ದಿನಮಾನ ಬಲು ಕೆಟ್ಟವೋ

ದಿನಮಾನ ಬಲು ಕೆಟ್ಟವೋ ಸದ್ಗುರುಪುತ್ರ
ನಿನಗಾವು ಬಂದು ತಟ್ಟವೋ ||ಪ||

ಚಿನುಮಯಾತ್ಮಕವಾದ ಐದಕ್ಷರವು
ತನ್ನೊಳು ಜಪಿಸಿಕೊಂಡಿಹ
ಮನುಜರೂಪವ ಕಳೆದು ಮಹಿಮೆಯ
ತಿಳಿದ ಪುರುಷನಿಗೇನು ಆಗದು ||ಅ.ಪ||

ದೇಹದೊಳಿದ್ದರೇನು ಜೀವನ ಕಾಯ
ಲೋಹಕೆ ಬಿದ್ದರೇನು
ಸಾವುನೋವಿನ ಭಾವ ತಿಳಿಯದೆ
ಜಾವಕೊಮ್ಮೆ ಓಂ ನಮಃ ಶಿವಾಯೆಂದು
ಭಾವದಲಿ ನುಡಿಯೇ ಕಲಿಕರ್ಮದೊಳು ಮಹ-
ದೇವ ಮೆಚ್ಚುವ ಸತ್ಯ ಮಾತಿದು ||೧||

ವಿಷಯವಾಡಿದರೇನಾಯ್ತು ಈ ಲೋಕವು
ಹುಸಿಯನ್ನುವುದೇ ಗೊತ್ತು
ವಸುಧಿಯೊಳು ಶಿಶುನಾಳಧೀಶನ
ಎಸೆವ ಸೇವಕನಾಗಿ ಜಗದಿ
ಮಸಿದ ಪ್ರಣವಶಸ್ತ್ರ ಕೈಯೊಳು
ಕೊಸರದಂದದಿ ಹಿಡದು ನುಡಿಯಲು ||೨||

*****

 

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನಾರೆಂಬುದು ನಾನಲ್ಲಾ
Next post ಮೂಕನಾಗಿರಬೇಕೋ ಜಗದೊಳು

ಸಣ್ಣ ಕತೆ