ಮಲೆನಾಡ ಸಮೃದ್ಧ ಗಿರಿರಾಜಿಯ ಪ್ರಶಾಂತ ಮೊಗದಲ್ಲಿ
ಹಿಮಾಲಯದ ಮೇಗಣ ಶುಭ್ರಾಭ್ರ ಮಂಜಿನ ತೆರೆತೆರೆ ತಲೆಮೇಲೆ
ಅಲ್ಲಿ ಕುಳಿತು ಬಂಗಾಳಕೊಲ್ಲಿ ಅರಬ್ಬಿ ಕೊಲ್ಲಿಗಳ
ಕಣ್ಣ ಕೋಲ್ಮಿಂಚು ತೂರುತ್ತವೆ
ಗಂಗೆಯಮುನೆಯರ ತೀರದನುಭವದಲೆಯಲೆ ಹಣೆಯಂದ,
ಎರಡು ಕೆನ್ನೆಗಳ ಕೂಡಿಸುವ ಸೇತು ಮೂಗಾಗಿ ಕುಳಿತು
ಭಾರತೀಯತೆಯನುಸಿರಾಡಿಸುತ್ತದೆ
ಮೌನದ ಮೀಸೆಯೊಳಗೆ ಮುಚ್ಚಿಕೊಂಡಿರುವ ಬಾಯಿ
ವಿಶ್ವಾತ್ಮನೊಡನೆ ಆಲಾಪ ಸಲ್ಲಾಪಿಸುವ ನಯ
ಹಾಗೆಯೇ ಕಾವ್ಯ ಧಾರೆ ಹರಿದಾಗ ಆಚೀಚೆ ಬಿಳಿನೊರೆ ನಿರಿಯ
ಚಿಮ್ಮುತ್ತಾ
ಕನ್ಯಾಕುಮಾರಿಯ ಭೂಶಿರಗಲ್ಲವೂ ಕಾಣದಾಗುವುದೂ ಒಂದು
ಸೊಬಗು
***