದುಹೋಗಿ ತಮ್ಮ ಬಾಳಿನ ನೆಲೆಯನ್ನು ಕಾಣುವುದಕ್ಕೆ ಕಷ್ಟಪಟ್ಟ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಬರುವವು. ಆದುದರಿಂದ ಮನೆವಾರ್ತೆಯ...

ಹೂವಿನೊಳಗೆ ಕಾಯಿ ಇದೆ, ಹಣ್ಣಿನೊಳಗೆ ಬೀಜವಿದೆ, ಅಲೆಗಳ ಕೆಳಗೆ ಘನ ಜಲವಿದೆ, ಮೋಡಗಳ ಹಿಂದೆ ಅನಂತಾಕಾಶವಿದೆ, ತಾನ ತಾನಗಳ ವಿವಿಧ ಇಂಚರಗಳೊಳಗೊಂದು ಏಕನಾದವಿದೆ ಬಣ್ಣ ಬಣ್ಣ ಚಿತ್ರಗಳ ಹಿಂದೊಂದು ಬಿಳಿ ಬಟ್ಟೆ ಇದೆ ಉಬ್ಬು ತಗ್ಗುಗಳ ಮಾಂಸದೊಳಗೆ ಬೆಂಬ...

ಮೂಲತಃ ಬಂಗಾಲಿಗಳಾದ ಜಾನಕಿನಾಥ ಬೋಸ್ ಮತ್ತು ಪ್ರತಿಭಾ ದೇವಿ ಅವರಿಗೆ ಒರಿಸ್ಸಾದ ಕಟಕ್‌ನಲ್ಲಿ ದಿನಾಂಕ ೨೩.೧.೧೮೯೩ರಂದು ಸುಭಾಷ್ ಜನಿಸಿದರು. ಒಟ್ಟು ಹದಿನಾಲ್ಕು ಜನ ಮಕ್ಕಳಲ್ಲಿ ಸುಭಾಷ್ ಆರನೆಯವರು. ಸುಭಾಷರ ಹೆಂಡತಿ ಎಮಿಲ್‌ಷೆಂಕಿಲ್ ವಿಯನ್ನಾದಲ್ಲ...

2.1. ಯಕ್ಷಗಾನ ಮೇಳ ಯಕ್ಷಗಾನ ಮೇಳವೆಂದರೆ ಯಕ್ಷಕಲಾವಿದರ ಗುಂಪು ಎಂದರ್ಥ. ಸಾಮಾನ್ಯವಾಗಿ ‘ಮೇಳ’ವನ್ನು ಬದುಕಿಗಾಗಿ ಯಕ್ಷಗಾನವನ್ನು ಆಯ್ಕೆ ಮಾಡಿಕೊಂಡ ವೃತ್ತಿ ಕಲಾವಿದರ ಸಮೂಹ ಅಥವಾ ತಂಡವೆಂದು ವ್ಯಾಖ್ಯಾನಿಸಲಾಗುತ್ತದೆ. ಯಕ್ಷಗಾನ ಮೇ...

ವಿಜ್ಞಾನ ಅವಿಷ್ಕಾರಗೊಂಡಂತೆ ನಿರುಪಯುಕ್ತ ವಸ್ತುಗಳಿಂದಲೂ ಕೂಡ ಹೊಸವಸ್ತುವನ್ನು ನಿರ್ಮಾಣ ಮಾಡುವ ಪ್ರಯೋಗಗಳು ನಡೆಯುತ್ತಲಿದೆ. ನಿರುಪಯುಕ್ತ ವಸ್ತುಗಳಾದ ಕಸ, ಕಡ್ಡಿ ಎಲೆ, ಸಿಪ್ಪೆಗಳಿಂದ ಅನೇಕ ವಸ್ತುಗಳನ್ನು ತಯಾರಿಸಲಾಗುತ್ತವೆ. ಇದರಂತೆ ವಿಜ್ಞಾನ...

ಕಪ್ಪು ಬಣ್ಣದ ಕೃಷ್ಣ ಎಷ್ಟು ಚಂದವೊ ನೀನು! ಕಪ್ಪಿನ ಮಹಿಮೆಯ ತಿಳಿದೆ ಈಗ ಮುಗಿಲಾಳ ಕಡಲಾಳ ಎಲ್ಲ ಕಪ್ಪಲ್ಲವೆ ರತ್ನಗಳಲಿರುವಂತೆ ನೀಲರಾಗ? ಕಪ್ಪ ಮೋಡಗಳೆಲ್ಲ ಒಟ್ಟಾಗಿ ಕೂಡಿವೆ ದಟ್ಟೈಸಿ ನಡುವೆ ಮಿಂಚೆದ್ದಿದೆ, ಕಪ್ಪ ಕೋಗಿಲೆ ದನಿ ಪಂಚಮದಿ ಹೊಮ್ಮಿದೆ...

” ಜೀವನೋದ್ದೇಶನ್ನು ಅರಿತು ನಿಶ್ಚಯಿಸಿ ಅದನ್ನು. ಸಾಧಿಸುವುದೇ ಹುಟ್ಟಿ ಬಂದುದರ ಕಾರಣವಾದರೆ,  ಸ೦ಸಾರದೊಡನೆ ಜೀವನೋದ್ದೇಶನ್ನು ಹೊಂದಿಸಿಕೊಳ್ಳುವ ಬಗೆ ಹೇಗೆ-ಎ೦ಬ ತೊಡಕು ಎದ್ದು ನಿಲ್ಲುವದು. ಆದ್ದ- ರಿಂದ ಸಂಸಾರ ಈ ವಿಷಯದಲ್ಲಿ ತಮ್ಮ ಬಾಯಿಂ...

ನಿನ್ನ ಬರವನೇ ಕಾಯ್ದು ಇರುವೆ ಇರವೆಲ್ಲ ಕಾಯ್ವ ಚಿಂತೆ ಬರದೆ ನೀನು ಬರಡಾದೆ ನಾನು ಬಾಗಿಲನು ತೆರೆದೆ ನಿಂತೆ ಬಣ್ಣ ಬಣ್ಣ ವೇಷಗಳ ತೊಟ್ಟು ಬಯಲಾಟ ಬೊಂಬೆಯಂತೆ ಬಣ್ಣಿಸಿದ್ದೆ ನಾ ಹಿಂದೆ ಅಂತೆಯೇ ಎಲ್ಲ ಅಂತೆ ಕಂತೆ ಜಟೆಕಿರೀಟದಲಿ ನಾಲ್ಕು ಕೈಗಳಲಿ ವ...

ಪ್ರವಾಸ ಸಾಹಿತ್ಯದ ಓದಿನ ಮೂಲಕ ಈ ವರೆಗೆ ಜಗತ್ತಿನ ಅನೇಕ ದೇಶಗಳನ್ನು ಸುತ್ತಾಡಿ ಬಂದಂತಾಯ್ತು. ಪ್ರತಿಯೊಬ್ದ ಲೇಖಕರದ್ದು ವಿಭಿನ್ನ ದೃಷ್ಟಿಕೋನಗಳು. ಈ ಹಿನ್ನೆಲೆಯಲ್ಲಿ ಆಯಾ ದೇಶಗಳ ರಾಜಕೀಯ, ಸಾಮಾಜಿಕ, ಐತಿಹಾಸಿಕ, ಕಲೆ ಸಂಸ್ಕೃತಿಗಳ ಪರಿಚಯ ಮಾಡಿ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...