Home / ಅವಧ

Browsing Tag: ಅವಧ

ಋಷಿಗಳಿದ್ದರು ಹೃಷೀಕೇಶದಲಿ ವಿವಿಧ ವೇಷದಲಿ ಗಡ್ಡಕೂದಲ ಬಿಟ್ಟವರು ಕಾಷಾಯ ತೊಟ್ಟವರು ಕೆಲರು ತಲೆ ಮರೆಸಿ ಯಾರು ಯಾರನೊ ಅರಸಿ (ಪ್ರತಿಯೊಂದು ತಲೆ ಹುಡುಕದೇ ತನ್ನ ನೆಲೆ?) ತಮಾಲವೃಕ್ಷಚ್ಛಾಯೆ ಆಹ ತಣ್ಣನೆ ಹಾಯೆ ಇದು ಧ್ಯಾನಾಸಕ್ತಿಯೊ ಕೇವಲ ಧೂಮಪಾನಾಸಕ...

ಎತ್ತದಿರು ಕಲ್ಲುಗಳ ಮೆಟ್ಟದಿರು ಹುಲ್ಲುಹಾಸುಗಳ ಮುಟ್ಟದಿರು ಅಲ್ಲಿ ಮಲಗಿರುವ ಹಸುಳೆಗಳ ಎಷ್ಟೋ ವರ್ಷಗಳಿಂದ ಮಲಗಿರುವರವರು ಮಳೆಗಾಳಿಗೊಮ್ಮೊಮ್ಮೆ ಕನವರಿಸುವರು ಇನ್ನು ಈ ತೆರೆಗಳ ನಿರಂತರ ಶಬ್ದ ಅದನುಳಿದರೆ ಬಾಕಿ ಎಲ್ಲವೂ ಸ್ತಬ್ದ ಪಾರ್ವತಿಸುಬ್ಬನೆಂ...

ಲಖನೋವಿನಲ್ಲಿ ನಾನು ಲಖನವಿ ಕುರ್ತ ಧರಿಸಿದೆನು ಅತಿ ತೆಳ್ಳಗಿನ ಒಂದು ಜತೆ ಚಪ್ಪಲಿಯ ಮಟ್ಟಿದೆನು ಮತ್ತೆ ಗಡ್ಡವೂ ಬೆಳೆದಿತ್ತು, ಅಲ್ಲಲ್ಲಿ ಬಿಳಿಯಾಗಿತ್ತು, ಇಡಿಯ ಹಜರತ್‌ಗಂಜ್ ನನ್ನ ಕಾಯುವಂತಿತ್ತು ಮೆಟ್ಟು ಮೆಟ್ಟಲಿಗೆ ಅಂಗಡಿ ಬಾಗಿಲುಗಳು ತೆರೆದು...

ಮನಸು ಆಕಾಶಗಾಮಿ ದೇಹವನು ಮಾತ್ರ ಕರೆಯುವುದು ಭೂಮಿ ಆಹ್! ಯೊಹಾನಸ್ ಕೆಪ್ಲರ್ ಆಕಾಶವನಳೆದವನು ಭೂಮಿಯ ನೆರಳನಳೆಯುತ್ತಿರುವೆಯ ! ಆ ವಾಕ್ಯಗಳನೆಂತು ಮರೆಯುವುದು ಆ ಅರ್ಥಗಳನೆಂತು ಬರೆಯುವುದು ಒಂದು ಹೆಜ್ಜೆಯಲೆ ಕಲ್ಪಗಳ ದಾಟಿದವನೆ ಕವಿಯೆ, ವಿಜ್ಞಾನಿಯೆ...

ವಾನ್‌ಗಾಫ್ ಕೆಫೆಗಳನ್ನು ಚಿತ್ರಿಸಿದ ಬೀದಿಗಳನ್ನು ಚಿತ್ರಿಸಿದ ಪಾರ್ಕುಗಳನ್ನು ಚಿತ್ರಿಸಿದ ಹೊಲಗಳನ್ನು ಚಿತ್ರಿಸಿದ ಪೈನ್ ಮರಗಳನ್ನು ಬಣ್ಣದಲ್ಲಿ ಮುಳುಗಿಸಿದ ವಿಮರ್ಶಕರಂದರು “ಛೇ! ಛೇ! ಇಂಥವನ್ನೆಲ್ಲ ಚಿತ್ರಿಸುತ್ತಾರೆಯೇ? ಯಾರಾದರೂ! ಇಕಾರ...

