ಇವತ್ತು ರಾತ್ರಿ ಬರೆಯಬಹುದು ….

ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಹೀಗೆ, ‘ರಾತ್ರಿ ಚೂರು ಚೂರಾಗಿದೆ, ದೂರದಲ್ಲಿ ನಕ್ಪತ್ರ ಮಿನುಗಿದೆ’. ರಾತ್ರಿಯ ಗಾಳಿ ಆಕಾಶದಲ್ಲಿ ಸುಳಿದು ಹಾಡುತ್ತಿದೆ. ಇವತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಅವಳನ್ನು...
ಮನುಷ್ಯ

ಮನುಷ್ಯ

ಮನುಷ್ಯನ ಪಾದ ಮರಳಲ್ಲಿ ಹುದುಗುತ್ತ ಯಾವುದೋ ಪ್ರಾಣಿಯ ಗೊರಸೋ ಅನ್ನುವ ಹಾಗೆ ಆಕಾರವಿರದ ಗುರುತನ್ನು ಉಳಿಸುತಿತ್ತು. ಕಲ್ಲು ಬಂಡೆಗಳನ್ನು ಏರುತಿತ್ತು, ಕಡಿದಾದ ಏರು ಸಿಕ್ಕಾಗ ಒಂದಿಷ್ಟು ಜಾಗದಲ್ಲಿ ಬಲವಾಗಿ ಊರಿ, ಮೇಲೆ ಹತ್ತಿ, ದಿಗಂತದಲ್ಲಿ...

ಬೀದಿಗಳು

ಪ್ರೀತಿ ಮುಗಿದು ಬಹುಕಾಲವಾದ ಮೇಲೆ : ಕೆಲವು ಬಾರಿ ಬೀದಿಯಲ್ಲಿ ಎದುರಾಗುತ್ತಾರೆ ಕೆಲವು ಬಾರಿ ಕನಸಿನಲ್ಲಿ. ಬೀದಿಯಲ್ಲಿ ಕಂಡಾಗ ಕನಸಿನಂತೆ ಇರುತ್ತದೆ. ಕನಸಿನಲ್ಲಿ ಕಂಡಾಗ ಬೀದಿಯಂತೆ ಇರುತ್ತಾರೆ, ಅರ್ಧಕ್ಕರ್ಧ ಮನೆಗಳು ಖಾಲಿ ಇರುವ ಬೀದಿಗಳು...

ಎಷ್ಟು ಕಾಲ?

ಮಹಾ ಅಂದರೆ ಮನುಷ್ಯ ಎಷ್ಟುಕಾಲ ಬದುಕುತ್ತಾನೆ? ಸಾವಿರ ದಿನವೋ ಒಂದು ದಿನವೋ? ಒಂದು ವಾರವೋ ಒಂದಷ್ಟು ಶತಮಾನವೋ? ಸಾಯುವುದರಲ್ಲೆಷ್ಟು ಕಾಲ ಕಳೆಯುತ್ತಾನೆ? ‘ಅನಂತ ಕಾಲ’ ಅಂದರೆ ಎಷ್ಟುಕಾಲ? ಈ ಯೋಚನೆಗಳಲ್ಲಿ ಮುಳುಗಿ ಉತ್ತರ ಹುಡುಕಲು...

ನಾವು ಬಹಳ ಜನ

ನಾನು ಯಾರು ಯಾರೋ ಆಗಿ ಬಿಟ್ಟಿದ್ದೇನೆ, ನಿಜವಾಗಿ ಯಾರಾಗಿರಬೇಕೆಂದು ನಿರ್ಧಾರಮಾಡಲು ಆಗಿಯೇ ಇಲ್ಲ. ನನ್ನ ಅಂಗಿಯೊಳಗೆ ಕಳೆದು ಹೋಗಿರುವ ಅವರೆಲ್ಲ ಬೇರೆ ಬೇರೆ ಊರುಗಳಿಗೆ ಹೋಗಿಬಿಟ್ಟಿದ್ದಾರೆ. ಹಾಂ ಈಗೆಲ್ಲ ಸರಿಯಾಗಿದೆ ಅನ್ನಿಸಿ ನಾನು ಜಾಣನಂತೆ...

