ನಂಬಿದೆ ನಾ ನಿನ್ನ
ಶಂಭೋ ರಕ್ಷಿಸು ಎನ್ನ ||ಪ||

ಕುಂಬಿನಿಹೊಳು ಬಿಡದೆ
ತುಂಬಿ ತುಳುಕುತಲಿರುವೆ ||ಅ.ಪ.||

ಹರನಾಮದಲಿ ಪ್ರೇಮದಲಿ
ಕರೆಗೊಂಡು ಮನಸಿನಲಿ
ವರವ್ಯಸನವನು ಕಳೆದು
ನಿರುತ ಪಾಲಿಸು ದೇವಾ ||೧||

ಜಡದೇಹಿ ಜಗದಿ ನಾನು
ಮೃಡರೂಪ ಮೂರ್ತಿ ನೀನು
ಪೊಡವಿಪ ಶಿಶುನಾಳ ಒಡೆಯ ನೀ ಕರುಣಿಸಿ
ಕೊಡು ಮತಿ ಸದ್ಗುರು ಗೋವಿಂದನಾಥನೆ ||೨||
* * * *