ಮಾನಿನಿ ಮಾತಾಡಬ್ಯಾಡಮ್ಮಾ

ಮಾನಿನಿ ಮಾತಾಡಬ್ಯಾಡಮ್ಮಾ
ನೀ ಸುಮ್ಮನಿರು ಜಾಣ ಹೆಂಗಸರಾಟ ನೋಡಮ್ಮಾ || ಪ ||

ಕ್ಷೋಣಿಯೊಳಗತಿಗೇರಿ ಭಕ್ತರು ಪ್ರಾಣ ಮೂವರಿಗೊಬ್ಬ ಗುರು
ಕಲ್ಯಾಣದಯ್ಯನ ಮಾಡಿಸಿದ ಪೌರಾಣದೊಳು
ಪ್ರತಿ ಕಲಹವಾಯಿತು || ಅ. ಪ. ||

ಹರ ಶರಣ ಲೀಲಾಮೃತ ಕಥೆಯ ತೆರುದ್ಹೇಳುತಿರದರಿತು
ತಾ ಬ್ಯಾರೊಂದು ಸಂಗತಿಯ
ಕರಸಿದರು ಲಕ್ಷ್ಮೇಶ್ವರದ ಪೌರಾಣಿಕ ನರಮತಿಯ
ಮೆರೆವ ಬಸವೇಶ್ವರ ಲೀಲಾಮೃತ ಶರಧಿಯೋಳ್ ವಿಷಮಾತ್ರ
ಬೆರಸಿದ
ಮರುಳತನದ ಈ ಊರ ಗೌಡರಿಗೆ ಹಲವರು
ಅರಿಕೆಯಿಲ್ಲದಾಯಿತು || ೧ ||

ಓದುವರಕ್ಷರವ ಇದರೊಳಗೆ
ವೇದಾಂತಮಾರ್ಗದ ಹಾದಿ ತಿಳಿಯದು ಶಾಸ್ತ್ರಿಯೆಂಬುವಗೆ
ಸಾಧಿಸಿತು ಇನ್ನು ಕ್ರೋಧ ಅಂದಾನಯ್ಯ ಗದಿಗೆಯ್ಯಗೆ
ಹಾದಿ ತಿಳಿಯದೆ ಹೀಂಗ ಜಂಗಮರವರು ಬೈದಾಡುತಿರೆ
ಬಸವಾದಿ ಪ್ರಮಥರು ಮೆಚ್ಚಲರಿಯರು ಮೇದಿನಿಗೆ
ಮಹಾ ಚೋದ್ಯವಾಯಿತು || ೨ ||

ಏನನಲಿ ಈ ಗ್ರಾಮದ ಜನರು ಸನ್ಮಾನನರಿಯದ ಕಾನನದ
ಕಪಿ ಹಿಂಡಿನಂತಿಹರು
ಗಾನರಸದ ಮೇಳಕೆ ತಾವು ತಮ್ಮೊಳು ಕುಳಿತು ಕೇಳುವರು
ತಾನು ಶಿಶನಾಳೀಶ ಬಸವನ ಶೂನ್ಯ ಸಿಂಹಾಸನದ ವಿಸ್ತರ
ಹೀನ ಪಾಪಿ ಭವಿಗಳೊಡನೆ ಜ್ಞಾನಿಯಾದರೆ ನೀನು ಉಸುರದಿರು || ೩ ||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರಿಗೆ ಬಿಟ್ಟಿದ್ದು
Next post ಹಬ್ಬಿದ ಬಳ್ಳಿ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…