Home / ಲೇಖನ / ವಿಜ್ಞಾನ / ಮುಪ್ಪನ್ನು ಮುಂದೂಡವಲ್ಲಿ ಸಫಲರಾದ ವಿಜ್ಞಾನಿಗಳು

ಮುಪ್ಪನ್ನು ಮುಂದೂಡವಲ್ಲಿ ಸಫಲರಾದ ವಿಜ್ಞಾನಿಗಳು

ಮುಪ್ಪು ಯಾರಿಗೆ ತಾನೆ ಇಷ್ಟ? ಯಾವ ಕಾಲದಲ್ಲಿಯೂ ತಾರುಣ್ಯದಿಂದಲೇ ಇರಬೇಕೆಂಬ ಅಭಿಲಾಷೆ ಈ ಮಾನವನದ್ದು ಪೌರಾಣಿಕ ಕಾಲದಲ್ಲಿ ಮಂತ್ರಶಕ್ತಿಯಿಂದ ಮಾಯವಾಗುವುದು. ಮುದುಕ ಯುವಕನಾಗುವುದು, ಗಂಡು ಹೆಣ್ಣಾಗುವುದು ಸರ್ವೆಸಾಮಾನ್ಯ. ಇವೆಲ್ಲ ವೈಜ್ಞಾನಿಕವಾಗಿ ದೂರವಾದವುಗಳು. ಆದರೆ ವಾಸ್ತವವಾಗಿ ವೈಜ್ಞಾನಿಕವಾಗಿ ಸದಾ ತಾರುಣ್ಯದಲ್ಲಿಯೇ ಇರಬೇಕೆನ್ನುವುದು ವಿಜ್ಞಾನಕ್ಕೆ ಸಂಶೋಧನೆಗೆ ಬಿಟ್ಟ ವಿಷಯವಾಗಿದೆ. ಹಾಗೆ ನೋಡಿದರೆ ‘ಕ್ಲೋನಿಂಗ್’ ವಿಷಯ ಬಂದಾಗ ಮರುಸೃಷ್ಟಿ ಸಾಧ್ಯವೆಂದಾದರೂ ಈ ವಯಸ್ಸನ್ನು ಇಳಿಗೊಳಿಸದಿರುವುದು ಅಸಾಧ್ಯದ ಮಾತೆಂದು ಎಲ್ಲರೂ ಭಾವಿಸಿದ್ದರು. ಅಮೇರಿಕದ ಹೊಸ್ಟನ್ನಿನಲ್ಲಿ ಮಿಲ್ಲರ್ ಕ್ಯಾರ್ಲ್ಸ್ ಎಂಬ ೮೧ ವರ್ಷ ವಯೋವೃದ್ಧ ಸದಾ ಯವ್ವನಾವಸ್ಥೆಯಲ್ಲಿಯೇ ಇರಬೇಕೆಂದು ಬಯಸಿ ತನ್ನ ಜೀವಿತಾವಧಿಯಲ್ಲಿಯೇ ಮುಪ್ಪನ್ನು ಬರದಿರುವಂತೆ ಮಾಡುವ ಸಂಶೋಧಕರಿಗೆ ೧ ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ೧೯೯೯ ರಲ್ಲಿ ಘೋಶಿಸಿದ ನಂತರ ಕ್ಯಾರ್ಲ್ಸ್ ಅವರ ಸತತ ಪ್ರಯತ್ನಗಳ ದೆಸೆಯಿಂದ ಹಲವಾರು ವಿಜ್ಞಾನಿಗಳು ರೇಗಾನ್ ಕಾರ್ಪೊರೇಶನ್ ಎಂಬ ವಿಜ್ಞಾನದ ಸಂಸ್ಥೆಯನ್ನು ಕಟ್ಟಿದರು. ಈ ಸಮಿತಿಯಲ್ಲಿ ಪ್ರಖ್ಯಾತ ವೈದ್ಯ ವಿಜ್ಞಾನಿಗಳು ಅಣು ಜೀವಿ ವಿಜ್ಞಾನಿಗಳು, ಪೋಷಕಾಂಶ ಪರಿಣಿತರು ವ್ಯಾಯಾಮ ಪಂಡಿತರು ಮುಂತಾದ ವಿವಿಧ ಕ್ಷೇತ್ರಗಳ ೧,೦೦೦ ಕ್ಕೂ ಹೆಚ್ಚು ಜನ ವೃದ್ಧಾಪ್ಯವನ್ನು ಹಿಮ್ಮೆಟ್ಟಿಸುವ ಸಂಶೋಧನೆಯಲ್ಲಿ ತೊಡಗಿದರು. ಕೊನೆಗೊಂದು ದಿನ ಫ್ರಾನ್ಸಿನ ಕ್ರಿಸ್ ಜತೆಗೂಡಿ D.N.A. ಅಣು ವಿನ್ಯಾಸ ಪತ್ತೆಮಾಡಿದ ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ|| ಜೇಮ್ಸ್ ವಾಟ್ಸನ್ ಸಲಹಾ ಮಂಡಲಯಲ್ಲಿರುವ ಗೇರಾನ್ ಕಾರ್ಪೋರೇಶನ್ನಿನ ಪ್ರತಿಭಾವಂತ ವಿಜ್ಞಾನಿ ಡಾ|| ಮೈಕ್ ವೆಸ್ಟ್ ವೃದ್ಯಾಪ್ಯಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಅನ್ವೇಷಣೆಯ ಬಗೆಗೆ ಬೆಳಕು ಚಲ್ಲಿದರು. ನಮ್ಮ ದೇಹದಲ್ಲಿ ೧೦೦ ಟ್ರಿಲಿಯನ್ ಜೀವಕೋಶಗಳಿದ್ದು ಈ ಜೀವಕೋಶಗಳು ಅಮರವಾದರೆ ನಮ್ಮದೇಹವು ಅಮರವಾಗುತ್ತದೆ. ಈ ಜೀವಿಕೋಶಗಳ ಅಮರತ್ವವನ್ನು “ಹೆಪ್ಲಿಕ್ ಮಿತಿ” ಎಂಬ ಸರಳ ನಿಯಮವೊಂದು ರೂಪಿಸುತ್ತದೆ.

