ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಬಟ್ಟೆ

ಈ ಮಾನವನಿಗೆ ಮಲೇರಿಯಾ, ಕಾಲರಾ, ಅಥವಾ ಸೊಂಕುರೋಗಗಳು ಅನೇಕ ಬ್ಯಾಕ್ಟೀರಿಯಾಗಳಿಂದ ಬರುತ್ತದೆ ಎಂಬುದು ಸಹಜ. ಇಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯವುಳ್ಳ ಹೈಟೆಕ್ ಬಟ್ಟೆಗಳನ್ನು ಇತ್ತೀಚಿಗೆ ವಿಜ್ಞಾಗಳು ರೂಪಿಸಿದ್ದಾರೆ. ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದರ ಜತಗೆ ಎಲ್ಲರನ್ನು ಆಕರ್ಷಿಸಬಲ್ಲ ಅತ್ಯಧಿಕ ಪರಿಮಳಭರಿತ ಬಟ್ಟೆಗಳೂ ಇವಾಗಿವೆ.

ರೋಗಾಣುಗಳನ್ನು ಕೊಲ್ಲುವ ಶಕ್ತಿಯುಳ್ಳ ರಾಸಾಯನಿಕ ಘಟಕಗಳನ್ನು ಬಟ್ಟೆ ಉತ್ಪಾದಿಸುವ ಕೃತಕ ನೂಲುಗಳೊಂದಿಗೆ ಬೆರೆಸುವ ಮೂಲಕ ಈ ವಿಶಿಷ್ಟ ಬಗೆಯ ಬಟ್ಟೆಗಳು ತಯಾರಾಗುತ್ತವೆ. ಕೃತಕ ಪಾಲಿಮರ್‌ಗಳು ಇನ್ನೂ ದ್ರವ ರೂಪದಲ್ಲಿರುವಾಗಲೇ ಅವುಗಳಿಗೆ ಬ್ಯಾಕ್ಟೀರಿಯಾ ನಿರೋಧಕಗಳನ್ನು ಮಿಶ್ರಮಾಡಲಾಗುತ್ತದೆ. ಪಾಲಿಮಾರ್‌ಗಳು ತಣ್ಣಗಾದ ನಂತರ ಅವುಗಳನ್ನು ನೂಲಿನ ರೂಪಕ್ಕೆ ಪರಿವರ್ತಿಸಿ ಅವುಗಳಿಂದ ಬಟ್ಟೆಗಳನ್ನಾಗಿ ನೆಯ್ದಾಗ ಬ್ಯಾಕ್ಟೀರಿಯಾ ನಿರೋಧಕ ಅರಿವೆಗಳಾಗಿ ತಯಾರಾಗುತ್ತವೆ. ವಿಜ್ಞಾನಿಗಳ ವಿನ್ಯಾಸಗಳಿಂದ ತಯಾರಿಸಲ್ಪಟ್ಟ ಈ  ಬಟ್ಟೆಗಳು ಮನುಷ್ಯನ ಉಷ್ಣತೆಗೆ ಸ್ಪಂಧಿಸಬಲ್ಲವು. ಉಷ್ಣಶರೀರವಾಗಿದ್ದರೆ ಈ ಬಟ್ಟೆ ಧರಿಸಿದಾಗ ಮೈ ತಣ್ಣಗಾಗುತ್ತದೆ ಮಾತ್ರವಲ್ಲ ಹೃದಯದ ಬಡಿತವನ್ನು ಸರಿಪಡಿಸುವ ಸಾಧ್ಯತೆ ಇದೆ ಎಂದು ಅಮೇರಿಕಾದ ಹಾಲೋಸೋರ್ಸ್‌ ಕಂಪನಿಯ ತಜ್ಞರು ಪ್ರಯೋಗಗಳಿಂದ ಸಿದ್ಧಪಡಿಸಿದ್ದಾರೆ. ಬಟ್ಟೆ ತಯಾರಿಸುವ ಮೊದಲು ಹಾನಿಕಾರಕ ಸೂಕ್ಷ್ಮಾಣು ಜೀವಿ ನಿರೋಧಕ ಘಟಕಗಳನ್ನು ಹತ್ತಿಯೊಂದಿಗೆ ಬೆರೆಸಲಾಗುತ್ತದೆ. ಉದಾಹರಣೆಯಾಗಿ ಎನ್. ಹಾಲೋಮೈನ್ ಎಂಬ ಸೂಕ್ಷ್ಮಾಣು ಜೀವಿ ನಿರೋಧಕ ಮೂಲವಸ್ತು ಚರ್ಮದಲ್ಲಿ ದುರ್ವಾಸನೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಹಾಗೂ ಬೇರೆ ಬೇರೆ ವೈರಸ್‌ಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ಎನ್. ಹಾಲೋಮೈನ್‌ದಲ್ಲಿ ಕ್ಲೋರಿನ್ ಅಣುಗಳು ಒಳಗೊಂಡಿವೆ. ಯೀಸ್ಟ್ ಪಂಗೈ ಮುಂತಾದ ಮೈರಸ್ ಬ್ಯಾಕ್ಟೀರಿಯಾಗಳ ವಿರುದ್ಧ ಅದು ಹೆಚ್ಚು ಪರಿಣಾಮಕಾರಿಯಾಗಿದೆ. ಎನ್. ಹಾಲೋಮೈನ್‌ನಲ್ಲಿರುವ ಕ್ಲೋರಿನ್ ಅಣುಗಳು ಸಾಲ್ಮೋನೆಲ್ಲಾ ಇ.ಕೋಲಿ, ಸ್ಟಾಪಿಲೊಕ್ವಿಸ್ ಮುಂತಾದ ವೈರಸ್‌ಗಳ ಮೇಲೆ ಕ್ಷೀಪ್ರ ದಾಳಿ ಮಾಡಿಕೊಲ್ಲಬಲ್ಲವು ಎಂದು ಕಂಪನಿಯ ತಜ್ಞ ಜೆಪ್ರಿವಿಲಿಯಮ್ಸ್ ಹೇಳುತ್ತಾರೆ. ಇಂತಹ ಬಟ್ಟೆಗಳು ದೇಹದಲ್ಲಿಯ ಬೆವರಿನ ವಾಸನೆಗಳನ್ನು ಕಡಿಮೆ ಮಾಡುತ್ತವೆ. ಬ್ಯಾಕ್ಟೀರಿಯಾ ಸಂಹಾರಕ ಬಟ್ಟೆಗಳನ್ನು ಕ್ರೀಡಾಪಟುಗಳಿಗೆ ಆರೋಗ್ಯಕೇಂದ್ರದ ಕಾರ್ಯಕರ್ತರಿಗೆ, ಆಸ್ಪತ್ರೆ ರೋಗಿಗಳಿಗಾಗಿ ವಿನ್ಯಾಸಗೂಳಿಸಲಾಗಿದೆ.

