ದೇವಿ ನಿನ್ನ ಸೇವಕನೆಂದು

ದೇವಿ ನಿನ್ನ ಸೇವಕನೆಂದು ಸೇವೆ ಮಾಡುವೆನೆಂದು
ಇಂದು ನಿನ್ನ ಚರಣಗಳನ್ನು ಹೊಂದುವೆ ಒಂದು
ಮಂಮತಿ ನಿನ್ನ ಕಂದನಿಗೆ ಚಂದದಿ ಆನಂದದಿ ನಿನ್ನ
ಕಂದನೆಂದು ಸಲಹು ಇಂದು ||ಪ||

ಮಂಗಲಾಂಗಿ ಕುಂಡಲಾಭರಣಿ
ಪುಂಡ ದೈತ್ಯರನ ಖಂಡಿಸಿ
ಕಡಿದು ತುಂಡ ಮಾಡುತ
ಬಂಡ ಬರಿದೋಡ್ಯಾಡುತಿರೆ
ಡಿಂಡರನು ಚಂಡಾಡುತಿರೆ
ಮಂಡಲದಿ ಮಾನವರು ಮರುಳಾಗಿರೆ ||೧||

ದಶ ಎರಡು ಕರದೊಳು ಪಿಡಿದು
ಶೇಷ ಶಂಖ ಚಕ್ರಾಯುಧಗಳ ಹಿಡಿದು
ಅಷ್ಟದಶದಿಸೆದೊಳಗೆ ಮರೆದು
ಖಡ್ಗ ಕಠಾರಿ ನೀಟಾಗಿ ಹಿಡಿದು
ದಿಗ್ಗಿಲಿಂದ ಬರುವದು ಕಣ್ಣಿನ
ನಡ್ಗಿಗೆ ಮಡ್ಗವಿಸಿದೆ ಯಡ್ಗದರಸಿಗೆ
ಮಡ್ಗದಿ ಬಹು ಚೆಡ್ಗಿನ ಜ್ಙಾನ ನಿಡ್ಗದು ||೨||

ಅಷ್ಟದಿಕ್ಪಾಲಕರು ಎಲ್ಲಾ ನಿಂದು
ಶ್ರೇಷ್ಠದಧಿಪತಿ ನಾಂಟಿನೋಳ್ ನಿಂದು
ಕರಿಯ ಸಿಂಹಗ ವಿಘ್ನಯಷ್ಟೆಂದು
ಎಷ್ಟು ತಾಳಲಿ ದುಷ್ಟ ಮನುಜರ
ದೃಷ್ಟಿ ತೆರೆದು ನೋಡಲು ಇಂದು
ಸೃಷ್ಟಿಯೊಳು ಶಿಶುನಾಳಧೀಶನ
ಪುರದಿ ಮೆರೆಯುವ ಶ್ರೇಷ್ಠದೇವಿ ||೩||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾ ಕಂಡೆನೀಗ ಶಾಕಾಂಬರಿಯಾ
Next post ಹೌದೆ ನಮ್ಮವ್ವ ನೀನು ಹೌದೆ

ಸಣ್ಣ ಕತೆ

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…