ದುಃಖ

ದುಃಖ - ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು. ರೂಪಕವಲ್ಲ ಕವಿತೆಯಲ್ಲ ಸುಮ್ಮನೆ ಇರುವ ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು. ದುಃಖ ಸುಮ್ಮನೆ ಅಲ್ಲಿರುವ ಬೆಚ್ಚನೆ ಎದೆ ಸುಮ್ಮನೆ ಅಲ್ಲಿರುವ ರಾತ್ರಿ ದುಃಖ ಮಾತಿನಿಂದ ದೂರವಾಗಿ...

ಪರಿವರ್ತನೆ

ಸಂಗೀತ ಮತ್ತೆ ಬದುಕಿ ಬಂದಂತೆ... ಲೋಕದಾಚೆಯಿಂದ ಇಲ್ಲಿಗೆ ತಂದವರು, ಮನಸ್ಸಿನ ಒಳಕಿವಿಯ ಸುರುಳಿ ಮೆಟ್ಟಿಲಲ್ಲಿ ಕೈ ಹಿಡಿದು ನಡೆಸಿದವರು ಯಾರು? ವರ್ತಮಾನ ತನ್ನನ್ನಳಿಸಿಕೊಂಡು ತಾನೆ ಅದಾದಂತೆ ಮಾಯವಾದ ಒಂದು ಕ್ಷಣವೊಂದು ಮತ್ತೆ ಹಿಂದಿರುಗಿದಂತೆ, ನೆಲದೊಳಗಿನ...

ನಮ್ಮ ಕರ್ತವ್ಯ ನಾವು ಮಾಡಿದ್ದೇವೆ

ನಮ್ಮ ಕರ್ತವ್ಯ ನಾವು ಮಾಡಿದ್ದೇವೆ ನಾವು ಮಕ್ಕಳಾಗಿದ್ದಾಗ ನೆಟ್ಟ ಅಣಬೆಗಳನ್ನು ನಮ್ಮ ಮಕ್ಕಳೊಂದಿಗೆ ಕಾಡಿಗೆ ಹೋಗಿ ಆಯ್ದಿದ್ದೇವೆ. ವ್ಯರ್ಥ ಸುರಿದ ರಕ್ತದ ವಾಸನೆಯಂಥ ವಾಸನೆ ಇದ್ದ ಕಾಡುಹೂಗಳ ಹೆಸರು ಕಲಿತಿದ್ದೇವೆ. ಪುಟ್ಟಮೈಗಳ ಮೇಲೆ ದೊಡ್ಡಪ್ರ್‍ಈತಿ...

ರಾತ್ರಿಯಲ್ಲಿ ಹೆಜ್ಜೆ ಸದ್ದು

ಯಾವಾಗಲೂ ಹೆಜ್ಜೆಸದ್ದು ಯಾವಾಗಲೂ ರಾತ್ರಿಯ ಹೊತ್ತು ಹೆಜ್ಜೆ ಸದ್ದು ರೂಮಿನ ಬಾಗಿಲು ಆಕಾಶದ ಮೋಡದ ಹಾಗೆ, ಯಾವಾಗಲೋ ತೆರೆದುಕೊಂಡು ಬಿಡುತ್ತದೆ ನಿನ್ನನೀಲಿ ನೆರಳನ್ನು ದಿನವೂ ರಾತ್ರಿ ಹಾಸಿಗೆಯಿಂದ ಎಳೆದು ಒಯ್ಯುವವರು ಯಾರು? ಹೆಜ್ಜೆಗಳು ಹತ್ತಿರ...

ಶಬ್ದಗಳು

ನನ್ನ ಶಬ್ದಗಳು ಗೋಧಿಯಾಗಿದ್ದಾಗ ನಾನು ನೆಲವಾಗಿದ್ದೆ. ಕೋಪವಾಗಿದ್ದಾಗ ನಾನು ಬಿರುಗಾಳಿಯಾಗಿದ್ದೆ. ಕಲ್ಲಾಗದಿದ್ದಾಗ ನಾನು ನದಿಯಾಗಿದ್ದೆ. ನನ್ನ ಶಬ್ದಗಳು ಜೇನಾದಾಗ ತುಟಿಗೆಲ್ಲ ನೊಣ ಮುತ್ತಿದವು. ***** ಮೂಲ: ಮಹಮೂದ್ ದರ್‍ವೇಶ್
cheap jordans|wholesale air max|wholesale jordans|wholesale jewelry|wholesale jerseys