ಎಷ್ಟೊಂದು ಅಂತಸ್ತುಗಳು
ಈ ಅಂಗಡಿಯೊಳು
ಒಳಹೊರ ಸಂದುಗೊಂದುಗಳ ವಿನ್ಯಾಸ
ಮೋಹಕ ಮೋಹಕ ವನಪು ವೈಯಾರ
ಸುತ್ತೆಲ್ಲ ಉದ್ಯಾನಗಳ ಸೆಳೆತ
ನೀಲಿ ಉದ್ಯಾನ ಮೋಡಗಳಲೆ
ಹಳದಿ ಉದ್ಯಾನ ಬಂಗಾರದಲೆ
ಕೆಂಪು ಉದ್ಯಾನ ಅದೋ ಸಂಜೆ ಸೂರ್ಯನೋಕುಳಿ
ಚೌಕಟ್ಟೋ ಒಡ್ಡೋ ಒಡೆದೋಡುವ ಐರಾವತಗಳು
ಸಂತೆಯ ಕೊಡುಕೊಳ್ಳುವಿಕೆಗೆ
ನನ್ನ ಕಣ್ಣು ನಿನ್ನಸೊಬಗು
ಸವಿಯುವ ಮನೋಸ್ಪರ್ಷ.
ಹತ್ತಿಳಿದು ಅಂಗಡಿ ಸುತ್ತಿ ಏನೆಲ್ಲ ಸಂತೆ
ಕಣ್ಮನದ ಕಣವಿಯೊಳು
ಎದೆತುಂಬಿ ಭಾರಹೊತ್ತು ಹೊರಬೀಳುವ ಸಂತಸ.
*****

















