Home / ಕವನ / ಕವಿತೆ / ಕುಟೀರವಾಸಿ

ಕುಟೀರವಾಸಿ

ಕುಟೀರವಾಸಿ, ಬಂಧುನಿವಾಸಿ!
ಸೇರಿದ ದೇಗುಲ ಹೊತ್ತಿನಲಿ-
ಮಿನಿಗಿತು ಭಾನು, ಹೊಳೆಸಿತು ವಿದ್ಯುತ್;
ತಿಮಿರದ ತೀರದ ಕುಟೀರದಲಿ
ಗಗನದ ನೋಟದ ಮಲೆಶಿಖರ
ಥಳಥಳಿಸಿತು ವಿದ್ಯುತ್-ಮುಖರ.

ಕುಟೀರವಾಸಿ, ಬ೦ಧುನಿವಾಸಿ!
ಮೆರೆದನು ಭವನದ ಸನಿಹದಲಿ-
ಉದರಿತು ಹನಿಹನಿ, ಪ್ರಾಂಗಣದಿ;
ತಟನೀತೀರದ ಪ್ರಕೃತಿಯಲಿ;
ಜ್ವಲಿಸಿತು ಹಣತೆಯ ಕಿರುದೀಪ,
ಛಾಯಾರೂಪದ ಮಂಡಿತಭೂಪ.

ಕುಟೀರವಾಸಿ, ಬಂಧುನಿವಾಸಿ!
ನಡೆದನು ಭವನದ ಮಂಡಪದೆಡೆಗೆ-
ಕಿರುದೀವಿಗೆ, ಬೆಳೆಗಿತು ಪದತಲವ,
ದೇಗುಲ ಜ್ಯೋತಿಯ ಪ್ರಭೆಹೊಳೆಸಿ;
ಮೊಗದಲಿ ಪ್ರೌಢಿಮೆ, ಹಿರಿದಾಗಿತ್ತು;
ವಿಲಾಸ ವೈಭವ ತಲೆದೋರಿತ್ತು.

ಕುಟೀರವಾಸಿ, ಬಂಧುನಿವಾಸಿ!
ಮಣಿದನು ಮೂರ್ತಿಯಗೆದುರಾಗಿ-
ಭಕ್ತಿಪ್ರಭಾವದ, ಹೊಳೆಹರಿಸಿ;
ಸೌಮ್ಯದಮೂರ್ತಿ-ಶೈಲಕೀರ್ತಿ
ತೋರಿದ ಮೆಲುನಗೆ ವದನದಲಿ,
ವರ್ಧಿಸಿ ತಟನಿಯ ಸದನದಲಿ.

ಕುಟೀರವಾಸಿ, ಬಂಧುನಿವಾಸಿ!
ಎಣಿಸಿದ ಹೊರಡಲು ಅನುವಾಗಿ-
ಮೂಡಲ ಶಿಖರ ತೋರಿತು ವರ್ಣ;
ಉದಯದ ಸೊಬಗಿನ ಸ್ವರ್ಣವತೋರಿ,
ಶೈಲಮಿಂಚಿತು ಪ್ರಭಾತದ ನಡುವೆ;
ಹೊರಟನು ಗಾಮಿಯು ಭೂಷಣತಡುವೆ.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...