ಕೊಪ್ಪಳ ಸಮೀಪದಲ್ಲಿ ಭಾಗ್ಯ ನಗರವಿದೆ. ಅಲ್ಲಿ ವಿನಯ ವೀರೇಶ ಸವಡಿ ಎಂಬ ನಾಲ್ಕು ವರ್‍ಷದ ಬಾಲಕನಿದ್ದಾನೆ. ಮನೆಯಲ್ಲಿ ಕನ್ನಡ, ಶಾಲೆಯಲ್ಲಿ ಕನ್ನಡ, ಸ್ನೇಹಿತರೂ ಕನ್ನಡ ಮಾತನಾಡುವರು. ಶಾಲೆಯಲ್ಲಿ ನೆರೆಹೊರೆಯವರೂ ಕನ್ನಡ ಮಾತನಾಡುವರು. ಈ ಬಾಲಕನ ಅಣ್ಣ ವಿಕಾಸ ವೀರೇಶ ಸವಡಿಗೂ ಕನ್ನಡ ಮಾತ್ರ ಬರುವುದು. ತಾಯಿಗೆ ಕನ್ನಡ ಮಾತ್ರ ಗೊತ್ತಿರುವುದು, ತಂದೆ-ವೀರೇಶ ಸವಡಿಗೆ ಅಲ್ಪ ಸ್ವಲ್ಪ ಹಿಂದಿ ಗೊತ್ತು ! ಅಷ್ಟು ಬಿಟ್ಟರೆ ಯಾರಿಗೂ ಹಿಂದಿಯ ಗಂಧ ಗಾಳಿಯೇ ತಿಳಿಯದು ! ಆದರೆ.. ವಿನಯ ವೀರೇಶ ಸವಡಿ ಮಾತ್ರ ಮಾತನಾಡುವುದು ಹಿಂದಿಯಲ್ಲಿ. ಕನ್ನಡವೆಂದರೆ… ಅರ್‍ಥವಾಗದು… ಹೇಗಿದೆ ವಿನಯ ವೀರೇಶ ಸವಡಿಯ ಪೂರ್ವಜನ್ಮದ ಸುಕೃತ ಫಲ…??
ಯಾವುದೇ ಮಗು ಹುಟ್ಟಿದ ವರ್ಷದೊಳಗೆ ಮಾತನಾಡಲು ಶುರು ಮಾಡುತ್ತದೆ. ಆದರೆ.. ವಿನಯ ವೀರೇಶ ಸವಡಿ ಸುಮಾರು ಎರಡೂವರೆ ವರ್ಷ ಕಳೆದರೂ ಬರೀ ತೊದಲು ಮಾತನ್ನು ಕೂಡಾ ಆಡಿಲ್ಲ. ಇದು ಮನೆಯವರಿಗೆಲ್ಲ ಭಾರೀ ತಲೆನೋವು ತಂದಿತ್ತು. ಬರುಬರುತ್ತಾ ಮೂರನೆಯ ವರ್ಷಕ್ಕೆ ತೊದಲು ನುಡಿ ಮೊದಲ ನುಡಿ ಮೊದಲಾಯಿತು! ಅಮ್ಮಾ ಎಂದರೆ- ಆಯಿ, ಅಪ್ಪ ಎಂದರೆ ಅಬ್ಬ, ಹೋಗು ಎಂದರೆ- ತು ಜಾವ್, ಊಟಕ್ಕೆ ಬಾರೋ ಎಂದರೆ ಖಾನಾ ರೆಡಿ ಹೈ ? ಎನ್ನುವ.
ಇವರು ಕನ್ನಡ ಎಂದರೆ- ಬಾಲಕ ಮಾತ್ರ ಹಿಂದಿ ನುಡಿವ. ಟೀವಿ ಪ್ರಭಾವವಿಲ್ಲ. ಪರಿಸರ ಒತ್ತಡವಿಲ್ಲ. ಬಾಲಕ ಹಿಂದಿಯಲ್ಲಿ ಉತ್ತರಿಸುವ ಈಗಾಗಲೇ ಬಳ್ಳಾರಿ ಆಸ್ಪತ್ರೆಗೆ ಅಂಡಲೆದಿದ್ದು ಆಯಿತು. ಪರಿಹಾರವಿಲ್ಲ. ಮನೋವೈದ್ಯರು ಭಾಷಾ ವಿಜ್ಞಾನಿಗಳಿಗೆ ಈ ಬಾಲಕನಿಂದು ಸವಾಲಾಗಿದ್ದಾನೆ! ಈ ಬಾಲಕನ ಮಾತಿನ ರಹಸ್ಯ ಭೇದಿಸಲು ಇನ್ನು ಯಾರಿಗೆ ಸಾಧ್ಯವಾಗುತ್ತಿಲ್ಲ. ಹಿಂದಿನ ಜನ್ಮ ರಹಸ್ಯನೂ ಇರಬಹುದೇನೋ.. ಸಾವಿರಕ್ಕೆ ಒಬ್ಬರು ಈ ರೀತಿ ಅಚ್ಚರಿ ಮೂಡಿಸಲು ಸಾಧ್ಯವಿದೆಯೆಂಬುದನ್ನು ಯಾರೂ ತಳ್ಳಿ ಹಾಕುವಂತಿಲ್ಲ.
ಏನೇ ಇರಲಿ ಎಂತ ಮಾತನಾಡಲಿ ಎನಯ ವೀರೇಶ ಸವಡಿಯ ಮಾತಿನ ಮರ್‍ಮ ಇಂದಲ್ಲ ನಾಳೇ ಬೆಳಕಿಗೆ ಬಂದೇ ಬರುವುದು! ಬರುಬರುತ್ತಾ ಬೆಳೆಬೆಳೆಯುತ್ತಾ ಸದರಿ ಬಾಲಕನೇ ಮಾತಿನ ಮರ್ಮ ಹೊರಗೆಡುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗದು.
ನಾವು ನೀವು ಎಲ್ಲರೂ ಕಾದು ನೋಡೋಣವಲ್ಲವೇ??
*****


