ಬೋಟಿನಲ್ಲಿ ಸಹಪ್ರಯಾಣ ಕೆಲೆ ನಿಲ್ದಾಣದಲ್ಲಿ ಕೇವಲ ನಗೆ ನಂತರ ಲೂವ್ರ್‌ ಮ್ಯೂಸಿಯಮಿನಲ್ಲಿ ಬೆರಗಿನಿಂದ ಎಲ್ಲರೂ ಕತ್ತೆತ್ತಿ ನೋಡುತಿದ್ದಾಗ ನಾನು ಕಂಡದ್ದೇನು– ನೋಡಲೆಂದು ಇಲ್ಲಿಯ ತನಕ ಬಂದ ಮೋನಾ ಲಿಸಾ ಚಿತ್ರವನ್ನೆ ಅಥವ ಹೆಸರು ಸ್ಥಳ ಗೊತ್ತ...

ಅಂಥ ಮಾಂತ್ರಿಕ ಹೆಸರಿದ್ದ ಮೇಲೆ ಅದು ಬರೇ ಗಾಡಿಯಲ್ಲ ಸಾರೋಟು ಸಾಗುವುದು ಅಪರಿಚಿತ ಸ್ಥಳಗಳಿಗೆ ಆ ಅಕ್ಷರಗಳೇ ಹಾಗೆ ಒಂದನ್ನೊಂದು ಬಳಸುತ್ತ ಬೆಳೆಯುತ್ತ ಮುಗಿಲ ಕಡೆ ಕೈಚಾಚುತ್ತ ಹೇಳಿ ಮುಗಿಸುವ ಹೊತ್ತಿಗೆ ಎಷ್ಟೊಂದು ಬಾರಿ ಎಷ್ಟೊಂದು ಗಾಲಿಗಳು ಎಷ್ಟ...

ಕ್ಯಾಬೇಜು ಮಾರಲು ಕೂತ ಗಂಡಸು ಕ್ಯಾಬೇಜಿನಂತೆ ಕಾಲಿಫ್ಲವರು ಮಾರುವ ಹೆಂಗಸು ಕಾಲಿಫ್ಲವರಿನಂತೆ ಇದ್ದಾರೆಯೆ ಇಲ್ಲವೆ- ಕಚಕಚನೆ ಕುರಿಮಾಂಸ ಕಡಿದು ಕೊಡುತ್ತಿರುವ ಹುಡುಗ ಹೂವಿನ ರಾಸಿಯ ಹಿಂದೆ ತಲೆ ಮರೆಸಿದ ಹುಡುಗಿ ಪ್ರೇಮಿಗಳೆ ಅಲ್ಲವೆ- ಬಟಾಟೆ ಕೊಳ್ಳ...

ಬಸ್ಸು ಸುರಂಗಮಾರ್ಗ ಬಾರು ಕೆಫೆಟೇರಿಯಾ ವಿಂಬಲ್ಡನ್ ಪಂದ್ಯ ಸೂಪರ್ ಬಜಾರುಗಳಲ್ಲಿ ನಿಮ್ಮ ಅಕ್ಕಪಕ್ಕ ನಿಂತವರನ್ನೇ ಸಂದೇಹಿಸುವ ಕಾಲ! ಮುಂದೆ ನೋಡುವಿರ ಹಿಂದೆ ನೋಡುವಿರ ಮನುಷ್ಯನಿಗಿರುವುದು ಎರಡೇ ಕಣ್ಣುಗಳು ಕಛೇರಿಗೆ ಹೋದವರು ಹಿಂದೆ ಬರುತ್ತಾರೆಯೆ ...

(ಕಾರ್ಮೆನ್‌ಗೆ) ಹೆನ್ಲಿಯೆಂಬುದೊಂದು ಹಳ್ಳಿ ಅಲ್ಲಿ ಥೆಮ್ಸ್ ನದಿಗೆ ಅಪರೂಪದ ಭರ ನದಿಯ ಮಧ್ಯದ ತನಕ ಹಾಕಿದ ಮರದ ಸೇತುವೆಯಲ್ಲಿ ನಾವು ನಡೆದವು. ರೊಟ್ಟಿಯ ತುಣುಕಿಗೆ ಅಥವಾ ಸೇಬಿನ ತಿರುಳಿಗೆ ಬಾತುಕೋಳಿಗಳು ಹತ್ತಿರಕ್ಕೆ ಬರುತ್ತಿದ್ದುವು ನೋಡುತ್ತ ನಿ...

1...910111213...17

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....