ಶ್ರೀ ವಿಠ್ಠಲ ಜಯವಿಠ್ಠಲ ಹೇ ರಖುಮಾಕಾಂತಾ
ಭ್ರಾಂತಿಯು ಹರಿಯಲಿ ನಮ್ಮದು, ಅಕ್ಷಯ್ಯ ಶಾಂತಾ || ಜಯದೇವ ||
ಚಂದ್ರಭಾಗೆಯು ಬಂದು ಕೂಡಲು ಭೀಮೆಯನು
ಅಲ್ಲಿ ಕಟ್ಟಿದೆ ನಿನ್ನ ಭಕ್ತಿಯ ಸೀಮೆಯನು
ಭಕ್ತರಿಗಾಗವತರಿಸಿದೆ ನೀನೋ ನಿಃಸಂಗ
ಮಾನವರೊಲು ಕಂಡರು ನೀ ನಿಂತಿಹೆ ಅಭಂಗ || ಜಯದೇವ ||
ಭೇದಾಽಭೇದವೆಂದು ವಿರೋಧವು ಎದ್ದು
ಸಮಷ್ಟಿ ಒಡೆದಿದೆ ದ್ವೇಷನೆ ಗೆದ್ದು
ವ್ಯಕ್ತಿ ಭಕ್ತಿಯ ದೃಷ್ಟಿಯಿಂದ ಜೋಡಿಸುವೆ
ಕರ್ಣಾಟಕ, ಮಹಾರಾಷ್ಟ್ರವ ಒಂದು ಗುಡಿಸುವೆ || ಜಯದೇವ ||
ನಿನ್ನ ನಾಮದಲ್ಲೂ ಭಕ್ತರದೇ ಕೀರ್ತೀ
ನಿನ್ನ ಧ್ಯಾನದಲ್ಲಿ ಜೀವನ ಸ್ಫೂರ್ತಿ
ನಿನ್ನ ದರ್ಶನದಲ್ಲಿ ಕಂಡೆವು ಸುಖಧಾಮ
ನಿನ್ನ ಯೋಗದಲ್ಲಿ ಸಂಸಾರ ಕ್ಷೇಮ || ಜಯದೇವ ||
*****

















