ಪಾಹಿ ಪರಬ್ರಹ್ಮಣಿ ತ್ರಾಣಿ

ಪಾಹಿ ಪರಬ್ರಹ್ಂಣಿ ತ್ರಾಣಿ
ಪಾಹಿ ಪರಬ್ರಹ್ಮಣಿ                            ||ಪ||

ಸೇವಿತ ಕಿಂಕರ ಸದಾ ಪರಜೀವ ಸದ್ಗುರು ಭಾವನಾತ್ಮಳೆ
ದೇವಿ ಪರಾತ್ಪರ ಕಾಯ್ವುದೆನ್ನ ಸದಾವಕಾಲದಿ            ||೧||

ಶುಂಭ ನಿಶುಂಭ ಸಂಹಾರಿಣಿ ನಿಶುಂಭನ ಡಂಬ ಪರಿಹರಿಣಿ
ನಂಬಿ ನಿನ್ನ ಪಾದಾಂಬುಜಕೆ ಕೈ ಇಂಬುಗೊಟ್ಟೆನು ಕರುಣಿಸೆನುತಲಿ    ||೨||

ಶುಂಭರಾರಿಯ ಮನಕೆ ಮೈತುಂಬಿ ನಲಿಯುತ ನೊಲುಮೆಯಿಂದಲಿ
ಕಂಬುಕಂದರೆ ಭಕ್ತಪ್ರೇಮಿಯೆ ನಂಬಿದೆನು ಸದಾವ ಕಾಲದಿ            ||೩||

ವಸುಧೆಪಾಲಕಳೆ ನಿನ್ನ ಅಸಮ ಮಹಿಮೆಯ ಪೊಗಳುವೆ
ವಸುಧೆಯೊಳು ಶಿಶುನಾಳಧೀಶನ ಅಸಮ ಪಾದಕೆ ನುತಿಸಿ ಬೇಡುವೆ        ||೪||
*    *    *    *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನಾಪಮಾನ ನಿನ್ನವಮ್ಮಾ
Next post ನಾ ಕಂಡೆನೀಗ ಶಾಕಾಂಬರಿಯಾ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…