ನಿರೀಕ್ಷೆಯ ಸಸಿ ನೆಟ್ಟು
ಕ್ರಾಂತಿ ಋತು ಕೈಗೆತ್ತಿಕೊಂಡು
ಭವಿಷ್ಯದ ಭಾರೀ ನಿರೀಕ್ಷೆಯಲ್ಲಿರುವಾಗಲೇ
ಸುಟ್ಟು ಹೋದೆಯಲ್ಲೇ ಸುಧಾ-
ಮಹಿಳಾ ವರ್ಷದ, ಕನ್ನಡ ಜಾಗೃತಿ ವರ್ಷದ
ವೇಳಾಪಟ್ಟಿಯೊಳಗೆ ಸೇರುವ
ಸಾಧಿಸಿ ತೋರಿಸುವ ಛಲದ
ನಿನ್ನ ಕನಸುಗಳೆಲ್ಲಾ
ಮಣ್ಣಾಗಿ ಹೋದವಲ್ಲ ಸುಧಾ
ಬಿಡುಕ್ರೋಧ
ಅದೆಷ್ಟು ನಿರಾಸೆಯ ಮಾತುಗಳು
ತಿರು ತಿರುಗಿ ರೈಲು ಕಂಬಿ
ತುಂಬಿದ ಬಾವಿ. ನೇಣು
ಅದ್ಯಾಕೆ ಕಣ್ಣೀರು, ದ್ವೇಷ ಸೇಡು ಸಿಟ್ಟು
ಭಾವನೆಗಳು ಕೆರಳಿಸಿಕೊಳ್ಳುವಿಕೆ
– ಬಿಡು ಮಾತು
ಬೆಟ್ಟದಾಚೆಯ ಸೂರ್ಯ
ಕೈಗೆಟುಕದ ಕ್ರಾಂತಿಯೆಂದು
ಎಲ್ಲದಕ್ಕಿಂತಲೂ ಎಲ್ಲರಕ್ಕಿಂತಲೂ
ಚಂದ್ರ ಚಿಕ್ಕೆಗಳೇ ಸಮೀಪವೆಂದು
– ತೆಗದುಕೋ ಚಾಲೆಂಜ್
ಜಸ್ಟ್‌ ಶೂಟ್ ಶೂಟ್ ಶೂಟ್
ಒನ್ ಬಾಯ್ ಒನ್ ಯುವರ್
ಕಾಂಟ್ರೋವರ್ಸಿಯಲ್ ಥಾಟ್ಸ್‌
ಅಂಡ್ ಬಿಲ್ಡ್ ಅಪ್ ಯುವರ್ ಓನ್
ಸ್ಟ್ರಾಂಗ್ ಐಡಿಯಾಸ್
ಅಂಡ್ ಪರ್ಸನಾಲಿಟಿ
ಕಮಾನ್ ಸುಧಾ, ಚಿಯರ್ ಅಪ್.
*****