ಇದು ಅಲ್ಲದೇ ಸೂರ್ಯನ ಬೆಳಕಿನಲ್ಲಿರುವ ಅಲ್ಟ್ರಾವಯೊರೆಟ್ ಕಿರಣಗಳು ಶರೀರದ ಚರ್ಮದ ಮೇಲೆ ಉಂಟು ಮಾಡುವ ಹಾನಿಕಾರಕ ಪರಿಣಾಮಗಳನ್ನು ನಿವಾರಿಸಬಲ್ಲ ಸಾಮರ್ಥ್ಯದ ಸೂಪರ್ ಬಟ್ಟೆಗಳನ್ನು ಫ್ರಾನ್ಸಿನ ಕೆಲವು ಕಂಪನಿಗಳು ವಿನ್ಯಾಸಗೊಳಿಸಿವೆ. ಮತ್ತು ಫ್ರಾನ್ಸಿನ ಡಿಮಾರ್ಟ್ ಕಂಪನಿಯ ಉಷ್ಣವನ್ನು ನಿಯಂತ್ರಿಸುವ ಜಾಕೆಟ್ಗಳನ್ನು ವಿನ್ಯಾಸಗೊಳಿಸಿದೆ. ಅಂಗಿಯ ಅರುವೆಯ ಮೇಲೆ ಆತಿಸೂಕ್ಷ್ಮವಾದ ಗುಳಿಗೆಗಳ ಲೇಪ ಹಚ್ಚಲಾಗಿದೆ. ಈ ಗುಳಿಗೆಗಳು ಸಾಮಾನ್ಯ ಉಷ್ಣತೆಯಲ್ಲಿ ಕರಗಿ ಶಾಖವನ್ನು ತಮ್ಮಲ್ಲಿ ಸಂಗ್ರಹಿಸಿಟ್ಟುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ. ಇದಕ್ಕೂ ಮಿಗಿಲಾಗಿ ಅತಿಸೂಕ್ಷ್ಮ ಗುಳಿಗೆಗಳನ್ನು ಬಳಸಿ ಪರಿಮಳಭರಿತ ಬಟ್ಟೆಗಳನ್ನು ದುರ್ವಾಸನೆ ನಿರೋಧಕ ಬಟ್ಟೆಗಳನ್ನು ವಿನ್ಯಾಸಗೊಳಿಸಿದೆ. ಇನ್ನೊಂದು ಕಂಪನಿಯು ದುರ್ವಾಸನೆಯನ್ನು ನಿವಾರಿಸಬಲ್ಲ ಒಳಚಡ್ಡಿಗಳನ್ನು ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. ಈ ಯೋಜನೆ ಸಧ್ಯದಲ್ಲಿಯೇ ಕಾರ್ಯರೂಪಕ್ಕೆ ಬರುತ್ತದೆಂದು ತಿಳಿಸಿದೆ. ಇಂಥಹ ಬಟ್ಟೆಗಳು ಉಟ್ಟು ಕೊನೆಗೊಂದು ದಿನ ಕೊಳೆಯಾದಾಗ ತೊಳೆಯಬೇಕಾಗುತ್ತದೆ. ಆಗ ಬ್ಯಾಕ್ಟೀರಿಯಾ ನಿರೋಧಕ ಶಕ್ತಿನಾಶವಾಗಬಹುದಲ್ಲವೆ? ಎಂಬ ಶಂಕೆ ಕಾಡುತ್ತದೆ. ಇದಕ್ಕೂ ಕೂಡ ಪರಿಹಾರವನ್ನು ವಿಜ್ಞಾನಿಗಳು ಕಂಡು ಹಿಡಿಯಲಿದ್ದಾರೆ.

ಒಟ್ಟಿನಲ್ಲಿ ಗುಂಡು ನಿರೋಧಕ, ಬಿಸಿಲು ನಿರೋಧಕ, ಚಳಿನಿರೋಧಕ ನೀರು ನಿರೋಧಕ ಬಟ್ಟೆಗಳನ್ನು ತಯಾರಿಸಿ ಈಗಾಗಲೇ ಬಹುತೇಕ ಯಶಸ್ವಿಯಾದ, ಹಿನ್ನಲೆಯಲ್ಲಿ ಈ ಬ್ಯಾಕ್ಟೀರಿಯಾ ನಿರೋಧಕ ಬಟ್ಟೆಗಳು ಅತ್ಯಂತ ಬೇಡಿಕೆಗೆ ಬರುವುದರಲ್ಲಿ ಸಂಶಯವಿಲ್ಲ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿನಾಮದ ಪಾನದ ರುಚಿ
Next post ದೂರಾ ದೇಶಕೆ ಹೋದಾ ಸಮಯದಿ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…