ನಾ ಕಂಡೆನೀಗ ಶಾಕಾಂಬರಿಯಾ

ನಾ ಕಂಡೆನೀಗ ಶಾಕಾಂಬರಿಯಾ
-ಶಿಶುನಾಳ ಶರೀಫ್

ನಾ ಕಂಡನೀಗ ಶಾಕಂಬರಿಯಾ
ಶಾಂಬವಿ ಶಂಕರಿಯಾ ||ಪ||

ನಾಕದಿಂದಿಳಿದು ಭೂತಳದಿ ಭಕ್ತರನು
ನೀ ಕಾಯಬೇಕೆಂದೆನುತ ವಿಲಾಸದಿ
ಲೋಕಮಾತೆ ಜಗನ್ಮಾತೆ
ಚಾಕಲಬ್ಬಿ ಕೆರೆ ಪೂರ್ವಭಾಗದಲಿ ||೧||

ಸಿಂಹನೇರಿ ಗಮಿಸುವ ದೇವ
ವಾಹವ್ವರೆ ಮಮ್ಮಾಯಿ ಕ್ಲಿಂಬಿ
ಜಲಕ್ಷರಿ ಹಂಮಳೆ ಮಹಾಂಕಾಳಿ ||೨||

ಶುಂಭ ನಿಶುಂಭರ ಕುಲಸಂಹರಳೆ
ಅಂಬಿಕೇಶ ತ್ರಿಯಂಬಕನರಸಿಯೆ
ಇಂಬುಗೊಡದೆ ಎನ್ನಾತ್ಮ ತನುವಿನೊಳು ||೩||

ಶಿಶುನಾಳಧೀಶನ ಸೇವಕನಿಂದು ನಿನ್ನ ಸೇವೆಗೆ ಬಂದೆ
ಹಸಿತವಚನದಿಂ ಉಸುರುವೆ ಕವಿತವ
ಅಸಮಗಾತ್ರಿ ಶಶಿನೇತ್ರಿ ದಯಾನಿಧಿ
ರಸಿಕರಾಜಗೋವಿಂದನವನೊಡನೆ
ಹುಸಿ ಎಲ್ಲವು ನಿಜಬೋಧದಿ ಸ್ತುತಿಸುವೆ ||೪||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಹಿ ಪರಬ್ರಹ್ಮಣಿ ತ್ರಾಣಿ
Next post ದೇವಿ ನಿನ್ನ ಸೇವಕನೆಂದು

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…