Home / ಕಥೆ / ಕಿರು ಕಥೆ / ಸಂಸಾರಿ

ಸಂಸಾರಿ

ಒಬ್ಬ ಸಂಸಾರಿ, ತಾಪತ್ರಯಗಳಲ್ಲಿ ಸಿಲುಕಿ, ನಾಲಿಗೆ ತುದಿಯಲ್ಲಿ “ಈಶ್ವರ! ಈಶ್ವರ! ಎನ್ನುತ್ತಿದ್ದ. ಇಪ್ಪತ್ತು ನಾಲ್ಕು ಘಂಟೆ ಅವನಿಗೆ ಸಂಸಾರದ ಗೋಳು. ಹೆಂಡತಿ ಮಕ್ಕಳ ಕಾಟ, ಭವದ ಬವಣೆ, ಬಾಯಲಿ ಮಾತ್ರ ಈಶ್ವರ ಭಕ್ತಿ, ಕರ್ಮಗಳನ್ನು ಮಾಡುತ್ತ ಫಲಾಪೇಕ್ಷೆಗಾಗಿ ಪರಿತಪಿಸುತ್ತಿದ್ದ. ಕರ್ಮಮಾಡುವಾಗ ಗೋಳಿಡುತ್ತಿದ್ದ. ಇದರೊಡನೆ ಈಶ್ವರ ಧ್ಯಾನ ಮಾಡಿದ್ದರು ಅವನ ಮನವು ಕರ್ಮಗಳ ಬಂಧನದಲ್ಲಿ ಸುತ್ತಿಕೊಂಡಿತ್ತು. ಅವನಿಗೆ ಯಾವ ರೀತಿಯ ನೆಮ್ಮದಿ, ಶಾಂತಿ ದೊರೆಯಲಿಲ್ಲ. ಸದಾ ಭವಸಾಗರದಿಂದ ಪಾರುಮಾಡು ಈಶ್ವರ ಎನ್ನುತ್ತಿದ್ದ. ಆದರೆ ಸಂಸಾರ ಕೂಪದಿಂದ ಮೇಲೆ ಏಳಲಾಗುತ್ತಿರಲಿಲ್ಲ.

ಅವನು ತನ್ನ ಮಿತ್ರನನ್ನು ನೋಡಿ ಯಾವಾಗಲೂ ಅಸೂಯೆ ಪಡುತ್ತಿದ್ದ. ಮಿತ್ರನಿಗೆ ಧ್ಯಾನ, ಧಾರಣ, ಸಮಾಧಿ ಯಾವುದೆಂದು ತಿಳಿಯದಿದ್ದರು ಅವನು ಝೆನ್ ಹೆಜ್ಜೆಯಿಟ್ಟು ನಡೆದಿದ್ದ. ಅತ್ಯಂತ ಸರಳ ಸಹಜತೆಯಲ್ಲಿ ದೈವಾರ್ಪಣದಲ್ಲಿ ಫಲಾಪೇಕ್ಷೆ ತೊರದಿದ್ದ. ಕರ್ಮ ವಿಮುಕ್ತನಾಗಿದ್ದ. ಈಶ್ವರ ಪ್ರಣಿಧಾನದಲ್ಲಿ ಶಾಂತಿ ಪಡೆದಿದ್ದ. ಸೂರ್ಯನ ಬೆಳಕಿನಲ್ಲಿ ಅರಳುವ ಹೂವಿನಂತೆ ಅವನ ಮನವು ಸಹಜತೆಗೆ ತೆರೆದುಕೊಂಡಿತ್ತು.

ಸಂಸಾರಿಗೆ ಮಿತ್ರನ ಬಾಳು, ದಾರಿ ತೋರಿತು. ಕೆಸರಿನಿಂದ ಕಮಲದಂತೆ ಮೇಲೆದ್ದಿತು. ಅವನ ಹೃದಯಿ, ಸಹಜತೆಯ ಗುಟ್ಟು ಸತ್ಯಕ್ಕೆ ದರ್ಶನ ಮಾಡಿಸಿತು.
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...