Home / ಲೇಖನ / ಇತರೆ / ಧನಾತ್ಮಕ ನಿಲುವು

ಧನಾತ್ಮಕ ನಿಲುವು

ಪ್ರಿಯ ಸಖಿ,

ಬ್ರಿಟೀಷರೊಡನೆ ಭಾರತದ ಪರವಾಗಿ ವಾದ ಮಾಡಿ ಸ್ವಾತಂತ್ರ್ಯ ಪಡೆಯಲೆಂದು ದುಂಡು ಮೇಜಿನ ಗೋಷ್ಠಿಗಾಗಿ ಗಾಂಧೀಜಿ, ಹಡಗಿನಲ್ಲಿ ಅವರ ನಾಡಿಗೆ ಹೊರಟಾಗ, ಅವರ ಜೊತೆಗೆ ಹಡಗಿನಲ್ಲಿದ್ದ ಕೆಲವು ಬ್ರಿಟೀಷ್ ಜನರು ಗಾಂಧೀಜಿಯೊಡನೆ ಬೆಳಗು ರಾತ್ರಿ ಚರ್ಚಿಸುತ್ತಿದ್ದರು. ನಾವು ಭಾರತವನ್ನು ಬಿಟ್ಟು ಹೋದರೆ ಭಾರತಕ್ಕೆ ದುರ್ಗತಿ ತಪ್ಪಿದ್ದಲ್ಲ. ಆದ್ದರಿಂದ ನಾವು ನಿಮ್ಮನ್ನು ಆಳುವುದೇ ಕ್ಷೇಮ ಇತ್ಯಾದಿ ಮಾತನಾಡುತ್ತಿದ್ದರು. ಗಾಂಧೀಜಿಯವರೂ ನಮ್ಮ ದೇಶದ ಪರವಾಗಿ ನಿರಂತರವಾಗಿ ವಾದ ಮಾಡುತ್ತಿದ್ದರು.

ಕೊನೆಗೊಮ್ಮೆ ತಮ್ಮ ಪರವಾದವನ್ನೆಲ್ಲಾ ೪-೫ ಪುಟಗಳಷ್ಟು ನೋಟ್ಸ್‌ ಬರೆದು ಅದಕ್ಕೊಂದು ಗುಂಡುಸೂಜಿ ಚುಚ್ಚಿ ಆ ಆಂಗ್ಲ ಜನರು ಗಾಂಧೀಜಿಗೆ ನೀಡಿ ನಮ್ಮ
ವಾದವನ್ನೆಲ್ಲಾ ಇದರಲ್ಲಿ ಮಂಡಿಸಿದ್ದೇವೆ. ನಿಮಗೆ ಇದರಿಂದ ನಮ್ಮ ನಿಲುವು ಸ್ಪಷ್ಟವಾಗಬಹುದು. ಹಾಗೇ ಅದರಿಂದ ನಿಮ್ಮ ಮನಪರಿವರ್ತನೆಯಾಗಲು ಉಪಯೋಗ
ವಾಗಬಹುದು ಎಂದರು.

ಗಾಂಧೀಜಿ ಆ ನೋಟ್ಸನ್ನು ತೆಗೆದುಕೊಂಡರು. ಮಾರನೆಯ ದಿನ ಅವರಿದ್ದಲ್ಲಿಗೆ ಆಗಮಿಸಿದ ಆಂಗ್ಲರು ನಮ್ಮ ನೋಟ್ಸ್‌ ಓದಿದಿರಾ? ಎಂದರು. ಗಾಂಧೀಜಿ ಓದಿದೆ ಎಂದರು. ಅದಕ್ಕವರು ಹಾಗಿದ್ದರೆ ಅದರಲ್ಲಿ ನಿಮಗೆ ಏನಾದರೂ ಬೆಲೆಯುಳ್ಳದ್ದು ಇದೆ ಎನಿಸಿತೇ? ಎಂದು ಕೇಳಿದರು. ನಾನಾಗಲೇ ಬೆಲೆಯುಳ್ಳದ್ದನ್ನು  ತೆಗೆದಿರಿಸಿಕೊಂಡಿದ್ದೇನೆ ಎಂದು ಆ ನೋಟ್ಸಿಗೆ ಚುಚ್ಚಿದ್ದ ಹೊಸ ಗುಂಡು ಸೂಜಿಯನ್ನು ತೋರಿಸಿ ನಕ್ಕರು ಗಾಂಧೀಜಿ.

ಈ ಒಂದು ಪ್ರಸಂಗದಿಂದ ಗಾಂಧೀಜಿಯವರು ಎಷ್ಟೊಂದು ನಿಷ್ಟುರವಾದಿಗಳೂ, ದೇಶಪ್ರೇಮಿಗಳೂ ಆಗಿದ್ದರು ಎಂದು ತಿಳಿಯುವ ಹಾಗೆ ತಮಗೆ ಇಷ್ಟವಿಲ್ಲವೆನಿಸಿದ
ಸಂಗತಿಗಳಿಂದಲೂ ತಮಗೆ ಉಪಯೋಗಿಯಾಗುವಂತಹುದನ್ನು ತೆಗೆದುಕೊಳ್ಳುವ ಧನಾತ್ಮಕ ನಿಲುವು (Positive thinking) ಹೊಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಸಖಿ, ನಮ್ಮ ಬದುಕಿನಲ್ಲೂ ನಮಗೆ ಬೇಡವಾದ ಎಷ್ಟೊಂದು ಸಂಗತಿಗಳು ನಡೆಯುತ್ತಿರುತ್ತವೆ. ಬೇಡದ ವ್ಯಕ್ತಿಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಆಗೆಲ್ಲಾ ಮನಸ್ಸು ಕಹಿಯಾಗುತ್ತದೆ.  ಅದರೆ ಅಂತಹ ಕೆಡುಕಿನಲ್ಲೂ ಒಳಿತನ್ನು, ಧನಾತ್ಮಕ ನಿಲುವನ್ನು ನಾವು ಬೆಳೆಸಿಕೊಂಡರೆ ನಿಜಕ್ಕೂ ಬದುಕು ಸುಂದರವಾಗುತ್ತದೆ. ಕೆಟ್ಟದ್ದರಲ್ಲಿಯೂ ನಮಗೆ ಉಪಯೋಗವಾಗಬಲ್ಲ ಒಳಿತನ್ನು ಆರಿಸಿಕೊಳ್ಳುವುದೇ ನಿಜವಾದ ಜಾಣತನವಲ್ಲವೆ ಸಖಿ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...