ಆದಿನ ನಮ್ಮೂರ ಬಯಲಿನಲ್ಲಿ
ನಡೆಯಲಿತ್ತು ತಾಳಮದ್ದಲೆ
ಚಿಕ್ಕಮಕ್ಕಳಿಂದ ವೃದ್ಧರವರೆಗೂ
ಎಲ್ಲರ ಗಮನ ಅತ್ತಲೆ
ತಾಳ ಮದ್ದಲೆಯ ಬಗೆಗೆ
ಊರವರ ಪಿಸುಮಾತು
ನನಗೂ ಆಸೆ ಹುಟ್ಟಿತು
ತಾಳ ಮದ್ದಲೆ ಕೇಳುವ ಕುರಿತು
ಆಸೆಯಿಂದ ಹಿಡಿದೆ ತಾಳ ಮದ್ದಲೆ
ನಡೆಯುವ ಬಯಲಿನ ಹಾದಿ
ಹೋಗಿ ಕಿವಿಯರಳಿಸಿ ಕುಳಿತೆ
ಸಭೆಯ ಒಂದು ಬದಿ
ಆ ದಿನ ಕೈಕೊಟ್ಟಿತು
ಭಾಗವತರ ಗಂಟಲು
ಆದುದರಿಂದ ಅವರ
ಸ್ವರವೆಲ್ಲಾ ಬರೀ ಕೀರಲು
ಭಾಗವತರೇನೋ ಹಾಡುತ್ತಿದ್ದರು
ಕೈಗೆಟುಕಿದಂತೆ ಸ್ವರ್ಗ
ಪರಿಹಾಸ್ಯ ಮಾಡುತ್ತಿತ್ತು
ಕುಳಿತಿದ್ದ ಪ್ರೇಕ್ಷಕ ವರ್ಗ
ಅಂತೂ ಆ ದಿನದ
ತಾಳ ಮದ್ದಲೆ ಹೇಗೋ ಮುಗಿದಿತ್ತು
ಒಳ್ಳೆಯ ತಾಳ ಮದ್ದಲೆ ಕೇಳಲು
ಆಗಲಿಲ್ಲವೆಂಬ ನಿರಾಶೆ ಮೂಡಿತ್ತು.
*****

















