ಊರೂರಿಗೆ ಚ್ಯಾ-ಪಾಣಿ
ತಂಬಾಕದ ಹೊಗೆಯು.
ಬತ್ತಲಾಟ ಕತ್ತಲಾಟ
ಸಿನೇಮಾದ ಸಂತೆ
ಹರಟಲಿಕ್ಕೆ ಹಾರ ಸುದ್ದಿ
ಹಿಂದೆ ಕುಂಟ ಬುದ್ಧಿ
ಹೇಸಿ ರೋಸಿ ಓಸಿಯಾಟ
ಕಳ್ಳ-ಭಟ್ಟಿ ಕುಡಿತ
ಸಿಲೋನ್ ಗೀತ ಕಿವಿಗೆ ಹಿತ
ಕೈಗೆ ಮೈಗೆ ತಾಲ.
ತುಡುಗರಾರೊ? ಲೋಭಿ ಯಾರೂ?
ಲಂಚವೆಂದರೇನೋ?
ನ್ಯಾಯ ಮತ್ತನ್ಯಾಯವೇನೊ?
ಹೊಡಿ ಮುಂದೆ ಗಾಡಿ
ಬೇಡ ಹಳೆಯ ರಾಡಿ
ಹೀಗಂದರು ತಪ್ಪು
ಹಾಗೆಂದರು ಬೆಪ್ಪು
ಬಂತಣ್ಣ ಪಂಚಾಯತಿ
ಇದು ಹಿಟ್ಲರ-ಹೆಜ್ಜಿ,
ಅವರವರಾ ಕೈಯಿಂದಲಿ
ಅವರಾ ತಲೆ ಜೆಜ್ಜಿ
ಬಲಿ ಬಂದನು ಕಲಿ ಬಂದನು
ಸತ್ಯಾಗ್ರಹವೆಂದು
ಆ ಸತ್ಯವು ಎಲ್ಲಿತ್ತೋ
ಆಗ್ರಹವೇ ಕುಣಿದಿತ್ತು
ನವ ಅಶ್ವತ್ಥಾಮ.
ದುರ್ಯೋಧನನೂ ಸತ್ತನು
ದುಃಶಾಸನ ಸತ್ತ
ಅಪಶಕುನದ ಶಕುನಿಯದೋ
ತಾನೂನೂ ಸತ್ತ
ಎಲ್ಲರಿಗಾಗಿಯು ಕರ್ಣನು
ತಾನೊಬ್ಬನೆ ಅತ್ತ.
ಲೌಡ ಸ್ಪೀಕರ ಕೇಳಿ ಲಂಬ ಕರ್ಣ
ಮುಗಿಲಿಗೇ ದನಿ ಎತ್ತಿದೆ.
ಹೇಳಿದ್ದೇ ಹೇಳಬೇಕು
ಕೇಳಿದ್ದೇ ಕೇಳಬೇಕು
ಸಂಸಾರ ಹೀಂಗೈತಿ
ನಾರ್ ಐತಿ
ಗಟಾರ್‌ನೂ ಐತಿ
ಯಾರಿಲ್ಲಂದಾರು….?
ಅದೇ ಬಿಗಿ ಬಂದೈತಿ.
*****

















