ಚಾಕ್ಲೇಟ್ ಜಗಳ

ಅಕ್ಕನ್ ನೋಡೋಕ್ ಭಾವ ಸದಾ
ಬರ್‍ತಾ ಇರ್‍ತಾರೆ,
ಅಕ್ಕ ಇಲ್ದೆ ಇದ್ರೆ ಸುಮ್ನೆ
ರೇಗಾಡ್ತಿರ್‍ತಾರೆ;
ಇದ್ಳು ಅಂದ್ರೆ ಖುಷಿಯಾಗ್ ನಮ್ಮನ್
ಅಪ್ಕೊಂಡ ಬಿಡ್ತಾರೆ!
ಚಾಕ್ಲೇಟ್ ತನ್ನಿ ಅಂತ ದೂರದ
ಅಂಗ್ಡೀಗ್ ಕಳಸ್ತಾರೆ.

ಬರೋ ಹೊತ್ಗೆ ಅಕ್ಕ ಭಾವ
ಇಬ್ರೂ ರೂಮಲ್ಲಿ
ಬಚ್ಚಿಟ್ಕೊಂಡು ಗುದ್ದಿ ಕಚ್ಚಿ
ಬಸುಗುಡ್ತಿರ್‍ತಾರೆ.
ನಗ್‌ನಗ್ತಾನೇ ಭಾರೀ ಜಗಳ
ಮೈ ಕೈ ಎಳಿತಾರೆ,
‘ಬಲು ಕೆಟ್ಟೋರು’ ಅಂತ ಅಕ್ಕ
ತಳ್ತಾ ಇರ್‍ತಾಳೆ.

ನಾನ್ ಬರತ್ಲೂ ಅಕ್ಕ ‘ಬಂದ್ವು’
ಅಂತ ಕೂಗ್ತಾಳೆ,
ಜಗಳ ನಿಲ್ಸಿ ದೂರ ಓಡಿ
ಮೂಲೇಲ್ ನಿಲ್ತಾಳೆ.
ಭಾವಂಗ್ ಸಿಟ್ಟು, ಜಗಳದ ಮಧ್ಯೆ
ಬಂದ್ರಲ್ಲ ಅಂತ,
ಬಯ್ತಾರ್‍ ನಮ್ಗೆ ‘ಒಡ್ಕಂಡ್ ಬಂದ್ರ
ಪೆದ್ ಮುಂಡೇವಾ’ ಅಂತ!

ಪಾಪ, ಭಾವಂಗ್ ಚಾಕ್ಲೇಟ್ ಕೊಡ್ರೊ
ಅಂತಾಳೆ ಅಕ್ಕ
“ಚಾಕ್ಲೇಟ್‌ಗೇಂತ ಜಗಳಾಡಿದ್ರು
ಇಷ್ಟೊತ್ತಿನ್ ತನಕ”;
ಅಕ್ಕ ಚಾಕ್ಲೇಟ್ ಇಸ್ಕಂಡ್ ತಾನೇ
ಭಾವನ್ ಮುಂದ್ಹಿಡಿದು
ತಗೊಳ್ಳಿ ಪಾಪ, ಅಂತಾಳೆ
ನಗ್ತಾ ಕೈಯೆಳೆದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೪೫
Next post ತುಂಟ ಬೀಗ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

cheap jordans|wholesale air max|wholesale jordans|wholesale jewelry|wholesale jerseys