ನಮ್ಮ ದೇಹದ ಅಂಗಾಂಗಗಳಿಂದ ತೆಗೆದ ಜೀವಕೋಶಗಳನ್ನು ಪ್ರಯೋಗ ಶಾಲೆಯಲ್ಲಿ ಬೆಳಸಿದಾಗ ಅವು ಸು. ೫೦ ಬಾರಿ ವಿಭಜನೆಯಾಗುತ್ತವೆ. ಈ ಮಿತಿ ಅಂಗಾಂಶಗಳನ್ನು ಆಧರಿಸಿ ಬದಲಾಗುತ್ತದೆ. ಈ ಮಿತಿಯನ್ನು ದಾಟಿದ ನಂತರ ಕೋಶವಿಭಜನೆ ನಿಂತು ಜೀವಕೋಶಗಳಿಗೆ ಮುಪ್ಪು ಬರುತ್ತದೆ. ಈ ನಿಯಮವನ್ನು ಪ್ರತಿಪಾದಿಸಿದ ಕ್ಯಾಲಿಫೋರ್ನಿಯಾದ ವಿ.ವಿ.ಯ ವಿಜ್ಞಾನಿ ಡಾ|| ಹೆಪ್ಲಿಕ್ ಹೇಳುವಂತೆ ಜೀವಕೋಶದಲ್ಲಿರುವ D.N.A. ಸರಪಳಿಯಲ್ಲಿ ‘ಟೆಲೋಮಿರ್’ ಎಂಬ ಭಾಗವಿದೆ. ಷುಲೇಸ್ನ ಎರಡೂ ತುದಿಯಲ್ಲಿರುವ ಪ್ಲಾಸ್ಟಿಕ್ ಕವಚದಂತಿರುವ ಟೆಲೋಮಿರ್ ಭಾಗದ ಉದ್ದ ಪ್ರತಿಭಾರಿ ಜೀವಕೋಶ ವಿಭಜನೆಗೂಂಡಾಗಲೂ ಕಡಿಮೆಯಾಗುತ್ತದೆ. ಈ ಉದ್ದ ಒಂದು ನಿರ್ದಿಷ್ಟ ಮಿತಿಗೆ ಬಂದ ಕೂಡಲೇ ವಿಭಜನೆ ನಿಲ್ಲುತ್ತದೆ. ಟೆಲೋಮಿರನ ಉದ್ದಕ್ಕೂ ಜೀವಕೋಶಗಳ ಸಾವಿಗೂ ಖಚಿತವಾದ ಸಂಬಂಧವಿರುವುದು ಈಗ ಸ್ಪಷ್ಟವಾಗಿದೆ. ಎಲ್ಲ ಜೀವಕೋಶಗಳಲ್ಲಿಯೂ ಟೆಲೋಮಿರೇಟ್ ಎಂಬ ವಂಶವಾಹಿ ಇದ್ದು ಇದು ಟೆಮಿಮಿರ್ ಭಾಗದ ಉದ್ದವನ್ನು ಮತ್ತೊಮ್ಮೆ ಮೊದಲಿನಂತೆ ಮಾಡಿ ಮುಪ್ಪಡರಿದ ಜೀವಕೋಶಗಳನ್ನು ಹಿಂದಿನ ಯೌವ್ವನಾವ್ಯವಸ್ಥೆಗೆ ತರಬಲ್ಲದು.

ಡಾ|| ಹೆಸ್ಕ್ ಅವರೊಂದಿಗೆ ಸಂಶೋಧನೆಯಲ್ಲಿ ನಿರತರಾಗಿರುವ ಡಾ|| ವುಡ್‌ರಿಂಗ್ ರೈಟ್ ಮತ್ತು ಡಾ || ಚೆರಿಶೇ ಅವರುಗಳು ಈದೀಗ ಈ ಸುಪ್ತವಾದ ಜಡಾವಸ್ತೆಯ ವಂಶವಾಹಿನಿಯನ್ನು ಇನ್ನಿತರ ಜೀವಕೋಶಗಳಲ್ಲಿ ಸೇರಿಸಿ ಆ ಜೀವಕೋಶಗಳು ಹೆಪ್ಲಿಕ್, ಮಿತಿಯನ್ನು ದಾಟಿ ನಿರಂತವಾಗಿ ವಿಭಜನೆಯಾಗುವಂತೆ ಮಾಡಲಾಗಿದೆ. ಸಾವಿನ ಅಂಚಿಗೆ ಬಂದಿದ್ದ ಅಂಗಾಂಶವೊಂದರ ಜೀವಕೋಶಗಳನ್ನು ಮತ್ತೊಮ್ಮೆ ಹಿಂದಿನ ಯೌವನವಸ್ಥೆಗೆ ತರುವಲ್ಲಿ ಈ ತಂಡ ಸಂಪೂರ್ಣದಾಗಿ ಯಶಸ್ವಿಯಾಗಿದೆ. ಜೀವಕೋಶದ ಹಂತದಲ್ಲಿ ಇಂದು ಸಾಧ್ಯವಾಗಿರುವ ಅಮರತ್ವ, ಮುಂದೆ ಜೀವಿಯ ಮಟ್ಟದಲ್ಲೂ ಸಾಧ್ಯವಾಗಬಹುದು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...